Puneeth Rajkumar: ಅಗಲಿದ ಪುನೀತ್​ಗೆ ಕುಟುಂಬಸ್ಥರಿಂದ ಹಾಲು- ತುಪ್ಪ ಕಾರ್ಯ; ಲೈವ್ ನೋಡಲು ಇಲ್ಲಿ ಕ್ಲಿಕ್ ಮಾಡಿ

Puneeth Rajkumar 5th day Rituals: ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಹಾಲು ತುಪ್ಪ ಬಿಡುವ ಕಾರ್ಯ ನಡೆಯುತ್ತಿದೆ. ಇದರಲ್ಲಿ ಡಾ.ರಾಜ್ ಕುಟುಂಬ ವರ್ಗ ಹಾಗೂ ಆಪ್ತ ಬಳಗ ಭಾಗಿಯಾಗಿದೆ. ಕಾರ್ಯಕ್ರಮದ ಲೈವ್ ಇಲ್ಲಿ ಲಭ್ಯವಿದೆ.

Puneeth Rajkumar: ಅಗಲಿದ ಪುನೀತ್​ಗೆ ಕುಟುಂಬಸ್ಥರಿಂದ ಹಾಲು- ತುಪ್ಪ ಕಾರ್ಯ; ಲೈವ್ ನೋಡಲು ಇಲ್ಲಿ ಕ್ಲಿಕ್ ಮಾಡಿ
ಪುನೀತ್ ರಾಜ್​ಕುಮಾರ್​
Follow us
TV9 Web
| Updated By: shivaprasad.hs

Updated on:Nov 02, 2021 | 11:45 AM

ಅಗಲಿದ ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಹಾಲು- ತುಪ್ಪ ಬಿಡುವ ಕಾರ್ಯ ಇಂದು ನಡೆಯುತ್ತಿದೆ. ಡಾ.ರಾಜ್ ಕುಟುಂಬಸ್ಥರು ಹಾಗೂ ಆಪ್ತವರ್ಗವಷ್ಟೇ ಇದರಲ್ಲಿ ಭಾಗಿಯಾಗಿದೆ. ಅಪ್ಪುವಿಗೆ ಪ್ರಿಯವಾದ ಊಟ, ತಿಂಡಿ, ತಿನಿಸುಗಳನ್ನು ಸಂಬಂಧಿಕರು ಎಡೆ ಇಡುತ್ತಿದ್ದಾರೆ. ಕಬಾಬು , ಬಿರಿಯಾನಿ , ಇಡ್ಲಿ , ಕಾಳು, ಗೊಜ್ಜು , ಮೊಟ್ಟೆ ಬಿರಿಯಾನಿ , ಬಜ್ಜಿ , ಐದಾರು ವೈರಟಿ ಸಿಹಿ ತಿನಿಸು, ಅಪ್ಪುವಿಗೆ ಪ್ರಿಯವಾದ ಮುದ್ದೆ ಹಾಗೂ ನಾಟಿ ಕೋಳಿ ಸಾಂಬಾರ್, ಸುಮಾರು 50 ಕ್ಕೂ ಹೆಚ್ಚು ಬಗೆಯ ತಿನಿಸುಗಳನ್ನು ಎಡೆ ಇಡಲಾಗಿದೆ. ಸಮಾಧಿಯ ಮುಂದಿನ ನಂದಾದೀಪ ಐದು ದಿನಗಳಿಂದ ಆರದಂತೆ ನೋಡಿಕೊಂಡು ಉರಿಸಲಾಗುತ್ತಿದೆ. ಸಮಾಧಿಯ ಮೇಲೆ ಹಣತೆಯಲ್ಲಿ ದೀಪ ಹಚ್ಚಿ ಬಳಿಕ ಬಾಳೆ ಎಲೆಯಲ್ಲಿ ಕುಟುಂಬಸ್ಥರು ಎಡೆ ಇಡುತ್ತಿದ್ದಾರೆ.

ಕಾರ್ಯದಲ್ಲಿ ಸಚಿವ ಗೋಪಾಲಯ್ಯ, ಪಾರ್ವತಮ್ಮ ರಾಜ್ ಕುಮಾರ್ ಸಹೋದರ ಚಿನ್ನೆಗೌಡ, ವಿಜಯ ರಾಘವೇಂದ್ರ ಮತ್ತು ಕುಟುಂಬಸ್ಥರು, ಶಾಸಕ ರಾಜುಗೌಡ, ಗಾಜನೂರಿನಿಂದಲೂ ಆಗಮಿಸಿರುವ ದೊಡ್ಮನೆ ಕುಟುಂಬಸ್ಥರು, ಲಕ್ಷ್ಮೀ , ಪೂರ್ಣಿಮಾ, ಧನ್ಯ , ಧೀರನ್, ಶ್ರೀಮುರುಳಿ, ಸಾರಾ ಗೋವಿಂದು ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.

ಹಾಲು- ತುಪ್ಪ ಕಾರ್ಯದ ಲೈವ್ ಇಲ್ಲಿ ಲಭ್ಯವಿದೆ:

ಇಂದಿನ ಕಾರ್ಯಕ್ರಮ ಮುಗಿದ ನಂತರ ಅಭಿಮಾನಿಗಳಿಗೆ ಪುನೀತ್ ದರ್ಶನಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ. ‘‘ಕುಟುಂಬದ ಎಲ್ಲ ಕೈಂಕರ್ಯ ಮುಗಿಯಲಿ. ನಂತರ ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತದೆ. ಅಂತಿಮ ದರ್ಶನಕ್ಕೂ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 20 ರಿಂದ 25ಲಕ್ಷ ಜನ ದರ್ಶನ ಪಡೆದಿದ್ದಾರೆ. ಸಮಾಧಿ ದರ್ಶನಕ್ಕೂ ನಾವು ವ್ಯವಸ್ಥೆ ಮಾಡುತ್ತೇವೆ’’ ಎಂದು ಅರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:

‘ದಾದಾಸಾಹೇಬ್​ ಫಾಲ್ಕೆ’ ರೀತಿಯೇ ಡಾ. ರಾಜ್​ ಹೆಸರಲ್ಲಿ ನೀಡುವ ಪ್ರಶಸ್ತಿ​ ಬಗ್ಗೆ ಹೊಸ ಕನಸು ಕಂಡಿದ್ದ​ ಪುನೀತ್​

Puneeth Rajkumar: ಪುನೀತ್​ ಬಗ್ಗೆ ಅವಹೇಳನಕಾರಿ ಪೋಸ್ಟ್​ ಮಾಡಿದ್ದ ವ್ಯಕ್ತಿ ಅರೆಸ್ಟ್​; ಸೈಬರ್​ ಪೊಲೀಸರ ಬಲೆಗೆ ಬಿದ್ದ ಕಿಡಿಗೇಡಿ

Published On - 11:44 am, Tue, 2 November 21