ಪ್ರಜ್ವಲ್ ರೇವಣ್ಣ ನನ್ನ ಭೇಟಿಯಾಗಿದ್ದು ನಿಜ ಎಂದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್ ಹಾಗೂ ಸೂರಜ್ ಭೇಟಿಯ ಬಗ್ಗೆ ಉಪಮುಖ್ಯಮಂತ್ರಿ ಮಹತ್ವದ ಹೇಳಿಕೆ ನೀಡಿದ್ದಾರೆ. ಪ್ರಜ್ವಲ್ ರೇವಣ್ಣ ಭೇಟಿಯಾಗಿದ್ದು ಹೌದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar) ಹೇಳಿದ್ದಾರೆ. ಸೂರಜ್ ರೇವಣ್ಣ ನಿಮ್ಮ ಮನೆಗೆ ಬಂದಿದ್ದರಂತೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಡಿಕೆ ಶಿವಕುಮಾರ್, ಹೌದು ಸೂರಜ್ ನನ್ನನ್ನು ಭೇಟಿಯಾಗಿದ್ದು ನಿಜ ಆದರೆ ಕಾರಣ ಏನೆಂಬುದನ್ನು ನೀವೇ ಕೇಳಿ ಎಂದಿದ್ದಾರೆ.
ಪ್ರಜ್ವಲ್ ರೇವಣ್ಣ(Preajwal Revanna) ಭೇಟಿಯಾಗಿದ್ದು ಹೌದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar) ಹೇಳಿದ್ದಾರೆ. ಸೂರಜ್ ರೇವಣ್ಣ ನಿಮ್ಮ ಮನೆಗೆ ಬಂದಿದ್ದರಂತೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಡಿಕೆ ಶಿವಕುಮಾರ್, ಹೌದು ಸೂರಜ್ ನನ್ನನ್ನು ಭೇಟಿಯಾಗಿದ್ದು ನಿಜ ಆದರೆ ಕಾರಣ ಏನೆಂಬುದನ್ನು ನೀವೇ ಕೇಳಿ ಎಂದಿದ್ದಾರೆ.
ಮೊದಲು ಶಿವರಾಜೇಗೌಡ ಮೊದಲು ಕುಮಾರಸ್ವಾಮಿಯನ್ನು ಭೇಟಿಯಾಗಿ ಬಳಿಕ ಬಿಜೆಪಿಯವರನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ. ಕುಮಾರಸ್ವಾಮಿಗೆ ನಾರಿ ಶಕ್ತಿ, ಹೆಣ್ಣುಮಕ್ಕಳ ಮೇಲೆ ಗೌರವವಿದ್ದರೆ ಜೆಡಿಎಸ್, ಬಿಜೆಪಿ ಮೊದಲು ಹೆಣ್ಣು ಮಕ್ಕಳ ಮನೆಗೆ ತೆರಳಿ ಸಾಂತ್ವನ ಹೇಳಿ ಎಂದು ಡಿಕೆಶಿವಕುಮಾರ್ ಹೇಳಿದ್ದಾರೆ.
ಏನಿದು ಪ್ರಕರಣ?
ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಅವರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದ್ದ ವಿಡಿಯೋ ಹರಿದಾಡಿತ್ತು. ಇದೇ ಸಂದರ್ಭದಲ್ಲಿ ಸಂತ್ರಸ್ತ ಮಹಿಳೆಯೊಬ್ಬರು ಪ್ರಜ್ವಲ್ ರೇವಣ್ಣ ವಿರುದ್ಧ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ. ಈಗ ಪ್ರಜ್ವಲ್ ಜರ್ಮನಿಯಲ್ಲಿದ್ದಾರೆ ಎನ್ನುವ ಮಾಹಿತಿ ಲಬ್ಯವಾಗಿದ್ದು, ಮೇ 3ಕ್ಕೆ ರಾಜ್ಯಕ್ಕೆ ಹಿಂದಿರುಗಲಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ