6 ದಿನ ಎಸ್​ಐಟಿ ಕಸ್ಟಡಿಯಲ್ಲಿರುವ ಪ್ರಜ್ವಲ್​ ತನಿಖೆ ಹೇಗಿರುತ್ತೆ? ಇಲ್ಲಿದೆ ಕಂಪ್ಲೀಟ್​ ಡೀಟೆಲ್ಸ್

6 ದಿನ ಎಸ್​ಐಟಿ ಕಸ್ಟಡಿಯಲ್ಲಿರುವ ಪ್ರಜ್ವಲ್​ ತನಿಖೆ ಹೇಗಿರುತ್ತೆ? ಇಲ್ಲಿದೆ ಕಂಪ್ಲೀಟ್​ ಡೀಟೆಲ್ಸ್

Kiran HV
| Updated By: ಗಂಗಾಧರ​ ಬ. ಸಾಬೋಜಿ

Updated on: May 31, 2024 | 9:13 PM

ಒಂದು ತಿಂಗಳಿನಿಂದಲೂ ಅಜ್ಞಾತವಾಗಿದ್ದ ಅತ್ಯಾಚಾರ ಆರೋಪಿ ಪ್ರಜ್ವಲ್‌ ರೇವಣ್ಣ ಕೊನೆಗೂ ಲಾಕ್ ಆಗಿದ್ದಾನೆ. ಅಷ್ಟೇ ಅಲ್ಲ 6 ದಿನ ಎಸ್‌ಐಟಿ ಕಸ್ಟಡಿಗೆ ನೀಡಲಾಗಿದೆ. ಇಲ್ಲಿವರೆಗೆ ಸಿಕ್ಕಿರೋ ದಾಖಲೆ ಮುಂದಿಟ್ಟು ಪ್ರಜ್ವಲ್​​ರನ್ನ ಎಸ್​ಐಟಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಒಂದುವಾರ ಫುಲ್‌ ಗ್ರಿಲ್‌ ಮಾಡಲಿದ್ದಾರೆ. ಎಸ್​ಐಟಿ ಮುಂದಿನ ಪ್ರಕ್ರಿಯೆ ಬಗ್ಗೆ ಟಿವಿ9 ಕ್ರೈಂ ಬ್ಯೂರೋ ಹೆಡ್​ ಕಿರಣ್​ ಹೆಚ್​ವಿ ಮಾಹಿತಿ ನೀಡಿದ್ದಾರೆ.

ಬೆಂಗಳೂರು, ಮೇ 31: ಸಹಾಯ ಕೇಳಿ ಬಂದ ಮಹಿಳೆ ಮೇಲೆ ಅತ್ಯಾಚಾರ, ಗನ್‌ತೋರಿಸಿ ಮಹಿಳೆ ಮೇಲೆ ರೇಪ್‌..ಮನೆಗೆಲಸದಾಕೆ ಮೇಲೆ ಲೈಂಗಿಕ ದೌರ್ಜನ್ಯ ಹೀಗೆ ಸಾಲು ಸಾಲು ಆರೋಪ ಹೊತ್ತಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna) ಬರೋಬ್ಬರಿ 34 ದಿನ ಅಜ್ಞಾತವಾಗಿದ್ದ. ವಿದೇಶದಲ್ಲೇ ತಲೆಮರೆಸಿಕೊಂಡಿದ್ದ. ಅದೇ ಆರೋಪಿ ನಿನ್ನೆ ಬೆಂಗಳೂರಿಗೆ ಕಾಲಿಡುತ್ತಿದ್ದಂತೆ ಎಸ್‌ಐಟಿ (SIT)
ಅರೆಸ್ಟ್ ಮಾಡಿದೆ. ಅಷ್ಟೇ ಅಲ್ಲ ಇವತ್ತು ಕೋರ್ಟ್‌ಗೆ ಹಾಜರುಪಡಿಸಿ 6 ದಿನ ಕಸ್ಟಡಿಗೆ ಪಡೆದಿದೆ. 107/24 ಅಡಿಯಲ್ಲಿ ಹೊಳೆ ನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಸಂಬಂಧ ಸೆಕ್ಷನ್‌ 502 ಅಡಿಯಲ್ಲಿ ಪ್ರಜ್ವಲ್​ನನ್ನ ಬಂಧಿಸಲಾಗಿದೆ. ಸದ್ಯ ಆರೋಪಿ ಪ್ರಜ್ವಲ್​ನನ್ನ ವಶಕ್ಕೆ ಪಡೆದಿರೋ SIT ಮೊದಲು ಆರೋಪಿ ಹೇಳಿಕೆ ಪಡೆಯಲಿದೆ. ಬಳಿಕ ಸ್ಥಳ ಮಹಜರು, ಆ ಬಳಿಕ ಸಂತ್ರಸ್ತೆಯಿಂದ ಗುರುತು ಪತ್ತೆ ಪ್ರಕ್ರಿಯೆ ನಡೆಯಲಿದೆ. ಆ ನಂತರ ಇಲ್ಲಿವರೆಗೆ ಸಿಕ್ಕಿರೋ ದಾಖಲೆ ಮುಂದಿಟ್ಟು ಪ್ರಜ್ವರನ್ನ ಎಸ್​ಐಟಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಒಂದುವಾರ ಫುಲ್‌ ಗ್ರಿಲ್‌ ಮಾಡಲಿದ್ದಾರೆ. ಎಸ್​ಐಟಿ ಮುಂದಿನ ಪ್ರಕ್ರಿಯೆ ಬಗ್ಗೆ ಟಿವಿ9 ಕ್ರೈಂ ಬ್ಯೂರೋ ಹೆಡ್​ ಕಿರಣ್​ ಹೆಚ್​ವಿ ಅವರು ಮಾಹಿತಿ ನೀಡಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.