Loading video

ಚುನಾವಣಾ ಆಯೋಗದ ಬಗ್ಗೆ ರಾಹುಲ್ ಗಾಂಧಿ ವಿದೇಶಗಳಲ್ಲಿ ಮಾತಾಡೋದು ಅಪ್ಪಟ ಮೂರ್ಖತನ: ವಿಜಯೇಂದ್ರ

Updated on: Apr 22, 2025 | 2:13 PM

ವಿದೇಶಗಳಲ್ಲಿ ಮಾಧ್ಯಮಗಳ ಮುಂದೆ ಯಾವುದನ್ನು ಮಾತಾಡಬೇಕು, ಯಾವುದನ್ನು ಮಾತಾಡಬಾರದು ಎಂಬ ಕನಿಷ್ಟ ಸೌಜನ್ಯವೂ ರಾಹುಲ್ ಗಾಂಧಿ ಅವರಿಗಿಲ್ಲ, ಚುನಾವಣಾ ಫಲಿತಾಂಶಗಳ ಬಗ್ಗೆ ಅವರಿಗೆ ಸಂಶಯಗಳಿದ್ದರೆ ಸಂಸತ್ತಿನಲ್ಲಿ ಮಾತಾಡಲಿ, ಮೊನ್ನೆಯಷ್ಟೇ ಸಂಸತ್ತಿನ ಅಧಿವೇಶನ ಮುಗಿದಿದೆ, ಸೆಷನ್ಸ್ ನಲ್ಲಿ ಅವರು ಮಾತಾಡಬಹುದಿತ್ತು ಎಂದು ವಿಜಯೇಂದ್ರ ಹೇಳಿದರು.

ಗದಗ, ಏಪ್ರಿಲ್ 22: ಜನಾಕ್ರೋಶ ಯಾತ್ರೆಯ ಭಾಗವಾಗಿ ಇಂದು ಗದಗಿನಲ್ಲಿರುವ ಬಿಜೆಪಿ ರಾಜ್ಯಧ್ಯಕ್ಷ ಬಿವೈ ವಿಜಯೇಂದ್ರ ವಿದೇಶಗಳಲ್ಲಿ ಚುನಾವಣಾ ಅಯೋಗದಂಥ ಭಾರತದ ಸಂವೈಧಾನಿಕ ಸಂಸ್ಥೆಗಳನ್ನು ಸಂಸದ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸುತ್ತಿರುವುದು ಮೂರ್ಖತನ ಮತ್ತು ಬೇಜವಾಬ್ದಾರಿತನದ ಪರಮಾವಧಿ ಎಂದು ಹೇಳಿದರು. ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಕಾಂಗ್ರೆಸ್ ಗೆ ಸೋಲಾಗಿದ್ದನ್ನು ಮಾತ್ರ ಅವರು ಉಲ್ಲೇಖಿಸುತ್ತಾರೆ, ಹಿಮಾಚಲ ಪ್ರದೇಶ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಗೆ ಗೆಲುವು ಸಿಕ್ಕಿರುವ ಬಗ್ಗೆ ಯಾಕೆ ಅವರು ಮಾತಾಡುವುದಿಲ್ಲ ಎಂದು ವಿಜಯೇಂದ್ರ ಪ್ರಶ್ನಿಸಿದರು.

ಇದನ್ನೂ ಓದಿ: ನೂತನ ಮುಖ್ಯ ಚುನಾವಣಾ ಆಯುಕ್ತರ ಆಯ್ಕೆಯ ಮಧ್ಯರಾತ್ರಿ ನಿರ್ಧಾರ ಅಸಭ್ಯವಾದುದು; ರಾಹುಲ್ ಗಾಂಧಿ ಆಕ್ಷೇಪ  

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Apr 22, 2025 02:12 PM