ಪಾಸ್ಪೋರ್ಟ್ ಮತ್ತು ವೀಸಾಗಳನ್ನು ನೀಡೋದು ಕೇಂದ್ರ ಸರ್ಕಾರ, ರಾಜ್ಯವಲ್ಲ: ಸಿದ್ದರಾಮಯ್ಯ

ಪಾಸ್ಪೋರ್ಟ್ ಮತ್ತು ವೀಸಾಗಳನ್ನು ನೀಡೋದು ಕೇಂದ್ರ ಸರ್ಕಾರ, ರಾಜ್ಯವಲ್ಲ: ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: May 01, 2024 | 2:11 PM

ಪ್ರಜ್ವಲ್ ವಿದೇಶಕ್ಕೆ ಹಾರಿ ಹೋಗಲು ರಾಜ್ಯ ಸರ್ಕಾರವೇ ಕಾರಣ, ಸರ್ಕಾರ ಕೂಡಲೇ ಎಫ್ ಐ ಆರ್ ದಾಖಲಿಸಿದ್ದರೆ ಪ್ರಜ್ವಲ್ ತಪ್ಪಿಸಿಕೊಳ್ಳಲಾಗುತ್ತಿರಲಿಲ್ಲ ಎಂದು ಬಿಜೆಪಿ ನಾಯಕರು ಹೇಳಿರುವುದಕ್ಕೆ ಪಾಸ್ಪೋರ್ಟ್ ಮತ್ತು ವೀಸಾಗಳನ್ನು ನೀಡೋದು ಯಾರು? ರಾಜ್ಯ ಸರ್ಕಾರವಾ ಅಥವಾ ಕೇಂದ್ರವಾ ಅಂತ ಕೇಳಿದರು.

ಯಾದಗಿರಿ: ಪ್ರಜ್ವಲ್ ರೇವಣ್ಣ ಪ್ರಕರಣದ (Prajwal Revanna) ತನಿಖೆ ನಡೆಸಲು ತಮ್ಮ ಸರ್ಕಾರ ಹಿರಿಯ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ಎಸ್ ಐಟಿಯನ್ನು ರಚಿಸಿದೆ, ರಮೇಶ್ ಜಾರಕಿಹೊಳಿ (Ramesh Jarkiholi) ವಿಡಿಯೋ ಪ್ರಕರಣ ತಾರ್ಕಿಕ ಅಂತ್ಯ ಕಾಣದ್ದನ್ನು ಈ ಪ್ರಕರಣದೊಂದಿಗೆ ಹೋಲಿಸಲಾಗದು, ಎಲ್ಲ ಸಮರ್ಥ ಅಧಿಕಾರಿಗಳು ತಂಡದಲ್ಲಿದ್ದಾರೆ, ಪಾರದರ್ಶಕವಾಗಿ ತನಿಖೆ ನಡೆಯುತ್ತದೆ, ತನಿಖೆಯ ಬಳಿಕ ಅವರು ವರದಿ ಸಲ್ಲಿಸುತ್ತಾರೆ, ವರದಿಯನ್ನು ಆಧರಿಸಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು. ಯಾದಗಿರಿಗೆ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿ, ಪ್ರಜ್ವಲ್ ವಿದೇಶಕ್ಕೆ ಹಾರಿ ಹೋಗಲು ರಾಜ್ಯ ಸರ್ಕಾರವೇ ಕಾರಣ, ಸರ್ಕಾರ ಕೂಡಲೇ ಎಫ್ ಐ ಆರ್ ದಾಖಲಿಸಿದ್ದರೆ ಪ್ರಜ್ವಲ್ ತಪ್ಪಿಸಿಕೊಳ್ಳಲಾಗುತ್ತಿರಲಿಲ್ಲ ಎಂದು ಬಿಜೆಪಿ ನಾಯಕರು ಹೇಳಿರುವುದಕ್ಕೆ ಪಾಸ್ಪೋರ್ಟ್ ಮತ್ತು ವೀಸಾಗಳನ್ನು ನೀಡೋದು ಯಾರು? ರಾಜ್ಯ ಸರ್ಕಾರವಾ ಅಥವಾ ಕೇಂದ್ರವಾ ಅಂತ ಕೇಳಿದರು. ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿದ್ದು ಪೂರ್ವನಿಯೋಜಿತವೇ ಎಂದು ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ, ಹೌದು ದೇವೇಗೌಡರೇ ಪ್ಲ್ಯಾನ್ ಮಾಡಿ ವಿದೇಶಕ್ಕೆ ಕಳಿಸಿದ್ದು ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಕುಮಾರಸ್ವಾಮಿ ಹೇಳಿದ್ದೆಲ್ಲ ಸುಳ್ಳು, ಮಗ ಬ್ರಸ್ಸೆಲ್ಸ್ ನಲ್ಲಿ ಸತ್ತಾಗ ಕೇಂದ್ರ ಸರ್ಕಾರದ ನೆರವು ಕೇಳಿರಲಿಲ್ಲ: ಸಿದ್ದರಾಮಯ್ಯ