AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ಎಕ್ಸ್​​ಪೋದಲ್ಲಿ ತಪಸ್ವಿನಿ-ಶ್ರೀರಾಮ್; ಪ್ರೇಮದ ಊರಲಿ ಸಕಸ್ಸ್ ಸೆಲೆಬ್ರೇಷನ್

ಟಿವಿ9 ಎಕ್ಸ್​​ಪೋದಲ್ಲಿ ತಪಸ್ವಿನಿ-ಶ್ರೀರಾಮ್; ಪ್ರೇಮದ ಊರಲಿ ಸಕಸ್ಸ್ ಸೆಲೆಬ್ರೇಷನ್

ರಾಜೇಶ್ ದುಗ್ಗುಮನೆ
|

Updated on: Oct 30, 2026 | 2:30 PM

Share

ನಟಿ ತಪಸ್ವಿನಿ ಮತ್ತು ನಟ ಶ್ರೀರಾಮ್ ಪ್ರೇಮದ ಊರಲ್ಲಿ ಚಿತ್ರದ ಭರ್ಜರಿ ಯಶಸ್ಸಿನ ಬಗ್ಗೆ ಟಿವಿ9 ಲೈಫ್‌ಸ್ಟೈಲ್, ಆಟೋಮೊಬೈಲ್ ಫರ್ನಿಚರ್ ಎಕ್ಸ್‌ಪೋದಲ್ಲಿ ಸಂತಸ ಹಂಚಿಕೊಂಡರು. ಪ್ರೇಕ್ಷಕರ ಪ್ರೀತಿ, ತಂಡದ ಶ್ರಮವನ್ನು ಶ್ಲಾಘಿಸಿದರು. ಶಂಕರ್ ನಾಗ್ ಹೋಲಿಕೆಯ ಬಗ್ಗೆ ಶ್ರೀರಾಮ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಮುಂದಿನ ಯೋಜನೆಗಳು ಮತ್ತು ವೀಕ್ಷಕರ ಭರವಸೆಗಳ ಕುರಿತು ಮಾತನಾಡಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಟಿವಿ9 ಲೈಫ್‌ಸ್ಟೈಲ್, ಆಟೋಮೊಬೈಲ್ ಮತ್ತು ಫರ್ನಿಚರ್ ಎಕ್ಸ್‌ಪೋ 2026ಕ್ಕೆ ‘ಪ್ರೇಮದ ಊರಲಿ’ ಚಲನಚಿತ್ರದ ನಾಯಕ ನಟ ಶ್ರೀರಾಮ್ ಮತ್ತು ನಾಯಕಿ ನಟಿ ಅತಿಥಿಗಳಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಚಿತ್ರದ ಭರ್ಜರಿ ಯಶಸ್ಸಿನ ಕುರಿತು ಸಂತಸ ಹಂಚಿಕೊಂಡರು.

ನಟಿ ತಪಸ್ವಿನಿ ಮಾತನಾಡಿ, ‘ಕರ್ನಾಟಕದ ಜನರು ಪ್ರೇಮದ ಊರಲಿ ಚಿತ್ರಕ್ಕೆ ನೀಡಿದ ಪ್ರೀತಿ ನಿಜಕ್ಕೂ ಆಶೀರ್ವಾದ. ಈ ಯಶಸ್ಸನ್ನು ಯಾರೂ ನಿರೀಕ್ಷಿಸಿರಲಿಲ್ಲ. ನಿರ್ದೇಶಕರು ಮತ್ತು ನಿರ್ಮಾಣ ತಂಡಕ್ಕೆ ಈ ಗೆಲುವಿನ ಬಹುಪಾಲು ಶ್ರೇಯಸ್ಸು ಸಲ್ಲುತ್ತದೆ. ಮಿಸ್ಟರ್ ಜ್ಯಾಕ್ ಚಿತ್ರ ಡಿಸೆಂಬರ್ 4 ರಂದು ಬಿಡುಗಡೆಯಾಗಲಿದೆ’ ಎಂದು ತಿಳಿಸಿದರು. ನಟ ಶ್ರೀರಾಮ್, ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸಿದರು. ಜನರೇ ಈ ಚಿತ್ರವನ್ನು ದೊಡ್ಡ ಬ್ಲಾಕ್‌ಬಸ್ಟರ್ ಮಾಡಿದ್ದಾರೆ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More