ಲೋಕಸಭೆಯಲ್ಲಿ ರಾಯಚೂರು ಸಂಸದ ಕುಮಾರ್ ನಾಯ್ಕ್ ಕನ್ನಡದಲ್ಲಿ ಚರ್ಚೆ

|

Updated on: Feb 11, 2025 | 2:07 PM

ದೇಶದಲ್ಲಿ ಹಣದುಬ್ಬರ ಹೆಚ್ಚಿದೆ. ಆರ್ಥಿಕತೆಯ ಪರಿಸ್ಥಿತಿ ಕಳವಳಕಾರಿಯಾಗಿದೆ. ತೆರಿಗೆ ಹಂಚಿಕೆಯಲ್ಲಿಯೂ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ರಾಯಚೂರು ಕಾಂಗ್ರೆಸ್ ಸಂಸದ ಕುಮಾರ್ ನಾಯ್ಕ್ ಸಂಸತ್ತಿನಲ್ಲಿ ಹೇಳಿದರು. ಅವರು, ಬಜೆಟ್ ಕುರಿತ ಚರ್ಚೆ ವೇಳೆ ಕನ್ನಡದಲ್ಲೇ ಮಾತನಾಡಿ ಗಮನ ಸೆಳೆದರು. ವಿಡಿಯೋ ಇಲ್ಲಿದೆ ನೋಡಿ.

ನವದೆಹಲಿ, ಫೆಬ್ರವರಿ 11: ರಾಯಚೂರು ಸಂಸದ ಕುಮಾರ್ ನಾಯ್ಕ್ ಲೋಕಸಭೆಯಲ್ಲಿ ಕನ್ನಡದಲ್ಲೇ ಮಾತನಾಡಿ ಗಮನ ಸೆಳೆದರು. ಬಜೆಟ್ ಕುರಿತು ಮಾತನಾಡಿದ ಅವರು, ಮಾನ್ಯ ಅರ್ಥ ಸಚಿವರು ಮಂಡಿಸಿದ ಬಜೆಟ್ ವಾಸ್ತವತೆಯನ್ನು ಬಿಂಬಿಸುವ ಕನ್ನಡಿಯೂ ಅಲ್ಲ, ಭವಿಷ್ಯತ್ತಿಗೆ ದಾರಿ ತೋರುವ ದೀವಿಗೆಯೂ ಅಲ್ಲ. ಕಟ್ಟುಕತೆಗಳ ಕಂತೆ, ಅತಿ ಧೈರ್ಯದ ಹೇಳಿಕೆಗಳು, ಮಹದಾಸೆಯ ಸ್ಲೋಗನ್​ಗಳು. ಜನಜೀವನದ ಕಷ್ಟ ಕಾರ್ಪಣ್ಯಗಳಿಂದ ವಿಮುಖವಾಗಿರುವಂತಹ ಪುಟ್ಟ ಪುಸ್ತಕ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ