PM Modi Interview: ಭಾರತವನ್ನ ಹೊಸ ಎತ್ತರಕ್ಕೆ ಕೊಂಡೊಯ್ಯಬೇಕು-ಮೋದಿ
ಇಂದು(ಮೇ.02) 8 ಗಂಟೆಯಿಂದ 10 ಗಂಟೆಯವರೆಗೆ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರೊಂದಿಗೆ ಟಿವಿ9 ಗ್ರೂಪ್ ಸಂಪಾದಕರು ದುಂಡು ಮೇಜಿನ ಸಂದರ್ಶನವನ್ನು ನಡೆಸುತ್ತಿದ್ದಾರೆ. ಈ ವೇಳೆ 2019 ರಲ್ಲಿ ನಾನು ಜನರ ಮುಂದೆ ನಾನು ಮಾಡಿದ್ದ ಕಾರ್ಯದ ರೀಪೋಟ್ ಇಟ್ಟುಕೊಂಡು ಹೋಗಿದ್ದೆ. ಆದರೀಗ 2024 ರಲ್ಲಿ ಜನರ ಅಪೇಕ್ಷೆಗಳನ್ನು ಪೂರೈಸಿಬೇಕಿದೆ. ಈಗ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕಿದೆ ಎಂದರು.
ಇಂದು(ಮೇ.02) 8 ಗಂಟೆಯಿಂದ 10 ಗಂಟೆಯವರೆಗೆ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರೊಂದಿಗೆ ಟಿವಿ9 ಗ್ರೂಪ್ ಸಂಪಾದಕರು ದುಂಡು ಮೇಜಿನ ಸಂದರ್ಶನವನ್ನು ನಡೆಸುತ್ತಿದ್ದಾರೆ. ಈ ವೇಳೆ ಮುಖ್ಯ ನಿರೂಪಕರಾದ ನಿಶಾಂತ್ ಚತುರ್ವೇದಿ ಅವರು, ‘ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ನೀವು ಸಂಪೂರ್ಣವಾಗಿ ತೊಡಗಿದ್ದೀರಿ. ಅದರಂತೆ 2014, 2019 ರ ಚುನಾವಣೆಯನ್ನ 2024 ರ ಚುನಾವಣೆಗೆ ಹೋಲಿಸಿದರೆ ಏನು ವ್ಯತ್ಯಾಸವಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮೋದಿ ಅವರು, ‘ಚುನಾವಣೆ ನನಗೆ ಹೊಸದಲ್ಲ, ನಾನು ಸುಧಿರ್ಘವಾಗಿ ಸಂಘಟನೆಯಲ್ಲಿ ತೊಡಗಿಕೊಂಡು ಬಂದಿದ್ದೇನೆ. ಈಗ ಮತ್ತೊಂದು ಜವಾಬ್ದಾರಿಯೊಂದಿಗೆ ಚುನಾವಣಾ ಮೈದಾನದಲ್ಲಿದ್ದೇನೆ. 2014 ರ ಚುನಾವಣಾ ಎದುರಿಸಿದಾಗ ಜನರ ಮನಸ್ಸಿನಲ್ಲಿ ಕೆಲ ಪ್ರಶ್ನೆಗಳಿದ್ದವು. ಆದರೆ ಈಗ ಅವರಿಗೆ ಒಂದು ಭರವಸೆ ಬಂದಿದೆ. ಇನ್ನು 2019 ರಲ್ಲಿ ನಾನು ಜನರ ಮುಂದೆ ನಾನು ಮಾಡಿದ್ದ ಕಾರ್ಯದ ರೀಪೋಟ್ ಇಟ್ಟುಕೊಂಡು ಹೋಗಿದ್ದೆ. ಆದರೀಗ 2024 ರಲ್ಲಿ ಜನರ ಅಪೇಕ್ಷೆಗಳನ್ನು ಪೂರೈಸಿಬೇಕಿದೆ. ಈಗ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕಿದೆ ಎಂದರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ