ಮಾಧ್ಯಮಗೋಷ್ಠಿಯಲ್ಲಿ ಮಾತಾಡಿದ ಪ್ರೀತಂಗೌಡಗೆ ಬಸನಗೌಡ ಯತ್ನಾಳ್ ಹೆಸರು ಹೇಳಲೂ ಇಷ್ಟವಿಲ್ಲ

ಮಾಧ್ಯಮಗೋಷ್ಠಿಯಲ್ಲಿ ಮಾತಾಡಿದ ಪ್ರೀತಂಗೌಡಗೆ ಬಸನಗೌಡ ಯತ್ನಾಳ್ ಹೆಸರು ಹೇಳಲೂ ಇಷ್ಟವಿಲ್ಲ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 16, 2024 | 4:06 PM

ಮೂರು ತಂಡಗಳು ಒಟ್ಟಿಗೆ ಹೋರಾಟ ನಡೆಸದೆ ಬೇರೆ ಬೇರೆ ದಿಕ್ಕಿಗೆ ತೆರಳಿ ಜನ ಜಾಗೃತಿ ಮೂಡಿಸುತ್ತವೆ ಎಂದು ಪ್ರೀತಂ ಗೌಡ ಹೇಳುತ್ತಾರೆ. ಆಂತರಿಕ ಸಭೆಗೆ ಯತ್ನಾಳ್ ಅವರನ್ನು ಕರೆಯಲಾಗಿತ್ತೇ ಎಂದು ಮಾಧ್ಯಮದವರು ಕೇಳುವ ಪ್ರಶ್ನೆಗೆ ಪ್ರೀತಂ ಗೌಡ, ಯಾರಿಗೆಲ್ಲ ವಿಷಯ ತಿಳಿಸಬೇಕಾಗಿತ್ತೋ ಅವರಿಗೆ ಫೋನಲ್ಲಿ ತಿಳಿಸಲಾಗಿದೆ ಎಂದು ಹೇಳಿದರು.

ಬೆಂಗಳೂರು: ಪಕ್ಷದ ಪರವಾಗಿ ಮಾಧ್ಯಮಗೋಷ್ಠಿಯಲ್ಲಿ ಮಾತಾಡಿದ ಮಾಜಿ ಶಾಸಕ ಪ್ರೀತಂ ಗೌಡ ಹೇಳುವುದನ್ನು ಕೇಳಿದರೆ ಪಕ್ಷದ ರೆಬೆಲ್ ನಾಯಕರು ಮತ್ತು ಉಳಿದ ನಾಯಕರ ನಡುವಿನ ಅಂತರ ಹೆಚ್ಚುತ್ತಿರುವುದು ಸ್ಪಷ್ಟವಾಗುತ್ತದೆ. ವಕ್ಫ್ ಭೂ ವಿವಾದಕ್ಕೆ ಸಂಬಂಧಿಸಿದಂತೆ ಬಸನಗೌಡ ಪಾಟೀಲ್ ಯತ್ನಾಳ್ ನಾಯಕತ್ವದಲ್ಲಿ ರೆಬೆಲ್ ನಾಯಕರು ರಾಜ್ಯವ್ಯಾಪಿ ಆಂದೋಲನ ನಡೆಸಲು ಮುಂದಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತೆರೆಡು ತಂಡಗಳನ್ನು ರಚಿಸಿದ್ದಾರೆ. ಬಿಜೆಪಿ ಹೋರಾಟದ ರೂಪುರೇಷೆಗಳನ್ನು ವಿವರಿಸುವಾಗ ಪ್ರೀತಂಗೌಡ ಅವರು ಯತ್ನಾಳ್ ಹೆಸರು ಬಾಯಿಂದ ಹೇಳಲು ಕೂಡ ಬಯಸಲಿಲ್ಲ!

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕರ್ನಾಟಕದ ರೈತರಿಗೆ ವಕ್ಫ್ ನೋಟಿಸ್: ಬಿಜೆಪಿಯಿಂದ ರಾಜ್ಯಾದ್ಯಂತ ಜಾಗೃತಿ ಅಭಿಯಾನ