ತನ್ನನ್ನು ಬಂಧಿಸುವುದು ಕಾನೂನುಬಾಹಿರ ಅಂತ ಗೊತ್ತಿದ್ದ ಪೊಲೀಸರು ಮೇಲಿನವರ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದರು: ಹರೀಶ್ ಪೂಂಜಾ
ಪಕ್ಷದ ಕಾರ್ಯಕರ್ತನೊಬ್ಬನ್ನು ವಿನಾಕಾರಣ ಬಂಧಿಸಿದ್ದನ್ನು ಪ್ರಶ್ನಿಸಲು ಠಾಣೆಗೆ ಹೋದಾಗ ಉಳಿದೆಲ್ಲ ವಿದ್ಯಮಾನಗಳು ಜರುಗಿವೆ ಎಂದು ಹೇಳಿದರು. ಈ ಭಾಗದ ಜನರ ಪ್ರತಿನಿಧಿಯಾಗಿ ಅವರ ಕಷ್ಟ ಮತ್ತು ದೂರು ದುಮ್ಮಾನಗಳಿಗೆ ಸ್ಪಂದಿಸುವುದು ತನ್ನ ಕರ್ತವ್ಯ ಮತ್ತು ಹಕ್ಕು ಸಹ ಆಗಿದೆ ಎಂದು ಪೂಂಜಾ ಹೇಳಿದರು.
ಮಂಗಳೂರು: ನಿನ್ನೆ ಮಧ್ಯಾಹ್ನದಿಂದ ಸಾಯಂಕಾಲದವರೆಗೆ ತಮ್ಮ ಮನೆಯ ಮುಂದೆ ನಡೆದ ನಾಟಕೀಯ ಬೆಳವಣಿಗಳ ಬಳಿಕ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ (Harish Poonja) ರಾತ್ರಿ ಸಮಯದಲ್ಲಿ ಪೊಲೀಸ್ ಠಾಣೆಗೆ (Belthangadi police station) ತೆರಳಿ ವಿಚಾರಣೆ ಎದುರಿಸಿದರು. ಶಾಸಕನೇ ಹೇಳುವಂತೆ ಪೊಲೀಸರು ಅವರನ್ನು ಬಂಧಿಸುವ ಕಾರ್ಯಕ್ಕೆ ಮುಂದಾಗದೆ ನೋಟೀಸೊಂದನ್ನು ಜಾರಿ ಮಾಡಿ ವಿಚಾರಣೆ ನಡೆಸಿದ್ದಾರೆ. ಠಾಣೆಯಿಂದ ಹೊರಬಿದ್ದ ಬಳಿಕ ಟಿವಿ ಮಂಗಳೂರು ವರದಿಗಾರನೊಂದಿಗೆ ಮಾತಾಡಿರುವ ಪೂಂಜ, ಪಕ್ಷದ ಕಾರ್ಯಕರ್ತನೊಬ್ಬನ್ನು (party worker) ವಿನಾಕಾರಣ ಬಂಧಿಸಿದ್ದನ್ನು ಪ್ರಶ್ನಿಸಲು ಠಾಣೆಗೆ ಹೋದಾಗ ಉಳಿದೆಲ್ಲ ವಿದ್ಯಮಾನಗಳು ಜರುಗಿವೆ ಎಂದು ಹೇಳಿದರು. ಈ ಭಾಗದ ಜನರ ಪ್ರತಿನಿಧಿಯಾಗಿ ಅವರ ಕಷ್ಟ ಮತ್ತು ದೂರು ದುಮ್ಮಾನಗಳಿಗೆ ಸ್ಪಂದಿಸುವುದು ತನ್ನ ಕರ್ತವ್ಯ ಮತ್ತು ಹಕ್ಕು ಸಹ ಆಗಿದೆ ಎಂದು ಹೇಳಿದ ಪೂಂಜಾ, ಕಾರ್ಯಕರ್ತನ ಬಂಧನ ವಿರೋಧಿಸಿ ಮರುದಿನ ಉಳಿದ ಕಾರ್ಯಕರ್ತರು ಪ್ರತಿಭಟನೆ ನಡೆಸಿದಾಗ, ಅದನ್ನೇ ಆಧಾರವಾಗಿಟ್ಟುಕೊಂಡು ತನ್ನ ವಿರುದ್ಧ ಕೇಸ್ ದಾಖಲಿಸಲಾಗಿತ್ತು ಎಂದರು.
ತಾವು ಮಾಡುತ್ತಿರುವುದು ತಪ್ಪು ಮತ್ತು ಕಾನೂನುಬಾಹಿರ ಅಂತ ಗೊತ್ತಿದ್ದರೂ ಪೊಲೀಸರು ತನ್ನನ್ನು ಬಂಧಿಸಲು ಮನೆಗೆ ಬಂದಿದ್ದರು. ಮೇಲಧಿಕಾರಿ ಮತ್ತು ಕೆಲ ಮಂತ್ರಿಗಳ ಆಗಾಧವಾದ ಒತ್ತಡದಲ್ಲಿ ಪೋಲೀಸರು ಕೆಲಸ ಮಾಡುತ್ತಿದ್ದಿದ್ದು ಮೇಲ್ನೋಟಕ್ಕೆ ಗೊತ್ತಾಗುತಿತ್ತು ಎಂದು ಪೂಂಜಾ ಹೇಳಿದರು. ತನ್ನನ್ನು ಬಂಧಿಸಿದರೆ ಅದು ಕಾನೂನುಬಾಹಿರ ಆಗುತ್ತದೆ ಮತ್ತು ತಾವು ತೊಂದರೆಗೆ ಸಿಕ್ಹಾಕಿಕೊಳ್ಳುತ್ತೇವೆ ಅಂತಾದ ಗೊತ್ತಾದ ಬಳಿಕ ಬಂಧಿಸುವ ಇರಾದೆ ಕೈಬಿಟ್ಟು ನೋಟೀಸ್ ಜಾರಿ ಮಾಡಿ ವಿಚಾರಣೆಗೆ ಕರೆದರು ಎಂದು ಪೂಂಜಾ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಿಜೆಪಿ ಮುಖಂಡನನ್ನು ಬಂಧಿಸಿದ್ದಕ್ಕೆ ಆಕ್ರೋಶ: ಶಾಸಕ ಹರೀಶ್ ಪೂಂಜಾ ವಿರುದ್ಧ ಎಫ್‌ಐಆರ್!