ಈ ನೋವಿನ ಜತೆ ಬದುಕೋಕೆ ಶಕ್ತಿಕೊಡು ಎಂದು ದೇವರಲ್ಲಿ ಕೇಳಿಕೊಳ್ಳಬೇಕಷ್ಟೆ; ರಾಘವೇಂದ್ರ ರಾಜ್​ಕುಮಾರ್​

| Updated By: ರಾಜೇಶ್ ದುಗ್ಗುಮನೆ

Updated on: Nov 02, 2021 | 4:18 PM

ಪುನೀತ್​ ಅವರನ್ನು ಮಣ್ಣು ಮಾಡಿ ಇಂದಿಗೆ (ನವೆಂಬರ್ 2) ಮೂರನೇ ದಿನ. ಹೀಗಾಗಿ, ಪುನೀತ್​ ಕುಟುಂಬದವರು ಕಂಠೀರವ ಸ್ಟುಡಿಯೋಗೆ ಬಂದು ಪುನೀತ್​ ಸಮಾಧಿಗೆ ಹಾಲು-ತುಪ್ಪ ಹಾಕಿ ಬಂದಿದ್ದಾರೆ.

ಶಿವರಾಜ್​ಕುಮಾರ್​, ರಾಘವೇಂದ್ರ ರಾಜ್​ಕುಮಾರ್​ ಹಾಗೂ ಪುನೀತ್​ ರಾಜ್​ಕುಮಾರ್​ ಪೈಕಿ ಕಿರಿಯವರು ಪುನೀತ್​. ಅವರಿಗೆ 46 ವರ್ಷ ವಯಸ್ಸಾಗಿತ್ತು. ಆದರೆ, ದೇವರು ಮೊದಲು ಕರೆದುಕೊಂಡಿದ್ದು ಪುನೀತ್​ ಅವರನ್ನು. ಮನೆಯ ಕಿರಿಯ ಮಗ ಮೊದಲು ಹೋದನಲ್ಲ ಎನ್ನುವ ಕೊರಗು ಹಾಗೂ ದುಃಖ ರಾಜ್​ಕುಮಾರ್​ ಕುಟುಂಬವನ್ನು ಬಿಟ್ಟೂಬಿಡದೆ ಕಾಡುತ್ತಿದೆ. ಇನ್ನೂ ಸಾಧನೆ ಮಾಡುತ್ತಿರುವ ವಯಸ್ಸಿನಲ್ಲೇ ಅವರು ನಿಧನ ಹೊಂದಿದ್ದು ನಿಜಕ್ಕೂ ಬೇಸರದ ಸಂಗತಿ. ಆದರೆ, ಈ ನೋವಿನ ಜತೆ ಕುಟುಂಬ ಜೀವನ ನಡೆಸಿಕೊಂಡು ಹೋಗಬೇಕಿದೆ. ಇದೇ ಮಾತನ್ನು ರಾಘವೇಂದ್ರ ರಾಜ್​ಕುಮಾರ್​ ಹೇಳಿದ್ದಾರೆ.

ಪುನೀತ್​ ಅವರನ್ನು ಮಣ್ಣು ಮಾಡಿ ಇಂದಿಗೆ (ನವೆಂಬರ್ 2) ಮೂರನೇ ದಿನ. ಹೀಗಾಗಿ, ಪುನೀತ್​ ಕುಟುಂಬದವರು ಕಂಠೀರವ ಸ್ಟುಡಿಯೋಗೆ ಬಂದು ಪುನೀತ್​ ಸಮಾಧಿಗೆ ಹಾಲು-ತುಪ್ಪ ಹಾಕಿ ಬಂದಿದ್ದಾರೆ. ರಾಘವೇಂದ್ರ ರಾಜ್​ಕುಮಾರ್ ಕೂಡ ಇದರಲ್ಲಿ ಭಾಗಿಯಾಗಿದ್ದರು. ಈ ಬಗ್ಗೆ ಮಾತನಾಡಿದ ಅವರು ‘ಈ ನೋವಿನ ಜತೆ ಬದುಕೋಕೆ ಶಕ್ತಿಕೊಡು ಎಂದು ದೇವರಲ್ಲಿ ಕೇಳಿಕೊಳ್ಳಬೇಕಷ್ಟೆ’ ಎಂದಿದ್ದಾರೆ.

ಇದನ್ನೂ ಓದಿ: Puneeth Rajkumar: ಅಗಲಿದ ಪುನೀತ್​ಗೆ ಕುಟುಂಬಸ್ಥರಿಂದ ಹಾಲು- ತುಪ್ಪ ಕಾರ್ಯ; ಲೈವ್ ನೋಡಲು ಇಲ್ಲಿ ಕ್ಲಿಕ್ ಮಾಡಿ

Puneeth Rajkumar: ಪುನೀತ್​ ಆಸ್ಪತ್ರೆಗೆ ಹೊರಟಾಗ ಮನೆಯಲ್ಲಿ ಮೂಡಿತ್ತು ಆತಂಕದ ವಾತಾವರಣ; ಇಲ್ಲಿದೆ ಸಿಸಿಟಿವಿ ದೃಶ್ಯಾವಳಿ

Follow us on