ರಾಜಭವನದ ರಸ್ತೆ ಬ್ಲಾಕ್ ಆಗುತ್ತೆ, ದಯವಿಟ್ಟು ಪಕ್ಕಕ್ಕೆ ಬನ್ನಿ ಸಾರ್ ಅಂತ ಪೊಲೀಸ್ ಗೋಗರೆದರೂ ಕೇಳದ ವಾಟಾಳ್ ನಾಗರಾಜ್

Updated on: Jun 10, 2025 | 3:42 PM

ಪೊಲೀಸರು ಮಾಡುವ ಕೆಲಸವನ್ನು ಥ್ಯಾಂಕ್​​ಲೆಸ್ ಜಾಬ್ ಅನ್ನುತ್ತಾರೆ. ಏನೇ ಅನಾಹುತ ನಡೆದರೂ ಟಾರ್ಗೆಟ್ ಆಗೋದು ಅವರೇ. ಕಾಲ್ತುಳಿತದ ಪ್ರಸಂಗವನ್ನು ನೋಡಿದ್ದೇವೆ. ಇಲ್ನೋಡಿ, ಪೊಲೀಸರು ವಿನಯವಂತಿಕೆಯಿಂದ, ನಮತ್ರೆಯಿಂದ ಕನ್ನಡ ಹೋರಾಟಗಾರರಿಗೆ ಮನವಿ ಮಾಡಿಕೊಳ್ಳುತ್ತಿದ್ದಾರೆ, ಅದರೆ ಅವರ ಮಾತನ್ನು ಕೇಳಲು ಯಾರೂ ರೆಡಿಯಿಲ್ಲ. ವಾಟಾಳ್ ನಾಗರಾಜ್ ಮತ್ತು ಹೋರಾಟಗಾರರು ಬೆಂಗಳೂರು ಕಾಲ್ತುಳಿತ ಪ್ರಕರಣದ ಹಿನ್ನೆಲೆಯಲ್ಲಿ ಹೋರಾಟ ಮಾಡಲು ಬಂದಿದ್ದಾರೆ.

ಬೆಂಗಳೂರು, ಜೂನ್ 10: ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಸಾಮಾನ್ಯವಾಗಿ ಹೀಗೆ ಪೊಲೀಸರೊಂದಿಗೆ ಹ ಸಾಧಿಸುವುದಿಲ್ಲ. ಕಳೆದ ಐದು ದಶಕಗಳಿಂದ (five decades) ಅವರು ಕನ್ನಡ ಭಾಷೆ-ನೆಲ-ಜಲದ ಪರವಾಗಿ ನಿರಂತರವಾಗಿ ಹೋರಾಡುತ್ತಾ ಬಂದಿದ್ದಾರೆ. ಪೊಲೀಸರೊಂದಿಗೆ ವಾಗ್ವಾದ ಮಾಡಿದ್ದು ಅಪರೂಪದ ಸಂದರ್ಭಗಳಲ್ಲಿ ಮಾತ್ರ. ಆದರೆ ಇವತ್ತು ಸ್ವಲ್ಪ ಭಿನ್ನವಾಗಿ ಅವರು ಕಾಣಿಸಿದರು. ರಾಜಭವನಕ್ಕೆ ಹೋಗುವ ರಸ್ತೆಯ ಮುಂದೆ ಕಾರನ್ನು ನಿಲ್ಲಿಸಿ ಮಾಧ್ಯಮದವರಿಗೆ ಪೋಸ್​ ನೀಡಲು ಅಣಿಯಾದರು. ಪೊಲೀಸರು, ಸರ್ ಇದು ರಾಜಭವನ ರಸ್ತೆ ದಯವಿಟ್ಟು ಪಕ್ಕಕ್ಕೆ ಬಂದು ನಿಂತ್ಕೊಳ್ಳಿ ಅಂತ ವಿನಮ್ರತೆಯಿಂದ ಕೇಳಿಕೊಂಡರೂ ನಾಗರಾಜ್ ಕೇಳದೆ ಅವರೊಂದಿಗೆ ವಾದಕ್ಕೆ ನಿಂತರು. ರಸ್ತೆ ಬ್ಲಾಕ್ ಆಗಿ ವಾಹನಗಳ ಸವಾರರು ಎಡೆಬಿಡದೆ ಹಾರ್ನ್​ ಮಾಡೋದನ್ನು ಕೇಳಿಸಿಕೊಳ್ಳಬಹುದು.

ಇದನ್ನೂ ಓದಿ:  ಎಲ್ ಅಂಡ್ ಟಿ ಮುಖ್ಯಸ್ಥರ 90 ಗಂಟೆ ಕೆಲಸದ ಹೇಳಿಕೆ; ವಾಟಾಳ್ ನಾಗರಾಜ್ ಪ್ರತಿಭಟನೆ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ