ನಾಗತ್ತೆ ಮನೆಯಲ್ಲಿ ಭಾವುಕರಾದ ರಾಘವೇಂದ್ರ ರಾಜ್​ಕುಮಾರ್​-ಮಂಗಳಾ ದಂಪತಿ; ಇಲ್ಲಿದೆ ವಿಡಿಯೋ

| Updated By: ಮದನ್​ ಕುಮಾರ್​

Updated on: Mar 10, 2022 | 10:12 AM

ರಾಘವೇಂದ್ರ ರಾಜ್​ಕುಮಾರ್​ ಮತ್ತು ಅವರ ಪತ್ನಿ ಮಂಗಳಾ ಅವರು ಗಾಜನೂರಿಗೆ ಭೇಟಿ ನೀಡಿದ್ದಾರೆ. ಅಲ್ಲಿ ರಾಜ್​ಕುಮಾರ್​ ಸಹೋದರಿ ನಾಗಮ್ಮ ಅವರನ್ನು ಮಾತನಾಡಿಸಿದ್ದಾರೆ.

ಡಾ. ರಾಜ್​ಕುಮಾರ್ (Dr. Rajkumar)​ ಅವರ ಕುಟುಂಬಕ್ಕೆ ಗಾಜನೂರು (Ganajur) ಎಂದರೆ ವಿಶೇಷ ಪ್ರೀತಿ. ಅಣ್ಣಾವ್ರು ಹುಟ್ಟಿ ಬೆಳೆದ ಊರು ಎಂಬ ಕಾರಣಕ್ಕೆ ಆ ಸ್ಥಳದ ಬಗ್ಗೆ ಎಲ್ಲರೂ ಗೌರವ ತೋರಿಸುತ್ತಾರೆ. ರಾಜ್​ ಕುಟುಂಬದ ಸದಸ್ಯರು ಆಗಾಗ ಅಲ್ಲಿಗೆ ಭೇಟಿ ನೀಡುತ್ತಾರೆ. ಪುನೀತ್​ ರಾಜ್​ಕುಮಾರ್​ ಕೂಡ ಹಲವು ಭಾರಿ ಗಾಜನೂರಿಗೆ ತೆರಳಿದ್ದರು. ಈಗ ರಾಘವೇಂದ್ರ ರಾಜ್​ಕುಮಾರ್ (Raghavendra Rajkumar)​ ಮತ್ತು ಅವರ ಪತ್ನಿ ಮಂಗಳಾ ಅವರು ಗಾಜನೂರಿಗೆ ಭೇಟಿ ನೀಡಿದ್ದಾರೆ. ಅಲ್ಲಿ ರಾಜ್​ಕುಮಾರ್​ ಸಹೋದರಿ ನಾಗಮ್ಮ ಅವರನ್ನು ಮಾತನಾಡಿಸಿದ್ದಾರೆ. ಈ ವೇಳೆ ಮಂಗಳಾ ಅವರು ಭಾವುಕರಾದರು. ‘ಅಪ್ಪಾಜಿ ಶೂಟಿಂಗ್​ಗೆ ಹೋಗುತ್ತಿದ್ದಾಗ ನನ್ನನ್ನು ಮತ್ತು ಶಿವಣ್ಣನನ್ನು ಬೆಳೆಸಿದವರು ನಮ್ಮ ನಾಗತ್ತೆ. ಈಗ ಅವರಿಗೆ ಹುಷಾರಿಲ್ಲ ಅಂತ ನಾವು ನೋಡಲು ಬಂದಿದ್ದೇವೆ. ಇದೇ ಊರಿನಲ್ಲಿ ಹೊಸ ಸಿನಿಮಾದ ಮುಹೂರ್ತ ಮಾಡುತ್ತಿದ್ದೇವೆ. ಇಲ್ಲಿ ಪೂಜೆ ಮಾಡಿದರೆ ಪೂರ್ವಿಕರ ಆಶೀರ್ವಾದ ಸಿಗುತ್ತೆ ಅಂತ ಅತ್ತೆ ಹೇಳಿದರು. ಈ ಮಣ್ಣಿನಿಂದಲೇ ಅಪ್ಪಾಜಿ ಬಂದಿದ್ದು. ಅವರು ಹುಟ್ಟಿದಾಗ ಏನೂ ಇರಲಿಲ್ಲ. ಆಮೇಲೆ ಏನಾದರು ಎಂಬುದನ್ನು ಎಲ್ಲರೂ ನೋಡಿದ್ದೀರಿ. ಈ ಮಣ್ಣಿಗೆ ನಾವು ಋಣ ಕೊಟ್ಟಿದ್ದೇವೆ’ ಎಂದು ರಾಘವೇಂದ್ರ ರಾಜ್​ಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ:

ಯೋಗಿ ಕಿವಿಗೆ ಏಟು ಬಿದ್ದಾಗ ಪುನೀತ್​ ಏನು ಮಾಡಿದ್ರು? ‘ಹುಡುಗರು’ ಘಟನೆ ನೆನೆದ ರವಿ ವರ್ಮಾ

ಪುನೀತ್​ ಫ್ಯಾನ್ಸ್​ ಕುತ್ತಿಗೆ ಮೇಲೆ ‘ಜೇಮ್ಸ್​’ ಟ್ಯಾಟೂ; ವೈರಲ್​ ಆಗ್ತಿದೆ ಅಭಿಮಾನದ ಫೋಟೋ