AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಡಾಖ್‌ಗೆ 3,350 ಕೋಟಿ ರೂ. ಯೋಜನೆಗಳ ಕೊಡುಗೆ:  5 ಮೆಗಾ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

ಲಡಾಖ್‌ಗೆ 3,350 ಕೋಟಿ ರೂ. ಯೋಜನೆಗಳ ಕೊಡುಗೆ: 5 ಮೆಗಾ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಮಾಡಿದ ಪ್ರಧಾನಿ ಮೋದಿ

ನಯನಾ ರಾಜೀವ್
|

Updated on:Oct 15, 2026 | 2:25 PM

Share

ಪ್ರಧಾನಿ ನರೇಂದ್ರ ಮೋದಿ ಲಡಾಖ್‌ನಲ್ಲಿ ಸುಮಾರು 3,350 ಕೋಟಿ ರೂ. ಮೌಲ್ಯದ ಐದು ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಲೆಹ್ ವಿಮಾನ ನಿಲ್ದಾಣದ ನೂತನ ಟರ್ಮಿನಲ್, ನಿಮ್ಮು-ಪದುಮ್-ದಾರ್ಚಾ ಕಾರ್ಯತಂತ್ರದ ರಸ್ತೆ, ಜಲವಿದ್ಯುತ್ ಯೋಜನೆ, ಪೆಟ್ರೋಗ್ಲಿಫ್ ಸಂರಕ್ಷಣಾ ಪಾರ್ಕ್ ಮತ್ತು ಹಿಮ್ ಸರೋವರ ಜಲಸಂರಕ್ಷಣಾ ಕಾಮಗಾರಿಗಳು ಇದರಲ್ಲಿ ಸೇರಿವೆ. ಈ ವೇಳೆ ಮಾತನಾಡಿದ ಪ್ರಧಾನಿ, ಹಿಂದಿನ ಸರ್ಕಾರಗಳು ಲಡಾಖ್‌ನ ಕಠಿಣ ಭೌಗೋಳಿಕ ಸವಾಲುಗಳನ್ನು ನೆಪವಾಗಿಟ್ಟು ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದವು. ಆದರೆ 2019 ರಲ್ಲಿ ಲಡಾಖ್ ಕೇಂದ್ರಾಡಳಿತ ಪ್ರದೇಶವಾದ ನಂತರ ಕೇಂದ್ರ ಸರ್ಕಾರ ಗರಿಷ್ಠ ಆದ್ಯತೆ ನೀಡಿದೆ ಎಂದರು.

ನವದೆಹಲಿ, ಅಕ್ಟೋಬರ್ 15: ಪ್ರಧಾನಿ ನರೇಂದ್ರ ಮೋದಿ ಲಡಾಖ್‌ನಲ್ಲಿ ಸುಮಾರು 3,350 ಕೋಟಿ ರೂ. ಮೌಲ್ಯದ ಐದು ಪ್ರಮುಖ ಅಭಿವೃದ್ಧಿ ಯೋಜನೆಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಲೆಹ್ ವಿಮಾನ ನಿಲ್ದಾಣದ ನೂತನ ಟರ್ಮಿನಲ್, ನಿಮ್ಮು-ಪದುಮ್-ದಾರ್ಚಾ ಕಾರ್ಯತಂತ್ರದ ರಸ್ತೆ, ಜಲವಿದ್ಯುತ್ ಯೋಜನೆ, ಪೆಟ್ರೋಗ್ಲಿಫ್ ಸಂರಕ್ಷಣಾ ಪಾರ್ಕ್ ಮತ್ತು ಹಿಮ್ ಸರೋವರ ಜಲಸಂರಕ್ಷಣಾ ಕಾಮಗಾರಿಗಳು ಇದರಲ್ಲಿ ಸೇರಿವೆ. ಈ ವೇಳೆ ಮಾತನಾಡಿದ ಪ್ರಧಾನಿ, ಹಿಂದಿನ ಸರ್ಕಾರಗಳು ಲಡಾಖ್‌ನ ಕಠಿಣ ಭೌಗೋಳಿಕ ಸವಾಲುಗಳನ್ನು ನೆಪವಾಗಿಟ್ಟು ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದವು. ಆದರೆ 2019 ರಲ್ಲಿ ಲಡಾಖ್ ಕೇಂದ್ರಾಡಳಿತ ಪ್ರದೇಶವಾದ ನಂತರ ಕೇಂದ್ರ ಸರ್ಕಾರ ಗರಿಷ್ಠ ಆದ್ಯತೆ ನೀಡಿದೆ ಎಂದರು.

2019ರವರೆಗೆ ಕೇವಲ 1,800 ಕಿ.ಮೀ ಇದ್ದ ರಸ್ತೆ ಜಾಲ ಈಗ 4,000 ಕಿ.ಮೀಗೆ ಹೆಚ್ಚಿದೆ. ದೊಡ್ಡ ಸೇತುವೆಗಳ ಸಂಖ್ಯೆ 19ರಿಂದ 75ಕ್ಕೆ ಹಾಗೂ ಹೆಲಿಪ್ಯಾಡ್‌ಗಳು 7ರಿಂದ 40ಕ್ಕೆ ಏರಿಕೆಯಾಗಿವೆ. ಈ ಹಿಂದೆ ಶೇ. 3.5ರಷ್ಟಿದ್ದ ನಲ್ಲಿ ನೀರು ಸಂಪರ್ಕ ಇಂದು ಶೇ. 99ರಷ್ಟು ಮನೆಗಳನ್ನು ತಲುಪಿದೆ. ಆಸ್ಪತ್ರೆಗಳ ಹಾಸಿಗೆ ಸಾಮರ್ಥ್ಯ ದ್ವಿಗುಣಗೊಂಡಿದ್ದು, ಕಾರ್ಯತಂತ್ರದ ಮಹತ್ವದ ಜೊಜಿಲಾ ಸುರಂಗ ಕಾಮಗಾರಿ ಶರವೇಗದಲ್ಲಿ ಸಾಗುತ್ತಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Oct 15, 2026 02:25 PM

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More