ಅಧಿವೇಶನ ನಡೆಯುವಾಗಲೇ ರಾಹುಲ್ ಗಾಂಧಿ ವಿದೇಶ ಪ್ರವಾಸ ಮಾಡ್ತಾರೆ; ಪ್ರಲ್ಹಾದ್ ಜೋಶಿ ಟೀಕೆ
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಬುಧವಾರ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿದೇಶ ಪ್ರವಾಸಗಳ ಬಗ್ಗೆ ಟೀಕಿಸಿದ್ದಾರೆ. ಸಂಸತ್ತು ಅಧಿವೇಶನ ನಡೆಯುವಾಗಲೆಲ್ಲಾ ಅವರು ಹೆಚ್ಚಾಗಿ ವಿದೇಶದಲ್ಲಿಯೇ ಇರುತ್ತಾರೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿಯವರು ಡಿಸೆಂಬರ್ 15ರಂದು ಜರ್ಮನಿಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ಭಾರತೀಯ ವಲಸಿಗರು ಮತ್ತು ಜರ್ಮನ್ ಸರ್ಕಾರದ ಮಂತ್ರಿಗಳನ್ನು ಭೇಟಿ ಮಾಡಲಿದ್ದಾರೆ. ವಿದೇಶ ಪ್ರವಾಸ ಮಾಡುವ ಅವರ ಈ ನಿರ್ಧಾರವು ಈಗಾಗಲೇ ಆಡಳಿತ ಮತ್ತು ಮಿತ್ರ ಪಕ್ಷಗಳೊಳಗಿನ ವಿಮರ್ಶಕರಿಂದ ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ.
ನವದೆಹಲಿ, ಡಿಸೆಂಬರ್ 10: ಸಂಸತ್ತಿನ ಅಧಿವೇಶನದ ಸಮಯದಲ್ಲಿಯೇ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೆಚ್ಚಾಗಿ ವಿದೇಶ ಪ್ರವಾಸಗಳಲ್ಲಿರುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ರಾಹುಲ್ ಗಾಂಧಿಯವರು ಸಂಸತ್ ಅಧಿವೇಶನ ನಡೆಯುವಾಗ ಬಹುಪಾಲು ಸಮಯ ವಿದೇಶಗಳಲ್ಲೇ ಇರುತ್ತಾರೆ. ನಂತರ ಬಂದು ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಸಿಗಲಿಲ್ಲ ಎಂದು ದೂರುತ್ತಾರೆ. ಅವರೊಬ್ಬ “ಅರೆಕಾಲಿಕ, ಗಂಭೀರತೆಯಿಲ್ಲದ ರಾಜಕೀಯ ನಾಯಕ” ಎಂದು ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ.
ರಾಹುಲ್ ಗಾಂಧಿಯವರು ಡಿಸೆಂಬರ್ 15ರಂದು ಜರ್ಮನಿಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ಭಾರತೀಯ ವಲಸಿಗರು ಮತ್ತು ಜರ್ಮನ್ ಸರ್ಕಾರದ ಮಂತ್ರಿಗಳನ್ನು ಭೇಟಿ ಮಾಡಲಿದ್ದಾರೆ. ವಿದೇಶ ಪ್ರವಾಸ ಮಾಡುವ ಅವರ ಈ ನಿರ್ಧಾರವು ಈಗಾಗಲೇ ಆಡಳಿತ ಮತ್ತು ಮಿತ್ರ ಪಕ್ಷಗಳೊಳಗಿನ ವಿಮರ್ಶಕರಿಂದ ತೀವ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

