ಸೆಶೆಲ್ಸ್‌ನ ಸ್ಟೇಟ್ ಹೌಸ್‌ನಲ್ಲಿ ಪ್ರಧಾನಿ ಮೋದಿಗೆ ಸರ್ಕಾರಿ ಗೌರವದ ಸ್ವಾಗತ

Updated on: Jun 28, 2026 | 3:47 PM

ಪ್ರಧಾನಿ ನರೇಂದ್ರ ಮೋದಿ ನಿನ್ನೆ ಮೂರು ದಿನಗಳ ಅಧಿಕೃತ ಪ್ರವಾಸದ ಭಾಗವಾಗಿ ಸೆಶೆಲ್ಸ್‌ಗೆ ತೆರಳಿದರು. ಈ ವೇಳೆ ವಿಕ್ಟೋರಿಯಾದಲ್ಲಿರುವ ಸ್ಟೇಟ್ ಹೌಸ್‌ನಲ್ಲಿ ಸಾಂಪ್ರದಾಯಿಕ ಗೌರವ ವಂದನೆಯನ್ನು ಸ್ವೀಕರಿಸಿದರು. ಇದು ಉಭಯ ದೇಶಗಳ ನಡುವಿನ ಬಲವಾದ ಮತ್ತು ದೀರ್ಘಕಾಲದ ಪಾಲುದಾರಿಕೆಯನ್ನು ಪುನರುಚ್ಚರಿಸಿದೆ. ಸೆಶೆಲ್ಸ್ ಅಧ್ಯಕ್ಷ ಹರ್ಮಿನೀ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಜೂನ್ 29ರವರೆಗೆ ಸೆಶೆಲ್ಸ್‌ನಲ್ಲಿರಲಿದ್ದಾರೆ.

ವಿಕ್ಟೋರಿಯಾ, ಜೂನ್ 28: ಪ್ರಧಾನಿ ನರೇಂದ್ರ ಮೋದಿ (PM Modi) ತಮ್ಮ ಐತಿಹಾಸಿಕ 3 ದಿನಗಳ ಪ್ರವಾಸದ ಅಂಗವಾಗಿ ಸೆಶೆಲ್ಸ್‌ಗೆ ತೆರಳಿದ್ದಾರೆ. ಈ ವೇಳೆ ಸೆಶೆಲ್ಸ್​ನ ಸ್ಟೇಟ್ ಹೌಸ್‌ನಲ್ಲಿ ಮೋದಿಗೆ ಸಾಂಪ್ರದಾಯಿಕ ಸರ್ಕಾರಿ ಗೌರವ ವಂದನೆಯನ್ನು ನೀಡಲಾಯಿತು. ಇದು ಉಭಯ ದೇಶಗಳ ನಡುವಿನ 50 ವರ್ಷಗಳ ರಾಜತಾಂತ್ರಿಕ ಬಾಂಧವ್ಯದ ಸಂಕೇತವಾಗಿದೆ. ಸ್ಟೇಟ್ ಹೌಸ್‌ನಲ್ಲಿ ಪ್ರಧಾನಿ ಮೋದಿ ಅವರನ್ನು ಸೆಶೆಲ್ಸ್ ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನೀ ಆತ್ಮೀಯವಾಗಿ ಸ್ವಾಗತಿಸಿದರು.

ಸೆಶೆಲ್ಸ್ ಅಧ್ಯಕ್ಷ ಹರ್ಮಿನೀ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಜೂನ್ 29ರವರೆಗೆ ಸೆಶೆಲ್ಸ್‌ನಲ್ಲಿರಲಿದ್ದಾರೆ. ಈ ಪ್ರವಾಸದ ಅವಧಿಯಲ್ಲಿ ಅವರು ಸೋಮವಾರ ನಡೆಯಲಿರುವ ಆ ದೇಶದ ಸುವರ್ಣ ಮಹೋತ್ಸವದ ರಾಷ್ಟ್ರೀಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಇದು ಸೆಶೆಲ್ಸ್ ಸ್ವಾತಂತ್ರ್ಯದ 50ನೇ ವರ್ಷದ ಸ್ಮರಣೋತ್ಸವವಾಗಿದೆ.

ಪ್ರಧಾನಿ ಮೋದಿ ಶನಿವಾರ ವಿಕ್ಟೋರಿಯಾ ತಲುಪಿದ್ದು, ವಿಮಾನ ನಿಲ್ದಾಣದಲ್ಲಿ ಅಧ್ಯಕ್ಷ ಹರ್ಮಿನೀ, ಹಿರಿಯ ಸಚಿವರು ಮತ್ತು ಇತರ ಗಣ್ಯರು ಅವರನ್ನು ಬರಮಾಡಿಕೊಂಡರು. ಈ ಸಾಂಪ್ರದಾಯಿಕ ಸ್ವಾಗತ ಕಾರ್ಯಕ್ರಮದಲ್ಲಿ ಭಾರತೀಯ ವಲಸಿಗರು ಪ್ರಸ್ತುತಪಡಿಸಿದ ಗುಜರಾತ್‌ನ ಕಚ್ ಪ್ರಾಂತ್ಯದ ಸಾಂಪ್ರದಾಯಿಕ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು ಗಮನ ಸೆಳೆದವು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us