AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

265 ಕಿ.ಮೀ ದೂರ, 14.10 ಗಂಟೆ: ಬೆಂಗಳೂರಿನಿಂದ ಸೈಕಲ್​​ನಲ್ಲೇ ತಿರುಪತಿ ತಲುಪಿದ ಶಾಸಕ ಸುರೇಶ್​​ ಕುಮಾರ್​​ ಮತ್ತು ತಂಡ

265 ಕಿ.ಮೀ ದೂರ, 14.10 ಗಂಟೆ: ಬೆಂಗಳೂರಿನಿಂದ ಸೈಕಲ್​​ನಲ್ಲೇ ತಿರುಪತಿ ತಲುಪಿದ ಶಾಸಕ ಸುರೇಶ್​​ ಕುಮಾರ್​​ ಮತ್ತು ತಂಡ

ಕಿರಣ್​ ಹನಿಯಡ್ಕ
| Edited By: |

Updated on: Jul 10, 2026 | 5:38 PM

Share

ರಾಜಾಜಿನಗರ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಅವರು ಬೆಂಗಳೂರಿನಿಂದ ತಿರುಪತಿಗೆ ಸತತ 3ನೇ ಬಾರಿಗೆ ಸೈಕಲ್ ಪ್ರವಾಸ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, 265 ಕಿಲೋಮೀಟರ್ ದೂರವನ್ನು ಕೇವಲ 14 ಗಂಟೆಗಳಲ್ಲಿ ಕ್ರಮಿಸಿದ್ದಾರೆ. ನಿನ್ನೆ ಬೆಳಗಿನಜಾವ 4.30ಕ್ಕೆ ಬಸವೇಶ್ವರನಗರದಿಂದ ಸೈಕ್ಲಿಂಗ್ ಆರಂಭ ಮಾಡಿದ್ದ ತಂಎ, ಇಂದು ಮಧ್ಯಾಹ್ನ 2 ಗಂಟೆಗೆ ತಿರುಪತಿ ತಲುಪಿದೆ ಎಂದು ಶಾಸಕರೇ ಮಾಹಿತಿ ನೀಡಿದ್ದಾರೆ.

ಬೆಂಗಳೂರು, ಜುಲೈ 10: ರಾಜಾಜಿನಗರ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಬೆಂಗಳೂರಿನಿಂದ ತಿರುಪತಿಗೆ ಸೈಕಲ್​ನಲ್ಲಿ ಪ್ರವಾಸ ಕೈಗೊಂಡಿದ್ದಾರೆ. ನಿನ್ನೆ ಬೆಳಗಿನಜಾವ 4.30ಕ್ಕೆ ಬಸವೇಶ್ವರನಗರದಿಂದ ಸೈಕ್ಲಿಂಗ್ ಆರಂಭ ಮಾಡಿದ್ದು, ಇಂದು ಮಧ್ಯಾಹ್ನ 2 ಗಂಟೆಗೆ ತಿರುಪತಿ ತಲುಪಿದ್ದಾರೆ. 10 ಜನರ ತಂಡದ ಜೊತೆ ಸುರೇಶ್ ಕುಮಾರ್ ಸೈಕಲ್​ನಲ್ಲಿ ತೆರಳಿದ್ದು, ಈ ಟೀಂ ಸತತ 3ನೇ ಬಾರಿಗೆ ತಿರುಪತಿಗೆ ಸೈಕ್ಲಿಂಗ್ ಮಾಡಿದೆ. ಬಸವೇಶ್ವರದಿಂದ ರಾಜಾಜಿನಗರ ಒಂದನೇ ಬ್ಲಾಕ್, ಯಶವಂತಪುರ, ಬಿ ಇ ಎಲ್ ವೃತ್ತ, ಅವಲಳ್ಳಿ ಅರಣ್ಯ ಪ್ರದೇಶ, ರಾಜಾನುಕುಂಟೆ, ನಾಡಪ್ರಭು ಕೆಂಪೇಗೌಡ ವಿಮಾನ ನಿಲ್ದಾಣ, ದೇವನಹಳ್ಳಿ, ವಿಜಯಪುರ, ಕೈವಾರ, ಮದನಪಲ್ಲಿ, ಪೀಲೇರು ಮಾರ್ಗವಾಗಿ ಸಾಗಿ ತಿರುಪತಿ ತಲುಪಿದ್ದು, ನಿನ್ನೆ ರಾತ್ರಿ ಮದನಪಲ್ಲಿಯಲ್ಲಿ ವಾಸ್ತವ್ಯ ಹೂಡಿದ್ದೆವು. ಒಟ್ಟು 265 km ದೂರವನ್ನು 14.10 ಸೈಕ್ಲಿಂಗ್ ಗಂಟೆ ಸಮಯದಲ್ಲಿ ಪೂರೈಸಿರೋದಾಗಿ ಶಾಸಕರು ಮಾಹಿತಿ ಹಂಚಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us