ಪುನೀತ್ ರಾಜಕುಮಾರ ಅವರ ಕೆಲ ಸಿನಿಮಾಗಳೂ ಸೆಟ್ಟೇರಿದ ನಂತರ ಡ್ರಾಪ್ ಆಗಿರುವ ಉದಾಹರಣೆಗಳಿವೆ!

ಪುನೀತ್ ರಾಜಕುಮಾರ ಅವರ ಕೆಲ ಸಿನಿಮಾಗಳೂ ಸೆಟ್ಟೇರಿದ ನಂತರ ಡ್ರಾಪ್ ಆಗಿರುವ ಉದಾಹರಣೆಗಳಿವೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 02, 2021 | 7:11 PM

ಪುನೀತ್ ನಟಿಸಿದ ‘ಮಿಲನ’ ಚಿತ್ರ ಸತತವಾಗಿ ಒಂದು ವರ್ಷದವರೆಗೆ ಓಡಿತ್ತು. ಈ ಚಿತ್ರದ ನಿರ್ದೇಶಕ ಪ್ರಕಾಶ ಅವರು ‘ಮಿಲನ’ಕ್ಕಿಂತ ಮೊದಲು ಪುನೀತ್ ನಾಯಕನಾಗಿದ್ದ ‘ಗಾಂಧಿ’ ಚಿತ್ರವನ್ನು ನಿರ್ದೇಶಿಸಬೇಕಿತ್ತು

ಕೆಲವು ಸುಪ್ರಸಿದ್ಧ ನಟರ ಚಿತ್ರಗಳು ಸೆಟ್ಟೇರಿ ಕೆಲ ದಿನಗಳವರೆಗೆ ಚಿತ್ರೀಕರಣ ಸಹ ಆದ ನಂತರ ಡ್ರಾಪ್ ಅದ ಉದಾಹರಣೆಗಳು ನಮಗೆ ಬೇಕಾದಷ್ಟು ಸಿಗುತ್ತವೆ. ಇದಕ್ಕೆ ಪುನೀತ್ ರಾಜಕುಮಾರ ಅವರ ಕೆಲ ಸಿನಿಮಾಗಳೂ ಹೊರತಾಗಿರಲಿಲ್ಲ. ಹಾಗೆಯೇ, ಕೆಲ ಚಿತ್ರಗಳಿಗೆ ಮುಹೂರ್ತದ ಸಂದಭದಲ್ಲಿ ಒಂದು ಹೆಸರು ಕೊಟ್ಟಿರುತ್ತಾರೆ ಅದರೆ, ಶೂಟಿಂಗ್ ಮುಗಿದ ನಂತರ ಹೆಸರು ಬದಲಾಯಿಸಿ ಬಿಡುತ್ತಾರೆ. ಪುನೀತ್ ಅವರ ಹೋಮ್ ಪ್ರೊಡಕ್ಷನ್ನಲ್ಲಿ ತಯಾರಾಗಬೇಕಿದ್ದ ‘ಮಯೂರ’ ಚಿತ್ರದಲ್ಲಿ ಪುನೀತ್ ಒಬ್ಬ ವಕೀಲನಾಗಿ ನಟಿಸಬೇಕಿತ್ತು. ಆದರೆ ಸಿನಿಮಾದ ಶೂಟಿಂಗ್ ಆರಂಭಗೊಂಡ ಕೇವಲ 5 ದಿನಗಳ ನಂತರ ಅದರ ನಿರ್ದೇಶಕ ಶೋಭನ್ ಅಕಸ್ಮಿಕವಾಗಿ ಮರಣವನ್ನಪ್ಪಿದ್ದರಿಂದ ಆ ಪ್ರಾಜೆಕ್ಟ್ ಡ್ರಾಪ್ ಮಾಡಲಾಯಿತು.

ನಿಮಗೆ ಗೊತ್ತಿರಬಹುದು, ಡಾ ರಾಜ್ ಅಭಿನಯದ ಬಂಗಾರದ ಮನುಷ್ಯ ಸತತವಾಗಿ 102 ವಾರಗಳ ಕಾಲ ಓಡಿ ಅನೇಕ ವರ್ಷಗಳ ವರೆಗೆ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತಿ ಹೆಚ್ಚು ದಿನ ನಡೆದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿತ್ತು. ಅಮಿತಾಬ್ ಬಚ್ಚನ್, ಧರ್ಮೇಂದ್ರ ಮತ್ತು ಸಂಜೀವ ಕುಮಾರ ಅಭಿನಯದ ‘ಶೋಲೆ’ ಚಿತ್ರ ಈ ದಾಖಲೆಯನ್ನು ಅಳಿಸಿ ಹಾಕಿತು.

ಪುನೀತ್ ನಟಿಸಿದ ‘ಮಿಲನ’ ಚಿತ್ರ ಸತತವಾಗಿ ಒಂದು ವರ್ಷದವರೆಗೆ ಓಡಿತ್ತು. ಈ ಚಿತ್ರದ ನಿರ್ದೇಶಕ ಪ್ರಕಾಶ ಅವರು ‘ಮಿಲನ’ಕ್ಕಿಂತ ಮೊದಲು ಪುನೀತ್ ನಾಯಕನಾಗಿದ್ದ ‘ಗಾಂಧಿ’ ಚಿತ್ರವನ್ನು ನಿರ್ದೇಶಿಸಬೇಕಿತ್ತು. ಆದರೆ ಅದ್ಯಾವುದೋ ಕಾರಣಕ್ಕೆ ಈ ಸಿನಿಮಾವನ್ನು ಕೈ ಬಿಟ್ಟು ‘ಮಿಲನ’ ಚಿತ್ರವನ್ನು ಕೈಗೆತ್ತಿಕೊಂಡರು.

ಹಾಗೆಯೇ, ಪುನೀತ್ ಮತ್ತು ಯೋಗರಾಜ್ ಭಟ್ ಕಾಂಬಿನೇಷನಲ್ಲಿ ‘ಪರಮಾತ್ಮ’ಕ್ಕಿಂತ ಮೊದಲು ‘ಲಗೋರಿ’ ಚಿತ್ರ ಸೆಟ್ಟೇರಬೇಕಿತ್ತು. ಆದರೆ ಈ ಚಿತ್ರದ ಶೂಟಿಂಗ್ ನಡೆಯಲೇ ಇಲ್ಲ. ಆಮೇಲೆ, ‘ಜೋಗಿ’ ಖ್ಯಾತಿಯ ಪ್ರೇಮ್ನಿರ್ದೇಶನದ ‘ರಾಜ್ ದಿ ಶೋಮ್ಯಾನ್’ ಚಿತ್ರಕ್ಕೆ ಮೊದಲಿಗೆ ‘ಪೋಲಿ’ ಅಂತ ನಾಮಕರಣ ಮಾಡಲಾಗಿತ್ತು. ಆದರೆ, ಫ್ಯಾಮಿಲಿ ಆಡಿಯನ್ಸ್ಗೆ ಈ ಟೈಟಲ್ ಇಷ್ಟವಾಗಲಾರದು ಎಂಬ ಕಾರಣಕ್ಕೆ ಅದನ್ನು ಬದಲಾಯಿಸಲಾಯಿತು.

ಪುನೀತ್ ಅವರ ಕರೀಯರ್ ನ ಒಂದು ವಿಶೇಷ ಸಂಗತಿಯನ್ನು ಇಲ್ಲಿ ಉಲ್ಲೇಖಿಸಲೇ ಬೇಕು. ಅವರ ಎಲ್ಲ ಚಿತ್ರಗಳನ್ನು ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಕ್ಲ್ಯಾಪ್ ಮಾಡಿದ್ದಾರೆ. ಅಪ್ಪು ಅವರ ಹೋಮ್ ಪ್ರೊಡಕ್ಷನ್ ಸಿನಿಮಾಗಳ ಮುಹೂರ್ತ ಡಾ ರಾಜ್ ಮನೆಯಲ್ಲೇ ನಡೆಯುತಿತ್ತು.

ಇದನ್ನೂ ಓದಿ:  ಪುನೀತ್ ರಾಜ್​ಕುಮಾರ್​​ಗೆ ನಾನ್​ವೆಜ್​​ ಎಂದರೆ ಅದೆಷ್ಟು ಪ್ರೀತಿಯಾಗಿತ್ತು; ಇಲ್ಲಿದೆ ವಿಡಿಯೋ