ಬೆಂಗಳೂರು: ಸುಮಾರು ಎರಡು ವಾರಗಳ ಕಾಲ ರಾಜ್ಯ ಪೊಲೀಸರಿಗೆ ಇನ್ನಿಲ್ಲದಂತೆ ಕಾಡಿದ್ದ ಉನ್ನತಮಟ್ಟದ ಪಿಂಪ್ ಸ್ಯಾಂಟ್ರೋ ರವಿ (Santro Ravi) ಶುಕ್ರವಾರ ಗುಜರಾತ್ ನ ಅಹಮದಾಬಾದ್ (Ahmedabad) ನಗರದಲ್ಲಿ ಸೆರೆಸಿಕ್ಕಿದ್ದಾನೆ. ನಾನಾ ಜಿಲ್ಲೆಗಳ ಪೊಲೀಸ್ ತಂಡಗ ರವಿಯ ಬೇಟೆಗಿಳಿದಿದ್ದು ನಿಜವಾದರೂ ಅಂತಿಮವಾಗಿ ಅವನನ್ನು ಖೆಡ್ಡಾಗೆ ಬೀಳಿಸುವಲ್ಲಿ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ (Nikhil B) ನಿರ್ವಹಿಸಿದ ಪಾತ್ರ ದೊಡ್ಡದು ಅಂತ ಗೊತ್ತಾಗಿದೆ. ರವಿಯ ಫ್ರೆಂಡ್ ಚೇತನ್ ನನ್ನು ನಿಖಿಲ್ ಅವರ ತಂಡ ರಾಯಚೂರಿಗೆ ಹತ್ತಿರದ ಮಂತ್ರಾಲಯಲದಲ್ಲಿ ಟ್ರ್ಯಾಕ್ ಮಾಡಿ ಅವನು ನೀಡಿದ ಎಲ್ಲ ಮಾಹಿತಿಯ ಆಧಾರದ ಮೇಲೆ ಸ್ಯಾಂಟ್ರೋ ರವಿಯನ್ನು ಗುಜರಾತ್ ನಲ್ಲಿ ವಶಕ್ಕೆ ಪಡೆಯಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ