ಸಂಪರ್ಕದಲ್ಲಿರುವ ಪ್ರತಾಪ್ ಸಿಂಹ ಸಂಪೂರ್ಣವಾಗಿ ಸಹಕರಿಸುವ ಭರವಸೆ ನೀಡಿದ್ದಾರೆ: ಯದುವೀರ್ ಕೃಷ್ಣದತ್ ಒಡೆಯರ್

|

Updated on: Mar 14, 2024 | 3:05 PM

ಕಳೆದ ಎರಡು ಅವಧಿಗಳಿಗೆ ಸಂಸದರಾಗಿದ್ದ ಪ್ರತಾಪ್ ಸಿಂಹ ಅವರು ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ ನೀಡಿ ಸಮಾಜದ ಎಲ್ಲ ವರ್ಗಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಉತ್ತಮ ತಳಹದಿಯನ್ನು ಹಾಕಿದ್ದಾರೆ, ಅವರು ಮಾಡಿರುವ ಎಲ್ಲ ಉತ್ತಮ ಕೆಲಸಗಳನ್ನು ತಾವು ಮುಂದುವರಿಸಿಕೊಂಡು ಹೋಗೋದಾಗಿ ಹೇಳಿದರು.

ಬೆಂಗಳೂರು: ರಾಜ್ಯ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯದುವೀರ್ ಕೃಷ್ಣದತ್ ಒಡೆಯರ್ (Yaduveer Krishna Dutt Wodeyar), ಕಳೆದ ಎರಡು ಅವಧಿಗಳಿಗೆ ಸಂಸದರಾಗಿದ್ದ ಪ್ರತಾಪ್ ಸಿಂಹ (Pratap Simha) ಅವರು ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ (massive contribution) ನೀಡಿ ಸಮಾಜದ ಎಲ್ಲ ವರ್ಗಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಉತ್ತಮ ತಳಹದಿಯನ್ನು ಹಾಕಿದ್ದಾರೆ, ಅವರು ಮಾಡಿರುವ ಎಲ್ಲ ಉತ್ತಮ ಕೆಲಸಗಳನ್ನು ತಾವು ಮುಂದುವರಿಸಿಕೊಂಡು ಹೋಗೋದಾಗಿ ಹೇಳಿದರು. ಅಧಿಕೃತವಾಗಿ ಪ್ರತಾಪ್ ಸಿಂಹ ಅವರು ಯದುವೀರ್ ಅವರಿಗೆ ಬೆಂಬಲ ಮತ್ತು ಸಹಕಾರ ನೀಡುವುದಾಗಿ ಹೇಳಿದರೂ ಅವರು ಬೆಂಬಲಿಗರು ಅನ್ಯಮನಸ್ಕರಾಗಿದ್ದಾರೆ ಮತ್ತು ಬಹಿರಂಗವಾಗಿ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ, ಹಾಗಾಗಿ ತಮಗೆ ಸಮಸ್ಯೆ ಆಗಲಾರದದೆ ಅಂತ ಕೇಳಿದ ಪ್ರಶ್ನೆಗೆ ಉತ್ತರಿಸಿದ ಯದುವೀರ್, ಅಂಥದ್ದೇನೂ ಸಂಭವಿಸಲಾರದು, ಪ್ರತಾಪ್ ಸಿಂಹ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ, ಅವರು ಸಂಪೂರ್ಣ ಸಹಕಾರ ನೀಡೋದಾಗಿ ಹೇಳಿರುವುದರಿಂದ ಅವರ ಬೆಂಬಲಿಗರು ತಮಗೆ ಅಡ್ಡ್ಡಿಪಡಿಸಲಾರರು ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ಇದನ್ನೂ ಓದಿ:  ಕ್ಷೇತ್ರದಾಚೆಯ ಜನ ಸಹ ನನಗೆ ಟಿಕೆಟ್ ಸಿಗಲಿ ಅಂತ ಪ್ರಾರ್ಥಿಸುತ್ತಿದ್ದಾರೆ, ನನ್ನಂಥ ಭಾಗ್ಯಶಾಲಿ ಬೇರ‍್ಯಾರೂ ಇಲ್ಲ: ಪ್ರತಾಪ್ ಸಿಂಹ