ಗುಜರಾತ್‌ನ ಬನಸ್ಕಾಂಠದಲ್ಲಿ ಮಹಿಳಾ ಹೈನುಗಾರರ ಜೊತೆ ಸಂವಾದ: ಮಹತ್ವದ ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಗುಜರಾತ್‌ನ ಬನಸ್ಕಾಂಠದಲ್ಲಿ ಮಹಿಳಾ ಹೈನುಗಾರರೊಂದಿಗೆ ನಡೆಸಿದ ಸಂವಾದದ ವಿಡಿಯೋ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಹೈನುಗಾರಿಕೆ ಮತ್ತು ಪಶುಸಂಗೋಪನೆ ಕ್ಷೇತ್ರಗಳು ಮಹಿಳಾ ಸಬಲೀಕರಣಕ್ಕೆ ನೀಡಿರುವ ಕೊಡುಗೆಯನ್ನು ಶ್ಲಾಘಿಸಿದ್ದಾರೆ. ಅಕ್ಟೋಬರ್ 30ರಂದು ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಮಹಿಳಾ ಹೈನುಗಾರರು ಹಾಗೂ ಯುವತಿಯರೊಂದಿಗೆ ಸಂವಾದ ನಡೆಸಿದ್ದರು.
ನವದೆಹಲಿ, ಅಕ್ಟೋಬರ್ 31: ಗುಜರಾತ್‌ನ ಬನಸ್ಕಾಂಠಕ್ಕೆ 2026ರ ಅಕ್ಟೋಬರ್ 30ರಂದು ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಮಹಿಳಾ ಹೈನುಗಾರರು ಹಾಗೂ ಯುವತಿಯರೊಂದಿಗೆ ಸಂವಾದ ನಡೆಸಿದ್ದರು. ಹೈನುಗಾರಿಕೆ, ಪಶುಸಂಗೋಪನೆ, ಮೊಬೈಲ್ ಬ್ಯಾಂಕಿಂಗ್ ಮೂಲಕ ಹಣ ಪಾವತಿ, ಕಿಸಾನ್ ಕ್ರೆಡಿಟ್ ಕಾರ್ಡ್ ಮತ್ತು ಗೋಬರ್ಧನ್ ಯೋಜನೆಗಳು ತಮ್ಮ ಆದಾಯ ಹಾಗೂ ಸ್ವಾವಲಂಬನೆಯನ್ನು ಹೆಚ್ಚಿಸಲು ಹೇಗೆ ನೆರವಾಗಿವೆ ಎಂಬುದನ್ನು ಮಹಿಳೆಯರು ಹಂಚಿಕೊಂಡಿದ್ದರು. ಈ ಸಂದರ್ಭದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಪ್ರಧಾನಿ, ಬನಸ್ಕಾಂಠದಲ್ಲಿ ನಡೆದ ಈ ಸಂವಾದ ನಿಮಗೆ ಖಂಡಿತ ಸಂತೋಷ ನೀಡುತ್ತದೆ. ಕೃಷಿ, ಹೈನುಗಾರಿಕೆ ಮತ್ತು ಪಶುಸಂಗೋಪನೆ ಕ್ಷೇತ್ರಗಳು ಮಹಿಳಾ ಸಬಲೀಕರಣಕ್ಕೆ ಮತ್ತಷ್ಟು ಬಲ ನೀಡಿರುವುದು ನಿಜಕ್ಕೂ ಅದ್ಭುತವಾಗಿದೆ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

