ಗಿಲ್ಲಿ ನನಗೆ ಹೊಡೆದಾಗ ಖುಷಿ ಆಗುತ್ತಿತ್ತು, ಎಂಜಾಯ್ ಮಾಡಿದೆ: ರಕ್ಷಿತಾ ಶೆಟ್ಟಿ

Updated on: Jan 20, 2026 | 10:47 PM

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಅವರನ್ನು ಕಂಡರೆ ರಕ್ಷಿತಾ ಶೆಟ್ಟಿ ತುಂಬಾ ಇಷ್ಟಪಡುತ್ತಿದ್ದರು. ಅವರಿಬ್ಬರ ನಡುವೆ ಸ್ನೇಹ ಬೆಳೆದಿತ್ತು. ಎಷ್ಟೋ ಬಾರಿ ತಮಾಷೆಗೆ ಗಿಲ್ಲಿ ನಟ ಅವರು ರಕ್ಷಿತಾ ಶೆಟ್ಟಿಗೆ ಹೊಡೆದಿದ್ದರು. ಆ ಬಗ್ಗೆ ರಕ್ಷಿತಾ ಶೆಟ್ಟಿ ಅವರು ಮಾತನಾಡಿದ್ದಾರೆ. ವಿಡಿಯೋ ನೋಡಿ..

ಬಿಗ್ ಬಾಸ್ (BBK 12) ಮನೆಯಲ್ಲಿ ಗಿಲ್ಲಿ ನಟ ಅವರನ್ನು ಕಂಡರೆ ರಕ್ಷಿತಾ ಶೆಟ್ಟಿ ತುಂಬಾ ಇಷ್ಟಪಡುತ್ತಿದ್ದರು. ಅವರಿಬ್ಬರ ನಡುವೆ ಸ್ನೇಹ ಬೆಳೆದಿತ್ತು. ಎಷ್ಟೋ ಬಾರಿ ತಮಾಷೆಗೆ ಗಿಲ್ಲಿ ನಟ (Gilli Nata) ಅವರು ರಕ್ಷಿತಾ ಶೆಟ್ಟಿಗೆ ಹೊಡೆದಿದ್ದರು. ಒಂದು ವೇಳೆ ಆ ಜಾಗದಲ್ಲಿ ರಕ್ಷಿತಾ ಅಲ್ಲದೇ ಬೇರೆ ಯಾರಾದರೂ ಇದ್ದಿದ್ದರೆ ದೊಡ್ಡ ರಂಪಾಟ ಆಗುವ ಸಾಧ್ಯತೆ ಇರುತ್ತಿತ್ತು. ಆ ಬಗ್ಗೆ ರಕ್ಷಿತಾ ಶೆಟ್ಟಿ ಅವರು ಮಾತನಾಡಿದ್ದಾರೆ. ‘ನಾನು ಮತ್ತು ಗಿಲ್ಲಿ ಟಾಮ್ ಆ್ಯಂಡ್ ಜೆರಿ ರೀತಿ ಇದ್ದೆವು. 24 ಗಂಟೆಯಲ್ಲಿ ಅವರು ಹಲವು ಬಾರಿ ನನಗೆ ಹೊಡೆಯುತ್ತಿದ್ದರು. ಅದನ್ನೆಲ್ಲ ಬಿಗ್ ಬಾಸ್ ಕಟ್ ಮಾಡುತ್ತಾರೆ ಎಂದುಕೊಂಡಿದ್ದೆ. ಈಗ ಮೊಬೈಲ್​ನಲ್ಲಿ ನೋಡಿದೆ. ಅವರು ತಳ್ಳಿದಾಗ ನಾನು ಬಿದ್ದಿದ್ದಕ್ಕೆ ಎಷ್ಟು ನೋವಾಯಿತು ಗೊತ್ತಾ? ಅವರು ಹೊಡೆದಾಗ ನನಗೆ ಖುಷಿ ಆಗುತ್ತಿತ್ತು. ಬೇಜಾರು ಆಗುತ್ತಿರಲಿಲ್ಲ. ನಾನು ಎಂಜಾಯ್ ಮಾಡುತ್ತಿದ್ದೆ’ ಎಂದು ರಕ್ಷಿತಾ ಶೆಟ್ಟಿ (Rakshita Shetty) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More