AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಿಲ್ಲಿನ ಗಗನಾ ಅವಾಯ್ಡ್ ಮಾಡಿದ್ದು ಯಾಕೆ? ಕಾವ್ಯಾ ಹೇಳೋದು ಕೇಳಿ..

ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರು ಬಿಗ್ ಬಾಸ್ ಮನೆಯಲ್ಲಿ ಆತ್ಮೀಯರಾಗಿದ್ದರು. ಗಿಲ್ಲಿ ವಿಚಾರದಲ್ಲಿ ಕಾವ್ಯಾ ಅವರನ್ನು ಜನರು ಟ್ರೋಲ್ ಮಾಡಿದ್ದು ಕೂಡ ಇದೆ. ಈ ಮೊದಲು ನಟಿ ಗಗನಾ ಅವರು ಈ ಸಮಸ್ಯೆ ಎದುರಿಸಿದ್ದರು. ಆ ವಿಷಯದ ಬಗ್ಗೆ ಕಾವ್ಯಾ ಶೈವ ಅವರು ಪ್ರತಿಕ್ರಿಯಿಸಿದ್ದಾರೆ.

ಗಿಲ್ಲಿನ ಗಗನಾ ಅವಾಯ್ಡ್ ಮಾಡಿದ್ದು ಯಾಕೆ? ಕಾವ್ಯಾ ಹೇಳೋದು ಕೇಳಿ..
Gilli Nata, Gagana Bhari, Kavya Shaiva
Mangala RR
| Edited By: |

Updated on: Jan 20, 2026 | 10:03 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ನರ್ ಆಗಿರುವ ಗಿಲ್ಲಿ ನಟ (Gilli Nata) ಅವರ ಬಗ್ಗೆ ಎಲ್ಲ ಕಡೆ ಚರ್ಚೆ ಆಗುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ (Kavya Shaiva) ಅವರು ಕ್ಲೋಸ್ ಆಗಿದ್ದರು. ಅದರಿಂದ ಕಾವ್ಯಾ ಅವರಿಗೆ ಹಲವು ಬಾರಿ ಕಿರಿಕಿರಿ ಆಗಿದ್ದು ಕೂಡ ಉಂಟು. ಯಾವಾಗಲೂ ಗಿಲ್ಲಿ ತಮಾಷೆ ಮಾಡುತ್ತಾರೆ. ಆದರೆ ಅದು ಕೆಲವೊಮ್ಮೆ ಅತಿಯಾಗುತ್ತದೆ. ಇದರಿಂದಾಗಿ ಕಾವ್ಯಾ ಟ್ರೋಲ್ ಆಗುವ ಸನ್ನಿವೇಶ ಕೂಡ ಎದುರಾಗುತ್ತದೆ. ಈ ಮೊದಲು ಗಿಲ್ಲಿ ಜೊತೆ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದ ಗಗನಾ (Gagana Bhari) ಅವರನ್ನೂ ಜನರು ಟ್ರೋಲ್ ಮಾಡಿದ್ದರು. ಆ ಬಗ್ಗೆ ಈಗ ಕಾವ್ಯಾ ಶೈವ ಅವರು ಪ್ರತಿಕ್ರಿಯೆ ನೀಡಿದ್ದಾರೆ.

‘ಇದರ ಬಗ್ಗೆ ನಾನು ಮತ್ತು ಗಿಲ್ಲಿ ಬಿಗ್ ಬಾಸ್ ಮನೆಯೊಳಗೆ ಮಾತನಾಡಿದ್ದೆವು. ಅದು ಪ್ರಸಾರ ಆಗಿದೆಯೋ ಇಲ್ಲವೋ ಗೊತ್ತಿಲ್ಲ. ಪ್ರಾಯಶಃ ಗಗನಾ ಈಗ ಗಿಲ್ಲಿಯನ್ನು ಯಾಕೆ ಅವಾಯ್ಡ್ ಮಾಡಿರಬಹುದು? ಒಂದು ಸ್ನೇಹ ಜನರಿಗೆ ಇಷ್ಟ ಆಗಿರುತ್ತದೆ. ಅದು ಬೇರೆ ರೀತಿ ಬಿಂಬಿತ ಆಗುತ್ತಿದೆ ಎಂದಾಗ ಹುಡುಗಿಯಾಗಿ ಗಗನಾ ತನ್ನ ನಿರ್ಧಾರ ತೆಗೆದುಕೊಂಡಿದ್ದಾಳೆ ಅಂತ ಹೇಳಲು ನಾನು ಇಷ್ಟಪಡುತ್ತೇನೆ’ ಎಂದಿದ್ದಾರೆ ಕಾವ್ಯಾ ಶೈವ.

‘ಹಾಗಂತ, ನನಗೆ ನೀವು ಪದೇಪದೇ ಏನೋ ಹೇಳಿದರೆ ನಾನು ಅವಾಯ್ಡ್ ಮಾಡುತ್ತೇನೆ ಅಂತೇನಿಲ್ಲ. ನಾನು ಗಿಲ್ಲಿ ನಂಬರ್ ಬ್ಲಾಕ್ ಮಾಡುತ್ತೇನೆ ಅಂತ ಹೇಳಿದ್ದನ್ನು ಕೂಡ ಜನರು ಸೀರಿಯಸ್ ಆಗಿ ತೆಗೆದುಕೊಂಡಿದ್ದಾರೆ. ಸ್ನೇಹದಲ್ಲಿ ನಾವು ಜಗಳ ಆಡುತ್ತಿದ್ವಿ, ಇಷ್ಟಪಡುತ್ತಿದ್ವಿ. ರೇಗಿಸಿದರೆ ಬ್ಲಾಕ್ ಮಾಡುತ್ತೇನೆ ಎಂಬುದನ್ನು ನಾನು ಯಾವ ಉದ್ದೇಶದಲ್ಲಿ ಹೇಳಿದ್ದೇನೆ ಅಂತ ನಿಮಗೆ ಗೊತ್ತಿದೆ. ಅದನ್ನು ನೀವು ಸೀರಿಯಸ್ ಆಗಿ ತೆಗೆದುಕೊಂಡರೆ, ಅದಕ್ಕೆ ನಾನು ಏನು ಹೇಳಬೇಕು ಎಂಬುದು ಗೊತ್ತಿಲ್ಲ’ ಎಂದಿದ್ದಾರೆ ಕಾವ್ಯಾ.

‘ನಮ್ಮ ಸ್ನೇಹ ಬಿಗ್ ಬಾಸ್ ಮನೆ ಒಳಗೆ ಹೇಗೆ ಇತ್ತೋ ಹೊರಗಡೆ ಕೂಡ ಹಾಗೆಯೇ ಮುಂದುವರಿಯುತ್ತದೆ. ಆ ಸ್ನೇಹ ಮುರಿಯಲು ನನಗೆ ಸೂಕ್ತ ಕಾರಣಗಳು ಇಲ್ಲ. ನಾನು ಏನು ಮಾಡಿದರೂ ತಪ್ಪಾಗಿ ಕಾಣಿಸುತ್ತಿದೆ. ನಾನು ಗರಗಸದ ರೀತಿ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ. ಆದರೂ ಪರವಾಗಿಲ್ಲ. ನೆಗೆಟಿವ್ ಆಗುತ್ತದೆ ಎಂಬ ಕಾರಣಕ್ಕೆ ನಾನು ಏನನ್ನೂ ಬದಲಾಯಿಸಿಕೊಳ್ಳಲ್ಲ’ ಎಂದು ಕಾವ್ಯಾ ಶೈವ ಅವರು ಹೇಳಿದ್ದಾರೆ.

ಇದನ್ನೂ ಓದಿ: ಗಿಲ್ಲಿ ಪಕ್ಕ ರಕ್ಷಿತಾ ಅಲ್ಲ, ನಾನು ಇರಬೇಕಿತ್ತು: ಕಾವ್ಯಾ ಅಸಮಾಧಾನದ ಮಾತು

ಗಿಲ್ಲಿ ನಟ, ಕಾವ್ಯಾ ಶೈವ, ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ ಮತ್ತು ಮ್ಯೂಟೆಂಟ್ ರಘು ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ ತಲುಪಿದ್ದರು. ಕಾವ್ಯಾ ಮತ್ತು ಗಿಲ್ಲಿ ಅವರು ಫಿನಾಲೆ ತನಕ ಯಾವುದೇ ಕಿರಿಕ್ ಇಲ್ಲದೇ ಸ್ನೇಹ ಮುಂದುವರಿಸಿದ್ದನ್ನು ಕಂಡು ಅವರ ಅಭಿಮಾನಿಗಳಿಗೆ ಖುಷಿ ಆಗಿತ್ತು. ನಿಜ ಜೀವನದಲ್ಲಿಯೂ ಕಾವ್ಯಾ-ಗಿಲ್ಲಿ ಜೋಡಿ ಆಗಲಿ ಎಂಬ ಆಸೆ ಅನೇಕ ಅಭಿಮಾನಿಗಳಿಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.