ನಾರ್ವೆಯಲ್ಲಿ ಭಾರತೀಯ ವಲಸಿಗರಿಂದ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ

Updated on: May 18, 2026 | 7:20 PM

ಪ್ರಧಾನಿ ಮೋದಿಯವರನ್ನು ನಾರ್ವೆಯಲ್ಲಿರುವ ಭಾರತೀಯ ವಲಸಿಗರು ಭವ್ಯವಾಗಿ ಸ್ವಾಗತಿಸುತ್ತಿದ್ದಂತೆ ಸಾಂಸ್ಕೃತಿಕ ಪ್ರದರ್ಶನಗಳ ಅನಾವರಣ ಮಾಡಲಾಯಿತು. ತಮ್ಮ ಯುರೋಪ್ ರಾಜತಾಂತ್ರಿಕ ಪ್ರವಾಸದ ಭಾಗವಾಗಿ ನರೇಂದ್ರ ಮೋದಿ ಅವರು ಓಸ್ಲೋ ತಲುಪಿದ್ದು, ನಾರ್ವೆಯಲ್ಲಿರುವ ಭಾರತೀಯ ಸಮುದಾಯದಿಂದ ಭವ್ಯ ಸಾಂಸ್ಕೃತಿಕ ಸ್ವಾಗತವನ್ನು ಪಡೆದರು. ಓಸ್ಲೋದಿಂದ ಬಂದ ದೃಶ್ಯಗಳಲ್ಲಿ, ಪ್ರಧಾನಿ ಮೋದಿಯವರನ್ನು ಭಾರತೀಯ ಶಾಸ್ತ್ರೀಯ ಸಂಗೀತ, ಸಾಂಪ್ರದಾಯಿಕ ನೃತ್ಯ ಪ್ರದರ್ಶನಗಳು ಮತ್ತು ಭಾರತೀಯ ವಲಸಿಗರ ಉತ್ಸಾಹಭರಿತ ಘೋಷಣೆಗಳೊಂದಿಗೆ ಸ್ವಾಗತಿಸುತ್ತಿರುವುದು ಕಂಡುಬಂದಿದೆ.

ನವದೆಹಲಿ, ಮೇ 18: ಪ್ರಧಾನಿ ನರೇಂದ್ರ ಮೋದಿ (PM Modi) ಇಂದು ಸ್ವೀಡನ್ ಪ್ರವಾಸ ಮುಗಿಸಿ ನಾರ್ವೆಗೆ ಪ್ರಯಾಣ ಬೆಳೆಸಿದ್ದಾರೆ. ಓಸ್ಲೋದಲ್ಲಿ ಭಾರತೀಯ ಸಮುದಾಯ ಪ್ರಧಾನಿ ಮೋದಿಗೆ ಶಾಸ್ತ್ರೀಯ ನೃತ್ಯ, ಸಂಗೀತದ ಮೂಲಕ ಸ್ವಾಗತ ನೀಡಿತು. ಸತ್ರಿಯಾದಿಂದ ಭರತನಾಟ್ಯದವರೆಗೆ, ಕೂಚಿಪುಡಿಯಿಂದ ಒಡಿಸ್ಸಿಯವರೆಗೆ, ಕಥಕ್‌ನಿಂದ ಮೋಹಿನಿಯಾಟ್ಟಂವರೆಗೆ, ಪ್ರತಿಯೊಂದು ನೃತ್ಯ ಪ್ರಕಾರವನ್ನೂ ನಾರ್ವೆಯಲ್ಲಿ ಪ್ರದರ್ಶಿಸಲಾಯಿತು.

ತಮ್ಮ ಯುರೋಪ್ ರಾಜತಾಂತ್ರಿಕ ಪ್ರವಾಸದ ಭಾಗವಾಗಿ ನರೇಂದ್ರ ಮೋದಿ ಅವರು ಓಸ್ಲೋ ತಲುಪಿದ್ದು, ನಾರ್ವೆಯಲ್ಲಿರುವ ಭಾರತೀಯ ಸಮುದಾಯದಿಂದ ಭವ್ಯ ಸಾಂಸ್ಕೃತಿಕ ಸ್ವಾಗತವನ್ನು ಪಡೆದರು. ಸಾಂಪ್ರದಾಯಿಕ ಭಾರತೀಯ ಉಡುಪುಗಳನ್ನು ಧರಿಸಿದ್ದ ಮಕ್ಕಳು ಸಾಂಸ್ಕೃತಿಕ ನೃತ್ಯಗಳನ್ನು ಪ್ರದರ್ಶಿಸಿ, ಹೂಗುಚ್ಛಗಳನ್ನು ನೀಡಿ ಹಾಗೂ ದೇಶಭಕ್ತಿಯ ಉತ್ಸಾಹದೊಂದಿಗೆ ಪ್ರಧಾನಮಂತ್ರಿಯವರನ್ನು ಬರಮಾಡಿಕೊಂಡರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More