ಮಗ, ಮೊಮ್ಮಗನಿಗೆ ಎದುರಾದ ಸಂಕಷ್ಟ ದೇವೇಗೌಡರನ್ನು ಕುಗ್ಗಿಸಿದೆಯೇ? ಇಲ್ಲಿದೆ ಮಾಹಿತಿ
HD Deve Gowda health updates: ಪ್ರಜ್ವಲ್ ರೇವಣ್ಣ ಪ್ರಕರಣ ಜೆಡಿಎಸ್ ಪಕ್ಷಕ್ಕೆ ಹಿನ್ನಡೆ ತಂದಿದೆ. ಜೆಡಿಎಸ್ ಮುಖ್ಯಸ್ಥ ಎಚ್ ಡಿ ದೇವೇಗೌಡ ಅವರನ್ನು ಮಾನಸಿಕವಾಗಿ ಕುಗ್ಗಿಸಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾಹಿತಿ ನೀಡಿದ ಶ್ರವಣಬೆಳಗೊಳ ಜೆಡಿಎಸ್ ಶಾಸಕ ಸಿಎನ್ ಬಾಲಕೃಷ್ಣ, ತಾವು ದೇವೇಗೌಡರಿಗೆ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದೇವೆ ಎಂದಿದ್ದಾರೆ. ಗೌಡರು ಮಾನಸಿಕವಾಗಿ ನೊಂದಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ. ತಾವು ಯೋಚಿಸಬೇಡಿ ಎಂದು ಧೈರ್ಯ ಹೇಳಿದ್ದಾಗಿ ತಿಳಿಸಿದ್ದಾರೆ.
ಹಾಸನ, ಮೇ 6: ಎಚ್ ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧದ ಪ್ರಕರಣಗಳು ದೇಶಾದ್ಯಂತ ಸದ್ದು ಮಾಡುತ್ತಿವೆ. ಲೈಂಗಿಕ ಕಿರುಕುಳ, ಅತ್ಯಾಚಾರ, ಬೆದರಿಕೆ, ಅಪಹರಣ ಆರೋಪಗಳಿರುವ ಮತ್ತು ಬರೋಬ್ಬರಿ ಮೂರು ಸಾವಿರ ವಿಡಿಯೋಗಳಿರುವ ಈ ಪ್ರಕರಣ ಹಾಸನಕ್ಕೆ ಕುಖ್ಯಾತಿ ತಂದಿರುವುದು ಹೌದು. ಚಟಗಳಿಂದ ಬಹುತೇಕ ಮುಕ್ತವಾಗಿರುವ ಎಚ್.ಡಿ. ದೇವೇಗೌಡರಿಗೆ ಈ ಬೆಳವಣಿಗೆ ಯಾವ ಪರಿ ನೋವು ತಂದಿರಬಹುದು? ಜೆಡಿಎಸ್ ಶಾಸಕ ಸಿಎನ್ ಬಾಲಕೃಷ್ಣ (CN Balakrishna) ಅವರು ದೇವೇಗೌಡರ ಆರೋಗ್ಯ ಸ್ಥಿತಿ ಮತ್ತು ಈಗಿನ ಭಾವ ಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದಾರೆ. ಹಾಸನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ, ತಾವು ದೂರವಾಣಿ ಮೂಲಕ ದೇವೇಗೌಡರನ್ನು ಮಾತನಾಡಿಸಿರುವುದಾಗಿ ಮಾಹಿತಿ ನೀಡಿದರು.
ಈ ಬೆಳವಣಿಗೆಗಳು ದೇವೇಗೌಡರ ಮನಸಿಗೆ ನೋವು ತಂದಿರುವುದು ಹೌದು. ತಪ್ಪು ಮಾಡಿದವರು ತಪ್ಪಿತಸ್ಥರಾಗಿ ಶಿಕ್ಷೆ ಅನುಭವಿಸುತ್ತಾರೆ. ತಾವು ಅದರ ಬಗ್ಗೆ ತಲೆ ಕಡೆಸಿಕೊಳ್ಳಬೇಡಿ ಎಂದು ಅವರಿಗೆ ಧೈರ್ಯ ಹೇಳಿದ್ದೇವೆ. ಒಂದು ದಿನಾಂಕ ನಿಗದಿ ಮಾಡಿ ಮುಖತಃ ಅವರನ್ನು ನಾವು ಭೇಟಿ ಮಾಡಿ ಬರುತ್ತೇವೆ ಎಂದು ಸಿಎನ್ ಬಾಲಕೃಷ್ಣ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಹಾಸನ ಜೆಡಿಎಸ್ ಜಿಲ್ಲಾಧ್ಯಕ್ಷ ಕೆಎಸ್ ಲಿಂಗೇಶ್ ಮೊದಲಾದವರು ಇದ್ದರು.
ಇದನ್ನೂ ಓದಿ: ಕಾಂಗ್ರೆಸ್ ಶಾಸಕರೊಬ್ಬರ ಚಿತಾವಣೆಯಿಂದ ಹೆಚ್ ಡಿ ರೇವಣ್ಣರನ್ನು ಬಂಧಿಸಲಾಗಿದೆ: ಕೆಎಸ್ ಲಿಂಗೇಶ್, ಮಾಜಿ ಶಾಸಕ
ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ