ಪ್ರವಾಹದಲ್ಲಿ ಸಿಲುಕಿದ ಶಾಲಾ ವಾಹನ; ಮರ ಹತ್ತಿ ಸಹಾಯಕ್ಕಾಗಿ ಅಳುತ್ತಿರುವ ಮಕ್ಕಳು
ಮಕ್ಕಳು ಸಹಾಯಕ್ಕಾಗಿ ಮರಗಳನ್ನು ಹತ್ತಿ ಜೋರಾಗಿ ಅಳುತ್ತಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವ್ಯಾನ್ ಒಳಗೆ ಸಿಲುಕಿದ್ದ ಮಕ್ಕಳು ತಪ್ಪಿಸಿಕೊಳ್ಳಲು ಹೆಣಗಾಡುತ್ತಿರುವ ಭಯಾನಕ ಕ್ಷಣಗಳನ್ನು ವಿಡಿಯೋದಲ್ಲಿ ನೋಡಬಹುದು. ಅವರಲ್ಲಿ ಕೆಲವರು ಪ್ರವಾಹದ ನೀರು ಏರುವುದರಿಂದ ತಪ್ಪಿಸಿಕೊಳ್ಳಲು ಹತ್ತಿರದ ಮರವನ್ನು ಹತ್ತಿದ್ದಾರೆ. ಸಹಾಯಕ್ಕಾಗಿ ಬೇಡಿಕೊಳ್ಳುತ್ತಿರುವುದನ್ನು ಕಾಣಬಹುದು.
ಜೈಪುರ, ಜುಲೈ 18: ರಾಜಸ್ಥಾನದ (Rajasthan Flood) ರಾಜ್ಸಮಂದ್ ಜಿಲ್ಲೆಯಲ್ಲಿ ಇಂದು ಭಾರೀ ಮಳೆಯಾಗಿದ್ದು, ಕುಂಭಾಲ್‌ಗಢ ಪ್ರದೇಶದಲ್ಲಿ ಲಖೇಲಾ ಕೆರೆಯ ದಂಡೆ ಒಡೆದ ಕಾರಣದಿಂದ ಉಂಟಾದ ಹಠಾತ್ ಪ್ರವಾಹದಲ್ಲಿ ಶಾಲಾ ವಾಹನ ಸಿಲುಕಿಕೊಂಡಿತ್ತು. ಉದಯಪುರ ರಸ್ತೆಯ ಹೋಟೆಲ್ ಲೇಕ್ ಎಲ್‌ಪಿ ಬಳಿ ಈ ಘಟನೆ ಸಂಭವಿಸಿದೆ. ಕೆರೆ ತುಂಬಿ ಹರಿಯುತ್ತಿದ್ದಂತೆ, ಇದರಲ್ಲಿ ಶಾಲಾ ವ್ಯಾನ್ ಸಿಲುಕಿಕೊಂಡಿತು. ಈ ಘಟನೆಯ ಸಮಯದಲ್ಲಿ ಶಾಲಾ ವಾಹನದಲ್ಲಿ 10 ಮಕ್ಕಳಿದ್ದರು. ಪ್ರವಾಹದಲ್ಲಿ ಸಿಲುಕುತ್ತಿದ್ದಂತೆ ಅವರಲ್ಲಿ ಇಬ್ಬರು ತಮ್ಮನ್ನು ಉಳಿಸಿಕೊಳ್ಳಲು ಹತ್ತಿರದ ಮರವನ್ನು ಹತ್ತಿ ಜೋರಾಗಿ ಅಳುತ್ತಾ ಸಹಾಯಕ್ಕೆ ಬೇಡಿಕೊಂಡರು. ಈ ಘಟನೆಯ ನಂತರ, ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆಯನ್ನು ಪ್ರಾರಂಭಿಸಿ, ಎಲ್ಲಾ ಮಕ್ಕಳು ಮತ್ತು ಶಾಲಾ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸುವಲ್ಲಿ ಯಶಸ್ವಿಯಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ

