ಸುರತ್ಕಲ್ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ, ಮಹಿಳೆ ಕೇಳುವ ಪ್ರಶ್ನೆಗಳಿಗೆ ಪೊಲೀಸ್ ಕಮೀಶನರ್ ನಿರುತ್ತರ
ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಅವರ ಗಮನಕ್ಕೆ ತಾರದೆ ನೊಟೀಸ್ ಗಳನ್ನು ನೀಡಲಾಗುತ್ತಿದೆಯೇ? ನಿಮ್ಮಿಂದ ನಮಗೆ ಉತ್ತರ ಬೇಕು ಅಂತ ಮಹಿಳೆ ಜೋರು ಮಾಡುತ್ತಿದ್ದಾರೆ.
ಮಂಗಳೂರು: ಸುರತ್ಕಲ್ ಟೋಲ್ ಗೇಟ್ (Suratkal tollgate) ತೆರವಿಗೆ ಒತ್ತಾಯಿಸಿ ಕಳೆದ ಕೆಲ ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಆದರೆ ಸುರತ್ಕಲ್ ಪೊಲೀಸರು ಪ್ರತಿಭಟನೆಕಾರರಿಗೆ ನೊಟೀಸುಗಳನ್ನು (notice) ನೀಡುತ್ತಿದ್ದಾರೆ. ಇದೇ ಹಿನ್ನೆಲೆಯಲ್ಲಿ ಪ್ರತಿಭಟನಾನಿರತ ಮಹಿಳೆಯೊಬ್ಬರು ಮಂಗಳೂರು ಪೊಲೀಸ್ ಕಮೀಶನರ್ ಎನ್ ಶಶಿಕುಮಾರ್ (N Shashikumar) ಅವರಿಗೆ ಕೆಲವು ಕಠಿಣ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ ಆದರೆ ಅಧಿಕಾರಿಯಿಂದ ಮಹಿಳೆಗೆ ಸಮಾಧಾನಕರ ಉತ್ತರ ಸಿಗುತ್ತಿಲ್ಲ. ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಅವರ ಗಮನಕ್ಕೆ ತಾರದೆ ನೊಟೀಸ್ ಗಳನ್ನು ನೀಡಲಾಗುತ್ತಿದೆಯೇ? ನಿಮ್ಮಿಂದ ನಮಗೆ ಉತ್ತರ ಬೇಕು ಅಂತ ಮಹಿಳೆ ಜೋರು ಮಾಡುತ್ತಿದ್ದಾರೆ.