PM Modi in Mysuru: ಯೋಗದ ಪ್ರತಿಯೊಂದು ಆಸನವನ್ನು ಪ್ರಧಾನಿ ನರೇಂದ್ರ ಮೋದಿ ನಿರಾಯಸವಾಗಿ ಮಾಡಿದರು!
ಅವರ ಜೊತೆ ಯೋಗ ಮಾಡುತ್ತಿರುವವರು ಪದೇಪದೆ ಮುಖದ ಮೇಲೆ ಒಸರುತ್ತಿದ್ದ ಬೆವರು ಒರೆಸಿಕೊಳ್ಳುತ್ತಿದ್ದರೆ ಪ್ರಧಾನಿಗಳ ಮುಖದಲ್ಲಿ ಕಿಂಚಿತ್ತೂ ಆಯಾಸ ಕಾಣದು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಒಬ್ಬ ಅತ್ಯುತ್ತಮ ಯೋಗಪಟು ಅನ್ನೋದು ನಿರ್ವಿವಾದಿತ ಮಾರಾಯ್ರೇ. ಅವರು ಯೋಗದಲ್ಲಿ ನಿರತರಾಗಿರುವ ಪೋಟೋಗಳನ್ನು ಈ ಮೊದಲು ಸಲ ಸಹ ನಾವು ಹಲವಾರು ಬಾರಿ ನೋಡಿದ್ದೇವೆ. ಪ್ರತಿಯೊಂದು ಅಸನವನ್ನು (Aasana) ಅವರು ನಿರಾಯಾಸವಾಗಿ ಮಾಡುತ್ತಾರೆ. 71-ವರ್ಷ-ವಯಸ್ಸಿನ ಪ್ರಧಾನಿ ಮೋದಿ ಅವರು 20 ತರುಣರು ಸಹ ನಾಚುವ ಹಾಗೆ ಮೈಯನ್ನು ಯೋಗ ಇನ್ಸ್ಟ್ರಕ್ಟರ್ (Yoga instructor) ಸೂಚಿಸುವ ರೀತಿಯಲ್ಲಿ ಬಗ್ಗಿಸಿ ಅಸನಗಳನ್ನು ಮಾಡುತ್ತಾರೆ. ಅವರ ಜೊತೆ ಯೋಗ ಮಾಡುತ್ತಿರುವವರು ಪದೇಪದೆ ಮುಖದ ಮೇಲೆ ಒಸರುತ್ತಿದ್ದ ಬೆವರು ಒರೆಸಿಕೊಳ್ಳುತ್ತಿದ್ದರೆ ಪ್ರಧಾನಿಗಳ ಮುಖದಲ್ಲಿ ಕಿಂಚಿತ್ತೂ ಆಯಾಸ ಕಾಣದು. ಮೂವತ್ತೈದೂವರೆ ನಿಮಿಷಗಳ ಈ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ ಮಾರಾಯ್ರೇ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos