ವಿವಾದದಲ್ಲಿ ರಮೋಲಾ; ಸಿನಿಮಾದಲ್ಲಿ ನಟಿಸಿ ಪ್ರಮೋಷನ್ಗೆ ಬರಲ್ಲ ಎಂದ ನಟಿ?
ನಟಿ ರಮೋಲಾ ಅವರು ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ನ ಭಾಗ ಆಗಿದ್ದರು. ಅವರು ಶೋನಲ್ಲಿ ರಕ್ಷಕ್ ಬುಲೆಟ್ಗೆ ಜೊತೆಯಾಗಿದ್ದರು. ಈ ರಿಯಾಲಿಟಿ ಶೋ ಪೂರ್ಣಗೊಂಡಿದೆ. ಈಗ ರಮೋಲಾ ಅವರ ಮೇಲೆ ಒಂದು ದೊಡ್ಡ ಆರೋಪ ಕೇಳಿ ಬಂದಿದೆ. ಆ ಬಗ್ಗೆ ಇಲ್ಲದೆ ವಿವರ.
ನಟಿ ರಮೋಲಾ ಅವರು ಈ ಮೊದಲು ‘ಕನ್ನಡತಿ’ ಹೆಸರಿನ ಧಾರಾವಾಹಿ ಮಾಡುತ್ತಿದ್ದರು. ಆ ಬಳಿಕ ಬಂದ ಸಿನಿಮಾ ಆಫರ್ಗಳಿಗಾಗಿ ಧಾರಾವಾಹಿ ತೊರೆದರು ಎನ್ನಲಾಗಿತ್ತು. ಅವರು ‘ರಿಚ್ಚಿ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಸೆಟ್ಟೇರಿ ಬಹಳ ಸಮಯ ಕಳೆದಿದೆ. ಈಗ ಚಿತ್ರದ ನಾಯಕ, ನಿರ್ದೇಶಕ ಹಾಗೂ ನಿರ್ಮಾಪಕ ರಿಚ್ಚಿ ಅವರು ಈ ಬಗ್ಗೆ ಫಿಲ್ಮ್ ಚೇಂಬರ್ಗೆ ದೂರು ನೀಡಿದ್ದಾರೆ. ‘ಸಿನಿಮಾದ ಪ್ರಮೋಷನ್ಗೆ ರಮೋಲಾ ಬರುತ್ತಿಲ್ಲ, ಅವರು ಕರೆಯನ್ನು ಸ್ವೀಕರಿಸುತ್ತಿಲ್ಲ’ ಎಂದಿದ್ದಾರೆ.
2023ರಲ್ಲಿ ರಮೋಲಾ ಈ ವಿವಾದ ಭುಗಿಲೆದ್ದಿತ್ತು. ಈ ಬಗ್ಗೆ ಟಿವಿ9 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದರು. ‘ಅಗ್ರಿಮೆಂಟ್ ಮುಗಿದು ಒಂದು ವರ್ಷವಾಗಿದೆ. ಕಳೆದ ಮೂರು ವರ್ಷದಿಂದ ಸಿನಿಮಾ ಚಿತ್ರೀಕರಣ ಮಾಡುತ್ತಲೇ ಇದ್ದಾರೆ. 6 ತಿಂಗಳಿಗೆ ಒಂದು ದಿನ ಶೂಟ್ ಮಾಡುತ್ತಾರೆ. ಕನ್ನಡದ ಆರ್ಟಿಸ್ಟ್ಗಳಿಗೆ ಟಾಂಗ್ ಕೊಡುವಂತಹ ಡೈಲಾಗ್ಗಳನ್ನು ಇಟ್ಟಿದ್ದಾರೆ. ಅದು ನನಗೂ ನೆಗೆಟಿವ್ ಆಗುತ್ತದೆ. ಪಬ್ಲಿಸಿಟಿಗಾಗಿ ಇದೆಲ್ಲ ಮಾಡ್ತಿದ್ದಾರೆ’ ಎಂದಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.