ಗಣಪತಿ ಮೆರವಣಿಗೆಗೆ ಕಂಡೀಷನ್ ಹಾಕುವ ಸರ್ಕಾರ, ಈದ್​ ಮಿಲಾದ್​ಗೆ ಯಾಕೆ ಹಾಕಲ್ಲ?: ಆರ್​​. ಅಶೋಕ್​​

Edited By:

Updated on: Sep 14, 2026 | 7:34 PM

ಯಡಿಯೂರು ಕೆರೆಯಲ್ಲಿ ಗಣಪತಿ ವಿಸರ್ಜನೆ ವೇಳೆ ಮಾತನಾಡಿದ ಆರ್. ಅಶೋಕ್, ಗಣಪತಿ ಪ್ರತಿಷ್ಠಾಪನೆಗೆ ಕಠಿಣ ನಿಯಮಾವಳಿಗಳನ್ನು ವಿಧಿಸಿ, 70-80% ಗಣಪತಿ ವಿಸರ್ಜನೆ ಕಡಿಮೆಯಾಗಲು ಸರ್ಕಾರವೇ ಕಾರಣ ಎಂದು ಆರೋಪಿಸಿದರು. ಈದ್ ಮಿಲಾದ್ ಮತ್ತು ಉರುಸ್‌ಗಳಿಗೆ ಯಾವುದೇ ಮೈಕ್, ಡಿಜೆ ನಿರ್ಬಂಧಗಳಿಲ್ಲದಿರುವುದು ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಧೋರಣೆಯನ್ನು ಎತ್ತಿ ತೋರಿಸುತ್ತದೆ ಎಂದರು.

ಬೆಂಗಳೂರು, ಸೆಪ್ಟೆಂಬರ್​​ 14: ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್ ಆರೋಪಿಸಿದ್ದಾರೆ. ನಿಯಮಗಳನ್ನ ಹೇರಿ ಗಣೇಶ ಹಬ್ಬ ಆಚರಣೆ ಮಾಡದಂತೆ ಮಾಡಿದ್ದಾರೆ. ಪ್ರಸಕ್ತ ವರ್ಷ ಶೇ.25ರಷ್ಟು ಗಣೇಶ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಿದ್ದಾರೆ. ಶೇ.75ರಷ್ಟು ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿಲ್ಲ. ಯಾಕಂದ್ರೆ ಜಿಬಿಎನವರದ್ದು ಒಂದು ರೂಲ್ಸ್, ಬೆಸ್ಕಾಂನದ್ದು ಒಂದು ರೂಲ್ಸ್‌. ನೂರಾರು ರೂಲ್ಸ್‌ ಮಾಡಿ ಗಣೇಶ ಮೂರ್ತಿ ಪ್ರತಿಷ್ಠಾಪಿಸದಂತೆ ಮಾಡಿದ್ದಾರೆ. ಹಿಂದೂ ವಿರೋಧಿ ಸರ್ಕಾರಕ್ಕೆ ಚುನಾವಣೆಯಲ್ಲಿ ಜನ ಬುದ್ಧಿ ಕಲಿಸುತ್ತಾರೆ. ಮುಸ್ಲಿಮರು ವರ್ಷದ 365 ದಿನ ಮೈಕ್ ಹಾಕ್ತಾರೆ, ಯಾರೂ ಕೇಳಲ್ಲ. ಆದರೆ ಹಿಂದೂಗಳ ಹಬ್ಬ ಆಚರಣೆಗೆ ನಿಯಮಗಳ ಹೆಸರಿನಲ್ಲಿ ಅಡ್ಡಿಪಡಿಸಲಾಗ್ತಿದೆ ಎಂದವರು ಕಿಡಿ ಕಾರಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us
ಅರುಣ್ ಕುಮಾರ್​ ಆರ್​.

ಅರುಣ್ ಕುಮಾರ್ ಆರ್. ಬೆಂಗಳೂರಿನ ಜ್ಞಾನಭಾರತಿ ವಿವಿಯಲ್ಲಿ ಸಮೂಹ ಸಂವಹನ ಹಾಗೂ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಟಿವಿ9 ಕನ್ನಡದಲ್ಲಿ ಮೆಟ್ರೋ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಜಿಬಿಎ ಹಾಗೂ ನಗರದ ಅಭಿವೃದ್ಧಿ ಕ್ಷೇತ್ರದಲ್ಲಿ ಒಂದು ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಇವರು, ಒಟ್ಟು 2 ವರ್ಷಗಳ ವರದಿಗಾರಿಕೆ ಅನುಭವದೊಂದಿಗೆ ಜನೋಪಯೋಗಿ ವಿಷಯಗಳ ಕುರಿತು ವರದಿ ಮಾಡುತ್ತಿದ್ದಾರೆ.

Read More