Gujarat Plane Crash; ವಿಮಾನ ಟೇಕಾಫ್ ಆಗುತ್ತಿದ್ದಂತೆಯೇ ಪೈಲಟ್​ಗಳು ಮೇಡೇ ಎಂದು ಕಾಲ್ ಮಾಡಿದ್ದಾರೆ: ಪ್ರದೀಪ್ ಈಶ್ವರ್

Updated on: Jun 13, 2025 | 6:40 PM

ವಿಮಾನ ದುರಂತದಲ್ಲಿ ಗುಜರಾತಿನ ಮಾಜಿ ಮುಖ್ಯಮಂತ್ರಿ ವಿಜಯ ರೂಪಾನಿ ಅವರೂ ಮರಣಿಸಿದ್ದಾರೆ, ಅವರ ಅತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಅಗಲಿಕೆ ನೋವನ್ನು ಭರಿಸಲು ಕುಟುಂಬಕ್ಕೆ ಭಗವಂತ ಶಕ್ತಿ ದಯಪಾಲಿಸಲಿ, ಇದು ರಾಜಕೀಯ ಮಾಡುವ ಸಂದರ್ಭ ಅಲ್ಲ, ಇನ್ನೂ ಅನೇಕ ಜನ ಮಡಿದಿದ್ದಾರೆ, ಎಲ್ಲರ ಆತ್ಮಕ್ಕೂ ಶಾಂತಿ ಸಿಗಲಿ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ಚಿಕ್ಕಬಳ್ಳಾಪುರ, ಜೂನ್ 13: ಅಹಮದಾಬಾದ್​ನಲ್ಲಿ ಗುರುವಾರ ಏರ್ ಇಂಡಿಯ ವಿಮಾನ ಪತನಗೊಂಡು ಸಂಭವಿಸಿದ ದುರಂತದ ಬಗ್ಗೆ ಮಾತಾಡಿದ ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ (Pradeep Eshwar), ಬಹಳ ನೋವಿನ ಸಂಗತಿ ಇದು, ಹಿಂದೊಮ್ಮೆ ಇದೇ ವಿಮಾನದಲ್ಲಿ ತಾಂತ್ರಿಕ ದೋಷ ಎದುರಾಗಿತ್ತು ಅಂತ ಹೇಳಲಾಗಿದೆ, ಅಷ್ಟಾಗಿಯೂ ಅದನ್ನು ಯಾಕೆ ವಿಮಾನಯಾನಕ್ಕೆ ಬಳಸಿಕೊಳ್ಳುತ್ತಿದ್ದರೋ ಅಂತ ಗೊತ್ತಾಗುತ್ತಿಲ್ಲ ಎಂದು ಹೇಳಿದರು. ವಿಮಾನ ಟೇಕಾಫ್ ಆದ ನಂತರ ಪೈಲಟ್ ಗಳು ಮೂರು ಸಲ ಮೇಡೇ ಅಂತ ಕಿರುಚಿದ್ದಾರಂತೆ, ಅದು ಫ್ರೆಂಚ್ ಭಾಷೆ, ಅದರರ್ಥ ಸಹಾಯ ಮಾಡಿ ಅಂತ, ಅಂದರೆ ಟೇಕಾಫ್ ಆಗುತ್ತಿದ್ದಂತೆಯೇ ವಿಮಾನದಲ್ಲಿ ಸಮಸ್ಯೆ ತಲೆದೋರಿದೆ ಎಂದು ಈಶ್ವರ್ ಹೇಳಿದರು.

ಇದನ್ನೂ ಓದಿ:  Fact Check: ಇದು ಅಹಮದಾಬಾದ್ ವಿಮಾನ ಅಪಘಾತಕ್ಕೆ ಸ್ವಲ್ಪ ಮುಂಚಿನ ವಿಡಿಯೋವೇ?, ಸತ್ಯ ಇಲ್ಲಿ ತಿಳಿಯಿರಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Jun 13, 2025 06:37 PM