ಹೆಚ್ ಡಿ ರೇವಣ್ಣ ಹೊಳೆನರಸೀಪುರ ಮನೆಗೆ ಮತ್ತೊಮ್ಮೆ ಭೇಟಿ ನೀಡಿದ ಪೊಲೀಸ್ ತಂಡ, ಬಂಧನ ಸನ್ನಿಹಿತ?

|

Updated on: May 04, 2024 | 11:17 AM

ಪೊಲೀಸ್ ಮೂಲಗಳ ಪ್ರಕಾರ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ತನಿಖೆ ಮಾಡುತ್ತಿರುವ ಎಸ್ಐಟಿ ತಂಡ ರೇವಣ್ಣ ಮನೆಗೆ ಬಂದು ವಿಚಾರಣೆ ನಡೆಸಲಿದೆ. ಎಸ್ಐಟಿ ಅಧಿಕಾರಿಗಳು ರೇವಣ್ಣರನ್ನು ವಶಕ್ಕೆ ಪಡೆದರೂ ಅಚ್ಚರಿಯಿಲ್ಲ. ಯಾಕೆಂದರೆ, ಕಿಡ್ನ್ಯಾಪ್ ಪ್ರಕರಣವೊಂದು ದಾಖಲಾಗಿದ್ದು ಅದರಲ್ಲೂ ರೇವಣ್ಣ ಆರೋಪಿಯಾಗಿದ್ದಾರೆ.

ಹಾಸನ: ಪ್ರಜ್ವಲ್ ರೇವಣ್ಣ ಲೈಂಗಿಕ ದುರಾಚಾರ ಟೇಪುಗಳ (Prajwal Revanna sex tapes) ಪ್ರಕರಣದಲ್ಲಿ ಅವರ ತಂದೆ ಮತ್ತು ಶಾಸಕ ಹೆಚ್ ಡಿ ರೇವಣ್ಣ (HD Revanna) ಪಾತ್ರವೇನು ಅಂತ ಇನ್ನೂ ಗೊತ್ತಾಗಿಲ್ಲ. ಅದರೆ ಮೊದಲು ದೂರು ದಾಖಲಿಸಿದ ಸಂತ್ರಸ್ತೆಯರ ವರ್ಷನ್ ಪ್ರಕಾರ ಅವರೇ ಅರೋಪಿ ನಂಬರ್ ವನ್(accused no.1). ಅವರನ್ನು ಇನ್ನೂ ಯಾಕೆ ಬಂಧಿಸಿಲ್ಲ ಅಂತ ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ನಿನ್ನೆ ನಾವು ವರದಿ ಮಾಡಿದ ಹಾಗೆ ಹೊಳೆನರಸೀಪುರ ನಗರ ಠಾಣೆಯ ಪಿಎಸ್ಐ ಮತ್ತು ಸಿಬ್ಬಂದಿ ಇದೇ ಊರಲ್ಲಿರುವ ರೇವಣ್ಣರ ಮನೆಗೆ ಭೇಟಿ ನೀಡಿದ್ದರು. ಇಂದು ಬೆಳಗ್ಗೆ ಪಿಎಸ್ಐ ಅಜಯ್ ನೇತೃತ್ವ ಪೊಲೀಸ್ ತಂಡವೊಂದು ರೇವಣ್ಣರ ಅರಮನೆಯಂಥ ಮನೆಗೆ ಬಂದಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಪೊಲೀಸ್ ಮೂಲಗಳ ಪ್ರಕಾರ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ತನಿಖೆ ಮಾಡುತ್ತಿರುವ ಎಸ್ಐಟಿ ತಂಡ ರೇವಣ್ಣ ಮನೆಗೆ ಬಂದು ವಿಚಾರಣೆ ನಡೆಸಲಿದೆ. ಎಸ್ಐಟಿ ಅಧಿಕಾರಿಗಳು ರೇವಣ್ಣರನ್ನು ವಶಕ್ಕೆ ಪಡೆದರೂ ಅಚ್ಚರಿಯಿಲ್ಲ. ಯಾಕೆಂದರೆ, ಕಿಡ್ನ್ಯಾಪ್ ಪ್ರಕರಣವೊಂದು ದಾಖಲಾಗಿದ್ದು ಅದರಲ್ಲೂ ರೇವಣ್ಣ ಆರೋಪಿಯಾಗಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಜ್ವಲ್ ರೇವಣ್ಣ ಪ್ರಕರಣ: ಪೆನ್ ಡ್ರೈವ್​ಗಳನ್ನು ಡಿಕೆ ಶಿವಕುಮಾರ್ 2 ತಿಂಗಳು ತಮ್ಮ ಬಳಿ ಇಟ್ಟುಕೊಂಡಿದ್ದು ಯಾಕೆ? ಬಿವೈ ವಿಜಯೇಂದ್ರ

Follow us on