AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಅವರ ಸಮಯಪ್ರಜ್ಞೆ ಪಕ್ಷದ ಆಂತರಿಕ ಮತಭೇದ ಮತ್ತೊಮ್ಮೆ ಬಯಲಾಗದಂತೆ ತಡೆಯಿತು!

ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಅವರ ಸಮಯಪ್ರಜ್ಞೆ ಪಕ್ಷದ ಆಂತರಿಕ ಮತಭೇದ ಮತ್ತೊಮ್ಮೆ ಬಯಲಾಗದಂತೆ ತಡೆಯಿತು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Feb 18, 2022 | 5:39 PM

Share

ಅರ್ಷದ್ ಹಾಗ ಹೇಳಿದಾಗ ಸಿದ್ದರಾಮಯ್ಯ ಗಾಬರಿಯಾಗುವುದಿಲ್ಲ. ಅವರು ಸೀಸನ್ಡ್ ಪಾಲಿಟಿಷಿಯನ್ ಮಾರಾಯ್ರೇ. ಎಲ್ಲಿ, ಯಾವಾಗ, ಏನು ಮಾತಾಡಬೇಕು ಅಂತ ಸಲೀಂ ಮತ್ತು ಉಗ್ರಪ್ಪಕ್ಕಿಂತ ಚೆನ್ನಾಗಿ ತಿಳಿದುಕೊಂಡಿದ್ದಾರೆ!

ಸಚಿವ ಕೆ ಎಸ್ ಈಶ್ವರಪ್ಪ (KS Eshwarappa) ಅವರ ವಿರುದ್ಧ ಕಾಂಗ್ರೆಸ್ ಪಕ್ಷದ ನಾಯಕರು ಮಾಡುತ್ತಿರುವ ಹೋರಾಟ ಮುಂದುವರಿದಿದೆ. ಈ ಹಿನ್ನೆಲೆಯಲ್ಲೇ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (Vishveshwar Hegde Kageri) ಅವರು ಸದನದ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು. ಅದಾದ ಮೇಲೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷ (KPCC) ಡಿಕೆ ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ವಿಧಾನಸನಭೆ ಅವರಣದಲ್ಲಿ ಒಂದು ಸುದ್ದಿಗೋಷ್ಟಿ ನಡೆಸಿದರು. ಎಲ್ಲ ಮಾಧ್ಯಮಗಳ ಪ್ರತಿನಿಧಿಗಳು ಟೇಬಲ್ ಮೇಲೆ ಮೈಕ್ ಗಳನ್ನಿಟ್ಟು ಕೆಮೆರಾಗಳನ್ನು ತಯಾರು ಮಾಡಿಕೊಂಡು ನಾಯಕರು ಮಾತು ಆರಂಭಿಸಲಿ ಅಂತ ಕಾಯುತ್ತಿದ್ದರು. ಆದರೆ ಸಿದ್ದರಾಮಯ್ಯ ಶಿವಕುಮಾರ ಅವರ ಬರೋಣಕ್ಕಾಗಿ ಕಾಯುತ್ತಿದ್ದರು. ಅವರ ಪಕ್ಕದಲ್ಲಿ ಕೂತಿರುವ ನಾಯಕರು ಸಿದ್ದರಾಮಯ್ಯನವರ ಕಿವಿಯಲ್ಲಿ ಏನನ್ನೋ ಪಿಸುಗುಡುತ್ತಾರೆ. ಪ್ರಾಯಶಃ ನೀವು ಪತ್ರಿಕಾ ಗೋಷ್ಟಿ ಶುರು ಮಾಡಿ ಅಂತ ಹೇಳಿರಬಹುದು. ನಿಮಗೆ ಅರ್ಜೆಂಟ್ ಇದ್ರೆ ಮಾಡ್ಕೊಳ್ಳಿ ಸರ್ ಅಂತ ಅವರಿಬ್ಬರ ಎಡಭಾಗದಲ್ಲಿ ಕುಳಿತಿರುವ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಹೇಳುತ್ತಾರೆ.

ಅದಕ್ಕೆ ಸಿದ್ದರಾಮಯ್ಯನವರು, ಹಾಗಲ್ಲ ಇದರಲ್ಲಿ ಪಾರ್ಟಿಯನ್ನೂ ಸಹ ಇನ್ವಾಲ್ವ್ ಮಾಡಬೇಕು, ಇಲ್ಲಾಂದ್ರೆ ಬರಿ ಸಿದ್ದರಾಮಯ್ಯನೇ ಮಾತಾಡ್ತಿದ್ದಾನೆ ಅಂತ ಅಂದುಕೊಳ್ಳುತ್ತಾರೆ ಅಂತ ಜೋರಾಗಿಯೇ ಹೇಳುತ್ತಾರೆ. ಅವರೂ ಎಲ್ಲಿ ಸಲೀಂ ಅಹಮದ್ ಮತ್ತು ವಿಎಸ್ ಉಗ್ರಪ್ಪನವರ ಹಾಗೆ ಎಡವಟ್ಟು ಮಾಡಿಬಿಡ್ತಾರೋ ಅಂತ ರಿಜ್ವಾನ್, ಮೈಕ್ ಆನ್ ಆಗಿದೆ ಅಂತ ಹೇಳುತ್ತಾರೆ!

ಅರ್ಷದ್ ಹಾಗ ಹೇಳಿದಾಗ ಸಿದ್ದರಾಮಯ್ಯ ಗಾಬರಿಯಾಗುವುದಿಲ್ಲ. ಅವರು ಸೀಸನ್ಡ್ ಪಾಲಿಟಿಷಿಯನ್ ಮಾರಾಯ್ರೇ. ಎಲ್ಲಿ, ಯಾವಾಗ, ಏನು ಮಾತಾಡಬೇಕು ಅಂತ ಸಲೀಂ ಮತ್ತು ಉಗ್ರಪ್ಪಕ್ಕಿಂತ ಚೆನ್ನಾಗಿ ತಿಳಿದುಕೊಂಡಿದ್ದಾರೆ!

ಇದನ್ನೂ ಓದಿ:   Shocking Video: ಅಂಬೆಗಾಲಿಡುತ್ತಿದ್ದ 7 ತಿಂಗಳ ಮಗು ಮೇಲೆ ಹಾರಲು ಯತ್ನಿಸಿದ ಚಿರತೆ; ಮೈ ಜುಮ್ಮೆನಿಸುವ ವಿಡಿಯೋ ವೈರಲ್