ಇತ್ತೀಚೆಗೆ ಟಿವಿ9 ಕನ್ನಡದ ಜತೆ ಮಾತನಾಡಿದ್ದ ಪುನೀತ್ ಅಂಗರಕ್ಷಕ ಛಲಪತಿ ಅವರು ಇದೇ ಘಟನೆಯನ್ನು ವಿವರಿಸಿದ್ದರು. ‘ಅಕ್ಕ (ಪುನೀತ್ ಪತ್ನಿ ಅಶ್ವಿನಿ) ಮತ್ತು ಪುನೀತ್ ಹೊರಹೋಗುತ್ತಿದ್ದೇವೆ ಎಂದರು. ನಾನು ಕಾರು ಹತ್ತಿಸಿ ನಾನೂ ಹತ್ತೋಕೆ ಹೋದೆ. ನೀವು ಇಲ್ಲೇ ಇರಿ ನಾವು ಬರುತ್ತೇವೆ ಎಂದು ಬಾಸ್ ಹೇಳಿದರು. ಹಾಗಾಗಿ ನಾನು ಮನೆಯಲ್ಲೇ ಇದ್ದೆ. ನಂತರ ಅವರು ಬರಲೇ ಇಲ್ಲ’ ಎಂದು ಕಣ್ಣೀರು ಹಾಕಿದ್ದರು. ಸಿಸಿಟಿವಿ ದೃಶ್ಯಾವಳಿಗಳಿಗೂ ಛಲಪತಿ ಹೇಳಿದ ಮಾತಿಗೂ ತಾಳೆ ಆಗಿದೆ.
ಇನ್ನು, ಪುನೀತ್ ಆಸ್ಪತ್ರೆಗೆ ಬಂದಾಗ ಸಹಜವಾಗಿದ್ದರು ಎಂದು ವೈದ್ಯರು ತಿಳಿಸಿದ್ದರು. ಸಿಸಿಟಿವಿ ದೃಶ್ಯಗಳಲ್ಲೂ ಅವರು ಸಹಜವಾಗಿದ್ದಿದ್ದು ಕಂಡು ಬಂದಿತ್ತು. ಆದರೆ ಎಲ್ಲರೂ ತರಾತುರಿಯಲ್ಲಿದ್ದರು. ‘ಪುನೀತ್ ಅವರು ತಮ್ಮ ನಿಯಮಿತ ಜಿಮ್ ಸೆಷನ್ ಅನ್ನು ಪೂರ್ಣಗೊಳಿಸಿ, ನಂತರ ಬಾಕ್ಸಿಂಗ್ ಮತ್ತು ಸ್ಟೀಮ್ ಸೆಷನ್ ಪೂರ್ಣಗೊಳಿಸಿದರು. ಇದಾದ ನಂತರ ಅವರಿಗೆ ತುಂಬಾನೇ ದಣಿವಾದಂತೆ ಭಾಸವಾಗಿತ್ತು. ತೀವ್ರ ಹೃದಯ ಸ್ತಂಭನದಿಂದ ಅವರು ಮೃತಪಟ್ಟಿರಬಹುದು. ಏಕಾಏಕಿ ಈ ರೀತಿ ಸಾವು ಸಂಭವಿಸುವ ಸಾಧ್ಯತೆ ದೈಹಿಕ ಚಟುವಟಿಕೆಯ ಸಮಯದಲ್ಲಿ, ಆಟ ಆಡುವ ಸಂದರ್ಭದಲ್ಲಿ ಅಥವಾ ದೈಹಿಕವಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಹೆಚ್ಚಿರುತ್ತದೆ’ ಎಂದು ಡಾ. ರಮಣ್ ರಾವ್ ಹೇಳಿದ್ದರು.
ಇದನ್ನೂ ಓದಿ: ‘ಪುನೀತ್ ಜಿಮ್ಗೆ ತೆರಳಿರಲಿಲ್ಲ’; ಮೃತಪಡುವುದಕ್ಕೂ ಮೊದಲು ನಡೆದಿದ್ದೇನು? ಕಣ್ಣೀರಿಡುತ್ತಲೇ ವಿವರಿಸಿದ ಅಪ್ಪು ಅಂಗರಕ್ಷಕ