ಬೈಕ್‌ನಲ್ಲಿ ಬಂದು ಮತ ಚಲಾಯಿಸಿದ ಪುದುಚೇರಿ ಸಿಎಂ ರಂಗಸ್ವಾಮಿ! ವಿಡಿಯೋ ವೈರಲ್
ಪುದುಚೇರಿ ಸಿಎಂ ಎನ್. ರಂಗಸ್ವಾಮಿ ಅವರು ವಿಧಾನಸಭಾ ಚುನಾವಣೆಯಲ್ಲಿ ಬೈಕ್‌ನಲ್ಲಿ ಬಂದು ಮತ ಚಲಾಯಿಸುವ ಮೂಲಕ ತಮ್ಮ ಸರಳತೆಯನ್ನು ಪ್ರದರ್ಶಿಸಿದ್ದಾರೆ. ಮಂಗಲಂ ಮತ್ತು ತಟ್ಟಂಚವಾಡಿ ಕ್ಷೇತ್ರಗಳ ಅಭ್ಯರ್ಥಿಯಾಗಿರುವ ಇವರು ಸಾಮಾನ್ಯರಂತೆ ಬೈಕ್ ಏರಿ ಬಂದಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ವಿಡಿಯೋ ಇಲ್ಲಿದೆ ನೋಡಿ.
ಪುದುಚೇರಿ, ಏಪ್ರಿಲ್ 9: ಪುದುಚೇರಿ ಮುಖ್ಯಮಂತ್ರಿ ಹಾಗೂ ಎಐಎನ್ಆರ್‌ಸಿ (AINRC) ಮುಖ್ಯಸ್ಥ ಎನ್. ರಂಗಸ್ವಾಮಿ ವಿಧಾನಸಭೆ ಚುನಾವಣೆ ವೇಳೆ ಸರಳತೆ ಮೆರೆದಿದ್ದಾರೆ. ಮಂಗಲಂ, ತಟ್ಟಂಚವಾಡಿ ಕ್ಷೇತ್ರಗಳ ಅಭ್ಯರ್ಥಿಯಾಗಿರುವ ಅವರು, ಯಾವುದೇ ಹಮ್ಮುಬಿಮ್ಮಿಲ್ಲದೆ ಸಾಮಾನ್ಯರಂತೆ ಬೈಕ್ ಚಲಾಯಿಸಿಕೊಂಡು ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಮತದಾನದ ಬಳಿಕ ಅದೇ ಬೈಕ್‌ನಲ್ಲಿ ಮರಳಿದ ಸಿಎಂ ಅವರ ವಿಡಿಯೋ ಮತ್ತು ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.
ವಿಡಿಯೋ ಕೃಪೆ: ಎಎನ್ಐ
ಚುನಾವಣೆ ಸಂಬಂಧಿತ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Apr 09, 2026 12:17 PM
Follow Us

