ಹೈಕಮಾಂಡ್​​ನವರನ್ನು ವಿಚಾರಿಸಿ ಅಂತ ರಾಜಣ್ಣ ಹೇಳಿದ್ದು ನಿಜ, ಅದರೆ ನಾನು ಯಾರೊಂದಿಗೂ ಮಾತಾಡಲಿಲ್ಲ: ಪರಮೇಶ್ವರ್

Updated on: Aug 12, 2025 | 11:23 AM

ರಾಜಣ್ಣ ಅವರು ತನ್ನೊಂದಿಗೆ ಮಾತಾಡಿದ್ದು ನಿಜ, ನೀವು ಪಕ್ಷದ ಹಿರಿಯರು ಮತ್ತು ಹೈಕಮಾಂಡ್ ಜೊತೆ ಉತ್ತಮ ಸಂಬಂಧವಿದೆ, ನೀವು ಕೇಳಿದರೆ ಗೊತ್ತಾಗುತ್ತದೆ ಅಂತ ಅವರು ಹೇಳಿದ್ದರು, ಅದರೆ ತಾನು ಹೈಕಮಾಂಡ್​ನ ಯಾವ ನಾಯಕನೊಂದಿಗೂ ಮಾತಾಡಲಿಲ್ಲ, ಅಷ್ಟೊತ್ತಿಗಾಗಲೇ ತುಂಬಾ ತಡವಾಗಿತ್ತು ಮತ್ತು ರಾಜಣ್ಣ ಕೂಡ ರಾಜೀನಾಮೆ ಸಲ್ಲಿಸಿಯಾಗಿತ್ತು ಎಂದು ಪರಮೇಶ್ವರ್ ಹೇಳಿದರು.

ಬೆಂಗಳೂರು, ಆಗಸ್ಟ್ 12: ಸಚಿವರಾಗಿದ್ದ ರಾಜಣ್ಣರನ್ನು (KN Rajanna) ಮಂತ್ರಿಸ್ಥಾನದಿಂದ ಕಿತ್ತುಹಾಕಿದ್ದು ಯಾಕೆ ಅಂತ ಸಂಪುಟದಲ್ಲಿ ಹಿರಿಯ ಸಚಿವರಾಗಿರುವವರಿಗೂ ಗೊತ್ತಿಲ್ಲ. ಜಿ ಪರಮೇಶ್ವರ್ ಮತ್ತು ರಾಜಣ್ಣ ಒಂದೇ ಜಿಲ್ಲೆಯವರಾದರೂ ಗೃಹ ಸಚಿವ ಮಾತ್ರ ಏನನ್ನೂ ಹೇಳಲಿಲ್ಲ. ಇದು ಹೈಕಮಾಂಡ್ ತೀರ್ಮಾನ, ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರೂ ವರಿಷ್ಠರ ತೀರ್ಮನವನ್ನು ಗೌರವಿಸುತ್ತಾರೆ ಮತ್ತು ಅದಕ್ಕೆ ಬದ್ಧರಾಗಿರುತ್ತಾರೆ ಎಂದು ಪರಮೇಶ್ವರ್ ಹೇಳಿದರು. ವಜಾ ಮಾಡಿರುವ ಕಾರಣ ಕೆಪಿಸಿಸಿ ಅಧ್ಯಕ್ಷರಿಗೆ ಗೊತ್ತಿರಬಹುದು ಇಲ್ಲವೇ ಮುಖ್ಯಮಂತ್ರಿಯವರಿಗೆ, ರಾಜಣ್ಣನರಿಗೆ ಸಹಜವಾಗೇ ಅಸಮಾಧಾನ ಇರುತ್ತದೆ, ಅದರೆ ವಜಾ ಮಾಡಿರುವ ಹಿಂದಿನ ಕಾರಣ ಬೇರೆ ಯಾರಿಗೂ ಗೊತ್ತಿಲ್ಲ ಎಂದು ಪರಮೇಶ್ವರ್ ಹೇಳಿದರು.

ಇದನ್ನೂ ಓದಿ:ಕೆಎನ್​ ರಾಜಣ್ಣ ರಾಜೀನಾಮೆ: ನಿಜವಾಯ್ತಾ ಕೋಡಿಶ್ರೀಗಳ 2 ತಿಂಗಳ ಹಿಂದಿನ ಭವಿಷ್ಯ?

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ