ಸಿಎಂ ಸಿದ್ದರಾಮಯ್ಯ ಅಂಡ್ ಟೀಮ್​ಗೆ ಓಪನ್ ಚಾಲೆಂಜ್ ಹಾಕಿದ ಆರ್ ಅಶೋಕ್

| Updated By: ಆಯೇಷಾ ಬಾನು

Updated on: Oct 03, 2024 | 12:45 PM

ಕೋರ್ಟ್ ಆದೇಶ ಬಂದ ಮೇಲೆ ಸಿಎಂ ಸೈಟ್ ವಾಪಸ್ ಮಾಡಿದ್ದಾರೆ. ಸಿದ್ದರಾಮಯ್ಯ ಭಯದಿಂದ ಮುಡಾ ಸೈಟ್ ವಾಪಸ್​ ಕೊಟ್ಟಿದ್ದಾರೆ ಎಂದು ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಆರ್​.ಅಶೋಕ್​ ಗುಡುಗಿದ್ದಾರೆ. ಕಾಂಗ್ರೆಸ್ ನವರು ಯಾರ ಯಾರ ರಾಜೀನಾಮೆ ಕೇಳಿದ್ದಾರೋ ಅವರೆಲ್ಲರೂ ನಮ್ಮ ತಪ್ಪು ಇಲ್ಲ ಅಂತ ಹೇಳಿದ್ದಾರೆ.

ಕೋರ್ಟ್ ಆದೇಶ ಬಂದ ಮೇಲೆ ಸಿಎಂ ಸೈಟ್ ವಾಪಸ್ ಮಾಡಿದ್ದಾರೆ. ಸಿದ್ದರಾಮಯ್ಯ ಭಯದಿಂದ ಮುಡಾ ಸೈಟ್ ವಾಪಸ್​ ಕೊಟ್ಟಿದ್ದಾರೆ ಎಂದು ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಆರ್​.ಅಶೋಕ್​ ಮಾತನಾಡಿದ್ದಾರೆ.

ಕಾಂಗ್ರೆಸ್​​ನವರು ನೈತಿಕತೆ ಇದ್ಯಾ ಅಂತಾ ನನಗೆ ಪ್ರಶ್ನೆ ಮಾಡಿದ್ದಾರೆ. ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ಕೊಡಲು ನಾನು ರೆಡಿ ಇದ್ದೇನೆ. ಸಿದ್ದರಾಮಯ್ಯ ರಾಜೀನಾಮೆ ಕೊಡಲು ರೆಡಿ ಇದ್ದಾರಾ. ಸಿದ್ದರಾಮಯ್ಯರ ಹಿಂದೆ ಬಂಡೆ ರೀತಿ ಇದ್ದೇವೆ ಅಂತಾ ಹೇಳುತ್ತಿದ್ದರು. ಪ್ರಾಣಕ್ಕೆ ಪ್ರಾಣ ಕೊಡಲು ಸಹ ಸಿದ್ಧರಿದ್ದೇವೆ ಅಂತಾ ಹೇಳುತ್ತಿದ್ದಾರೆ. ಹಿಂದೆ ಆಂಜನೇಯ ರಾಮ ಎಲ್ಲಿದ್ದಾನೆ ಅಂತಾ ಎದೆಬಗೆದು ತೋರಿಸಿದ್ದ. ಈಗ ಸಿದ್ದರಾಮಯ್ಯ ಪರವಾಗಿ ನೀವೇ ರಾಜೀನಾಮೆ ಕೊಟ್ಟುಬಿಡಿ. ನೀವೇ ಸವಾಲು ಹಾಕಿದ್ದೀರಾ, ನಾನು ಸವಾಲು ಹಾಕಲ್ಲ. ರಾಜಕಾರಣದಲ್ಲಿ ನಾನು ಯಾವುದೇ ವೈಯಕ್ತಿಕ ಟೀಕೆಗಳನ್ನು ಮಾಡಲ್ಲ. ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುವುದು ಸರಿ ಇಲ್ಲ ಎಂದು ಆರ್ ಅಶೋಕ್ ಗುಡುಗಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Published on: Oct 03, 2024 12:39 PM