ಯಂಗ್ಸ್ಟರ್ಸ್ಗೆ ಅವಕಾಶ ಕೊಡಿ, ಈ ಹುಡುಗನ ಗೆಲ್ಲಿಸಿ: ಬೆಳಗಾವಿಯಲ್ಲಿ ಪ್ರದೀಪ್ ಈಶ್ವರ್ ಗ್ಯಾರಂಟಿ
Pradeep Eshwar Campaign for Mrunal Hebbalkar at Belagavi: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಡಾ. ಸುಧಾಕರ್ ಅವರನ್ನೇ ಸೋಲಿಸಿ ಅಚ್ಚರಿ ಮೂಡಿಸಿದ್ದ ಪ್ರದೀಪ್ ಈಶ್ವರ್ ಈಗ ಲೋಕಸಭಾ ಚುನಾವಣೆಯಲ್ಲಿ ಕೆಲ ಕ್ಷೇತ್ರಗಳಲ್ಲಿ ಸ್ಟಾರ್ ಪ್ರಚಾರಕರಾಗಿದ್ದಾರೆ. ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮಗನಾಗಿರುವ ಮೃಣಾಲ್ ಹೆಬ್ಬಾಳ್ಕರ್ ಪರವಾಗಿ ಪ್ರದೀಪ್ ಈಶ್ವರ್ ಮತಯಾಚಿಸಿದ್ದಾರೆ.
ಬೆಳಗಾವಿ, ಮೇ 2: ಯುವಕರಿಗೆ ಅವಕಾಶ ಕೊಡಿ. ಈ ಹುಡುಗನನ್ನು ಗೆಲ್ಲಿಸಿ ಎಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ (Mrunal Hebbalkar) ಪರವಾಗಿ ಪ್ರದೀಪ್ ಈಶ್ವರ್ ಮತ ಯಾಚಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಗ್ಗೆ ಮಾತನಾಡಿದ ಪ್ರದೀಪ್ ಈಶ್ವರ್ (Pradeep Eshwar), ಅವರು ಹಿರಿಯರಿದ್ದಾರೆ. ಎಷ್ಟು ಸಲ ಎಂದು ಅವರನ್ನು ಗೆಲ್ಲಿಸುತ್ತೀರಿ. ನನ್ನ ತಮ್ಮನಿಗೂ ಒಂದು ಅವಕಾಶ ಕೊಡಿ ಎಂದು ಚಿಕ್ಕಬಳ್ಳಾಪುರ ಶಾಸಕರಾದ ಅವರು ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಡಾ. ಕೆ ಸುಧಾಕರ್ ಅವರನ್ನು ಸೋಲಿಸಿ ಅಚ್ಚರಿ ಹುಟ್ಟಿಸಿದ್ದ ಪ್ರದೀಪ್ ಈಶ್ವರ್, ಬೆಳಗಾವಿಯಲ್ಲಿ ಮೃಣಾಲ್ ಹೆಬ್ಬಾಳ್ಕರ್ ಕೂಡ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯುಕರು ಈ ದೇಶದಲ್ಲಿ ಬದಲಾವಣೆ ತರುತ್ತಾರೆ. ಮೃಣಾಲ್ ನಿಮ್ಮ ನಿರೀಕ್ಷೆ ಈಡೇರಿಸುತ್ತಾರೆ ಎಂದು ಗ್ಯಾರಂಟಿ ನೀಡಿದ್ದಾರೆ.
ಇದನ್ನೂ ಓದಿ: ತಮಿಳುನಾಡಲ್ಲಿ ಚುನಾವಣೆ ಸೋತವ್ರು ಕರ್ನಾಟಕದಲ್ಲಿ ಉಸ್ತುವಾರಿ: ಅಣ್ಣಾಮಲೈ ಬಗ್ಗೆ ತೇಜಸ್ವಿನಿ ವ್ಯಂಗ್ಯ
ಮೃಣಾಲ್ ಅವರ ತಾಯಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಒಬ್ಬ ಫೈಟರ್. ಇವತ್ತು ಎಷ್ಟು ಸಾಧನೆ ಮಾಡಿದ್ದಾರೆ. ಸಚಿವೆಯಾಗಿ ಅವರು 1.30 ಕೋಟಿ ಜನರಿಗೆ ಗೃಹಲಕ್ಷ್ಮೀ ಯೋಜನೆ ತಲುಪಿಸಲು ಯಶಸ್ವಿಯಾಗಿದ್ದಾರೆ ಎಂದು ಪ್ರದೀಪ್ ಈಶ್ವರ್ ಶ್ಲಾಘಿಸಿದ್ದಾರೆ.
ಮೋದಿ ಗ್ಯಾರಂಟಿ ಬಗ್ಗೆ ಮಾತನಾಡಿದ ಅವರು, ತಮ್ಮದು ಕಾಂಗ್ರೆಸ್ ಗ್ಯಾರಂಟಿ, ಬಡವರ ಕಣ್ಣೀರು ಒರೆಸುವ ಗ್ಯಾರಂಟಿ, ಕಷ್ಟ ನೀಗಿಸುವ ಗ್ಯಾರಂಟಿ, ಬೆಳಗಾವಿ ಜನತೆಯ ಗ್ಯಾರಂಟಿ ಎಂದು ಬಣ್ಣಿಸಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ