ಸಿದ್ದರಾಮಯ್ಯ ಹಣೆಗೆ ಕುಂಕುಮ ಇಟ್ರೆ ಒರೆಸಿಕೊಳ್ತಾರೆ, ಮುಸ್ಲಿಂ ಟೋಪಿ ಹಾಕಿದ್ರೆ ಹೀಗೆ ಮಾಡ್ತಾರೆ: ಯತ್ನಾಳ್ ವ್ಯಂಗ್ಯ
ರಾಯಚೂರಿನ ಹಿಂದು ಮಹಾ ಗಣೇಶ ವಿಸರ್ಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಸಿದ್ದರಾಮಯ್ಯ ರಾಜಕೀಯ ಚಟುವಟಿಕೆಗಳು ಮತ್ತು ಮುಂಬರುವ ಚುನಾವಣೆಗಳ ಕುರಿತು ಅವರು ಮಾತನಾಡಿದ್ದಾರೆ. ಹಿಂದೂ ಧರ್ಮದ ಮಹತ್ವವನ್ನು ಅವರು ಒತ್ತಿ ಹೇಳಿದ್ದಾರೆ.
ರಾಯಚೂರು, ಸೆಪ್ಟೆಂಬರ್ 17: ಮಂಗಳವಾರ ನಗರದ ಚಂದ್ರಮೌಳೇಶ್ವರ ಸರ್ಕಲ್ ಬಳಿ ನಡೆದ ಹಿಂದು ಮಹಾಗಣೇಶ ವಿಸರ್ಜನಾ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಭಾಗವಹಿಸಿದ್ದರು. ಈ ವೇಳೆ ಮಾತನಾಡಿರುವ ಅವರು, ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಸಿದ್ದರಾಮಯ್ಯ ಹಣೆಗೆ ಕುಂಕುಮ ಇಟ್ಟರೆ ಒರೆಸಿಕೊಳ್ಳುತ್ತಾರೆ, ಅದೇ ಮುಸ್ಲಿಂ ಟೋಪಿ ಹಾಕಿದರೆ ಹೀಗೆ ಮಾಡುತ್ತಾರೆ ಎಂದು ಅಣುಕಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Sep 17, 2025 12:04 PM
