Road Mishap:  ಚಿಕ್ಕನಾಯಕನಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಖಾಸಗಿ ಬಸ್, ಪ್ರಯಾಣಿಕರಿಗೆ ಚಿಕ್ಕಪುಟ್ಟ ಗಾಯ, ಪ್ರಾಣಾಪಾಯವಿಲ್ಲ

|

Updated on: Apr 08, 2023 | 2:33 PM

ಖಾಸಗಿ ಬಸ್ ಹಿರಿಯೂರಿನಿಂದ ಚಿಕ್ಕನಾಯಕನ ಹಳ್ಳಿ ಕಡೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಹುಳಿಯಾರು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.  

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ (Chikkanayakanahalli) ತಾಲ್ಲೂಕಿನ ಬಂಡೆಗೇಟ್ ಬಳಿ ಇಂದು ಮಧ್ಯಾಹ್ನ ಉರುಳಿಬಿದ್ದ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರು ಅದೃಷ್ಟವಂತರೇ. ಎಲ್ಲರೂ ಸಣ್ಣಪುಟ್ಟ ಗಾಯಗಳಿಂದ (minor injuries) ಪಾರಾಗಿದ್ದಾರೆ. ಗಾಯಗೊಂಡವರನ್ನು ಚಿಕ್ಕನಾಯಕನಹಳ್ಳಿ ತಾಲ್ಲೂಕು ಆಸ್ಪತ್ರೆಗೆ ಕರೆದ್ಯೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಟಿವಿ9 ಕನ್ನಡ ವಾಹಿನಿಯ ತುಮಕೂರು ವರದಿಗಾರ ನೀಡಿರುವ ಮಾಹಿತಿಯ ಪ್ರಕಾರ  ಖಾಸಗಿ ಬಸ್ ಹಿರಿಯೂರಿನಿಂದ (Hiriyur) ಚಿಕ್ಕನಾಯಕನ ಹಳ್ಳಿ ಕಡೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಹುಳಿಯಾರು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Apr 08, 2023 02:32 PM