ಕಲಬುರಗಿಯಲ್ಲಿ ಜನಾಕ್ರೋಶ ಯಾತ್ರೆ; ವೀರಾವೇಶದ ಭಾಷಣ ಮಾಡಿದ ಬಿವೈ ವಿಜಯೇಂದ್ರ
ಬಿಜೆಪಿ ಕಾರ್ಯಕರ್ತರು ಯಾರಿಗೂ ಹೆದರುವ ಅಗತ್ಯವಿಲ್ಲ, ಇನ್ನೂ ಮೂರುವರ್ಷಗಳ ಕಾಲ ಎಡೆಬಿಡದೆ ಕೆಲಸ ಮಾಡಿ, ಫಲ ಸಿಕ್ಕೇಸಿಗುತ್ತೆ, ಕಲಬುರಗಿ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಉತ್ತಮ ಫಲಿತಾಂಶ ಕೊಡಿಸುವ ಸವಾಲನ್ನು ಸ್ವೀಕರಿಸುತ್ತೇನೆ, ಕಾಂಗ್ರೆಸ್ ಪಕ್ಷದ ಅದ್ಯಾವ ಗಂಡಸು ತನ್ನನ್ನು ತಡೆಯುತ್ತಾನೋ ಬರಲಿ ನೋಡೋಣ ಅಂತ ವಿಜಯೇಂದ್ರ ಸಭೆಯಲ್ಲಿ ಅಬ್ಬರಿಸಿದರು.
ಕಲಬುರಗಿ, ಏಪ್ರಿಲ್18: ಬಿಜೆಪಿ ಜನಾಕ್ರೋಶ ಯಾತ್ರೆ ಭಾಗವಾಗಿ ಕಲಬುರಗಿಗೆ ಆಗಮಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿಧಾನಸಭಾ ಚುನಾವಣೆಯಲ್ಲಿ (Assembly polls) ಬಿಜೆಪಿಗೆ ಕಲಬುರಗಿ ಜಿಲ್ಲೆಯಿಂದ ಉತ್ತಮ ಬೆಂಬಲ ಸಿಗದಿರುವುದಕ್ಕೆ ಕಳವಳ ವ್ಯಕ್ತಪಡಿಸಿ ಕಾರ್ಯಕರ್ತರಲ್ಲಿ ಹೊಸ ಚೇತನ ಮತ್ತು ಹುಮ್ಮಸ್ಸು ತುಂಬುವ ಪ್ರಯತ್ನ ಮಾಡಿದರು. ಬಿಜೆಪಿ ಯಾವತ್ತಿಗೂ ಕಾರ್ಯಕರ್ತರ ಪಕ್ಷ, ಲಕ್ಷಾಂತರ ಕಾರ್ಯಕರ್ತರು ಹಾಕಿರುವ ಭದ್ರ ಬುನಾದಿಯಿಂದಲೇ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಗಿದ್ದು, ಆದರೆ ಅಧಿಕಾರ ಬಂದಾಗ ಕಾರ್ಯಕರ್ತರನ್ನು ಮರೆಯಬಾದು, ಹಿಂದೂ ಕಾರ್ಯಕರ್ತನೊಬ್ಬನಿಗೆ ಅನ್ಯಾಯವಾಗುತ್ತಿದ್ದರೆ ಎಲ್ಲರೂ ಹೋಗಿ ಅವನೊಂದಿಗೆ ನಿಲ್ಲಬೇಕು ಎಂದು ವಿಜಯೇಂದ್ರ ಹೇಳಿದರು.
ಇದನ್ನೂ ಓದಿ: ಕಳೆದ 20 ತಿಂಗಳಲ್ಲಿ ಸಿದ್ದರಾಮಯ್ಯ ಡೀಸೆಲ್ ಬೆಲೆ ₹ 5.50 ಮತ್ತು ಪೆಟ್ರೋಲ್ ಬೆಲೆ ₹ 3 ಹೆಚ್ಚಿಸಿದ್ದಾರೆ: ವಿಜಯೇಂದ್ರ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ