ತಮಿಳುನಾಡುಗೆ ನೀರು ಬಿಡುವಂತೆ ಸಿಡಬ್ಲ್ಯೂಆರ್ ಸಿ ಆದೇಶ, ಮಂಡ್ಯ ಭಾಗದಲ್ಲಿ ತೀವ್ರಗೊಂಡ ಪ್ರತಿಭಟನೆಗಳು

|

Updated on: Sep 13, 2023 | 11:03 AM

ಕಾವೇರಿ ನಮ್ಮದು, ಕಾವೇರಿ ನೀರು ನಮ್ಮದು, ಅಯ್ಯಯ್ಯೋ ಅನ್ಯಾಯ ಅಂತ ಘೋಷಣೆಗಳನ್ನು ಕೂಗುತ್ತಾ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ. ಬರಿಮೈಯಲ್ಲಿರುವ ಹಿರಿಯ ಹೋರಾಟಗಾರರೊಬ್ಬರು ಕೈಯಲ್ಲೊಂದು ಪಾತ್ರೆ ಹಿಡಿದು ರಸ್ತೆಯಲ್ಲಿ ಉರುಳುತ್ತಾ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಮಂಡ್ಯ: ತಮಿಳುನಾಡುಗೆ (Tamil Nadu) ಮುಂದಿನ 15 ದಿನಗಳವರೆಗೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ (CWRC) ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಮಂಡ್ಯ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರತಿಭಟನೆಗಳು ತೀವ್ರಗೊಂಡಿವೆ. ಕೆಆರ್ ಎಸ್ ಜಲಾಶಯದಲ್ಲಿ (KRS Dam) ನೀರಿನ ಮಟ್ಟ ದಿನೇದಿನೆ ಕುಸಿಯುತ್ತಿದೆ. ಬೇಸಾಯದ ಮಾತು ಹಾಗಿರಲಿ, ಕುಡಿಯುವದಕ್ಕೂ ನೀರಿಗೆ ಕೊರತೆ ಉಂಟಾಗುವ ಸ್ಥಿತಿ ನಿರ್ಮಾಣವಾಗಲಿದೆ. ನಗರದ ಸಂಜಯ್ ಸರ್ಕಲ್ ನಲ್ಲಿ ರೈತರು ಮತ್ತು ಕನ್ನಡ ಪರ ಹೋರಾಟಗಾರರು ವಿನೂತನ ಮಾದರಿಯಲ್ಲಿ ಕಾವೇರಿ ನೀರಿಗಾಗಿ ಪ್ರದರ್ಶನ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಕಾವೇರಿ ನಮ್ಮದು, ಕಾವೇರಿ ನೀರು ನಮ್ಮದು, ಅಯ್ಯಯ್ಯೋ ಅನ್ಯಾಯ ಅಂತ ಘೋಷಣೆಗಳನ್ನು ಕೂಗುತ್ತಾ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ. ಬರಿಮೈಯಲ್ಲಿರುವ ಹಿರಿಯ ಹೋರಾಟಗಾರರೊಬ್ಬರು ಕೈಯಲ್ಲೊಂದು ಪಾತ್ರೆ ಹಿಡಿದು ರಸ್ತೆಯಲ್ಲಿ ಉರುಳುತ್ತಾ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ