Rajinikanth: 72ನೇ ವಸಂತಕ್ಕೆ ಕಾಲಿಟ್ಟ ರಜನಿಕಾಂತ್: ಸ್ನೇಹಿತ ರಾಜ್ ಬಹದ್ದೂರ್ ಹೇಳಿದಿಷ್ಟು
ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಇಂದು (ಡಿ. 12) 72ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ರಜನಿಕಾಂತ್ ಅವರ ಹುಟ್ಟು ಹಬ್ಬವನ್ನ ಅಭಿಮಾನಿಗಳು ವಿಶೇಷವಾಗಿ ಆಚರಿಸಿದ್ದಾರೆ.
ತಮಿಳು ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಇಂದು (ಡಿ. 12) 72ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ರಜನಿಕಾಂತ್ ಅವರ ಹುಟ್ಟು ಹಬ್ಬವನ್ನ ಅಭಿಮಾನಿಗಳು ವಿಶೇಷವಾಗಿ ಆಚರಿಸಿದ್ದಾರೆ. ಬೆಂಗಳೂರಿನಲ್ಲಿಯೂ ಫ್ಯಾನ್ಸ್ ಈ ವರ್ಷ ವಿಭಿನ್ನವಾಗಿ ರಜನಿಕಾಂತ್ ಅವರು ಬರ್ತ್ ಡೇ ಆಚರಿಸಿದ್ದಾರೆ. ಈ ಕುರಿತಾಗಿ ರಜನಿಕಾಂತ್ ಆಪ್ತ ಸ್ನೇಹಿತರಾದ ರಾಜ್ ಬಹದ್ದೂರ್ ಮಾತನಾಡಿದ್ದಾರೆ. ‘ಕಳೆದ ವರ್ಷ ನಟ ಪುನೀತ್ ರಾಜ್ಕುಮಾರ್ ನಿಧನದಿಂದಾಗಿ ರಜನಿಕಾಂತ್ ಹುಟ್ಟುಹಬ್ಬ ಆಚರಣೆ ಮಾಡಿರಲಿಲ್ಲ. ಆದರೆ ಈ ವರ್ಷ ವಿಜೃಂಭಣೆಯಿಂದ ಮಾಡುತ್ತಿದ್ದು, ಒಂದು ಸಾವಿರ ಬೈಕ್ ರ್‍ಯಾಲಿ. ಬಳಿಕ ನಾರಾಯಣ ಹೃದಯಾಲಯದಲ್ಲಿ ಉಚಿತ ತಪಾಸಣೆ ಮಾಡಲಾಗುವುದು’ ಎಂದು ಹೇಳಿದರು. ರಜನಿಕಾಂತ್ ಕುರಿತಾಗಿ ಮತ್ತೇನು ಹೇಳಿದರು ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Dec 12, 2022 07:15 PM
Latest Videos