ಪ್ರಜ್ವಲ್ ವಿಡಿಯೋ ಬಗ್ಗೆ ಅಮಿತ್ ಶಾಗೂ ಗೊತ್ತಿದ್ದು ಟಿಕೆಟ್ ಕೊಟ್ಟಿದ್ಯಾಕೆ?: ಸಿಎಂ ಸಿದ್ದರಾಮಯ್ಯ

|

Updated on: May 01, 2024 | 2:41 PM

ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರ ನಡುವೆ ವಾಕ್ಸಮರ ಹೆಚ್ಚುತ್ತಿದೆ. ಇದೀಗ ಯಾದಗಿರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ "ಪ್ರಜ್ವಲ್ ವಿಡಿಯೋ ಬಗ್ಗೆ ಅಮಿತ್ ಶಾಗೂ ಗೊತ್ತಿದ್ದು, ಆದ್ರೂ ಕೂಡ ಟಿಕೆಟ್ ಕೊಟ್ಟಿದ್ಯಾಕೆ? ಎಂದು ಕೇಂದ್ರ ಸರ್ಕಾರವನ್ನು ಪ್ರಶಿಸಿದ್ದಾರೆ.

ಹಾಸನ (Hassan) ಸಂಸದ ಜೆಡಿಎಸ್‌ ಮುಖಂಡ ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna) ಅವರ ಅಶ್ಲೀಲ ವಿಡಿಯೋ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣ ದಿನದಿಂದ ದಿನಕ್ಕೂ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಎಸ್​ಐಟಿ ತಂಡ ತನಿಖೆಯನ್ನು ಚುರುಕುಗೊಳಿಸಿದೆ. ಇದಲ್ಲದೇ ದಿನದಿಂದ ದಿನಕ್ಕೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರ ನಡುವೆ ವಾಕ್ಸಮರ ಹೆಚ್ಚುತ್ತಿದೆ. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು,”ಪ್ರಜ್ವಲ್ ವಿಡಿಯೋ ಬಗ್ಗೆ ಅಮಿತ್ ಶಾಗೂ ಗೊತ್ತಿದ್ದು, ಆದ್ರೂ ಕೂಡ ಟಿಕೆಟ್ ಕೊಟ್ಟಿದ್ಯಾಕೆ? ಎಂದು ಕೇಂದ್ರ ಸರ್ಕಾರವನ್ನು ಪ್ರಶಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾದಗಿರಿಯಲ್ಲಿ ಇಂದು (ಮೇ.01) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಬಿಜೆಪಿ ಮುಖಂಡರಿಗೂ ಪ್ರಜ್ವಲ್ ರೇವಣ್ಣ  ಅವರ ಅಶ್ಲೀಲ ವಿಡಿಯೋದ ಬಗ್ಗೆ ಈ ಹಿಂದೆ ತಿಳಿದಿದ್ದರೂ ಕೂಡ ಟಿಕೆಟ್​​ ನೀಡಲಾಗಿದೆ. ಪ್ರಜ್ವಲ್ ಮಾಡಿರುವ ಅಶ್ಲೀಲ ಕೃತ್ಯವನ್ನು ಮುಚ್ಚಿಟ್ಟು ಟಿಕೆಟ್​​ ನೀಡಲಾಗಿದೆ ಎಂದು ಸಿದ್ದರಾಮಯ್ಯ ಮೈತ್ರಿ ಪಕ್ಷದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ನಮಗೆ ಸಿಐಡಿ ಮೇಲೆ ನಂಬಿಕೆ ಇಲ್ಲ, ನೇಹಾ ಹಿರೇಮಠ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು: ಮಾಳವಿಕಾ ಅವಿನಾಶ್

Published on: May 01, 2024 02:33 PM