ಸುರ್ಜೇವಾಲಾ ಬೆಂಗಳೂರಲ್ಲಿದ್ದ ಸಮಯ ಒಬ್ಬೇಒಬ್ಬ ಅಧಿಕಾರಿಯನ್ನು ಭೇಟಿಯಾಗಲಿಲ್ಲ: ಚಲುವರಾಯಸ್ವಾಮಿ
ಸುರ್ಜೇವಾಲಾ ಅರೇಳು ದಿನಗಳ ಕಾಲ ಬೆಂಗಳೂರಲ್ಲಿದ್ದರು, ಅಷ್ಟೂ ದಿನವೂ ಅವರು ಕೆಪಿಸಿಸಿ ಕಚೇರಿಯಲ್ಲಿದ್ದರು ಮತ್ತು ತಮ್ಮ ಪಕ್ಷ ಪಕ್ಷದ ನಾಯಕರನ್ನು ಮಾತ್ರ ಭೇಟಿಯಾದರು. ಎಲೆಕ್ಟ್ರಾನಿಕ್ ಮಾಧ್ಯಮದವರೆಲ್ಲ ಕೆಪಿಸಿಸಿ ಕಚೇರಿ ಬಳಿಯೇ ಇದ್ದರಲ್ಲ? ಅಧಿಕಾರಿಗಳು ಅಲ್ಲಿಗೆ ಬಂದಿದ್ದರೆ ಅವರಿಗೆ ಗೊತ್ತಾಗುತ್ತಿರಲಿಲ್ಲವೇ ಎಂದು ಸಚಿವ ಚಲುವರಾಯಸ್ವಾಮಿ ಪ್ರಶ್ನಿಸಿದರು.
ಬೆಂಗಳೂರು, ಜುಲೈ 25: ನಗರದ ತಮ್ಮ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತಾಡಿದ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ, ಎಐಸಿಸಿ ಕರ್ನಾಟಕ ಉಸ್ತುವಾರಿ ರಂದೀಪ್ ಸುರ್ಜೇವಾಲಾ (Randeep Surjewala) ತಮ್ಮ ಕರ್ನಾಟಕ ಭೇಟಿಯ ಸಮಯದಲ್ಲಿ ಸರ್ಕಾರೀ ಅಧಿಕಾರಿಗಳೊಂದಿಗೆ ಸಭೆ ನಡೆಸಿದರೆಂಬ ವದಂತಿ ಸುಳ್ಳು ಎಂದರು. ಮಾಧ್ಯಮದವರಿಗೆ ಇಂಥ ಸುಳ್ಳು ಸುದ್ದಿಗಳನ್ನ ಯಾರು ನೀಡುತ್ತಾರೋ ಗೊತ್ತಾಗುತ್ತಿಲ್ಲ, ಸುರ್ಜೇವಾಲಾ ಬೆಂಗಳೂರುಗೆ ಬಂದಾಗ ಕೇವಲ ಮಂತ್ರಿಗಳು ಹಾಗೂ ಶಾಸಕರನ್ನು ಮಾತ್ರ ಭೇಟಿಯಾಗಿದ್ದಾರೆ, ಸರಕಾರ ರಚನೆಯಾದ ಬಳಿಕ ಹೈಕಮಾಂಡ್ ತಮಗೆಲ್ಲ ಒಂದಷ್ಟು ಟಾರ್ಗೆಟ್ ನೀಡಿತ್ತು, ಅವೆಲ್ಲ ಯಾವ ಹಂತದಲ್ಲಿವೆ? ಅವುಗಳ ಸ್ಟೇಟಸ್ ಏನು ಅಂತ ವಿಚಾರಿಸಲು ನಗರಕ್ಕೆ ಬಂದಿದ್ದರು, ತನ್ನ ಮತ್ತು ಬೇರೆ ಯಾವುದೇ ಇಲಾಖೆಯ ಅಧಿಕಾರಿಯನ್ನು ಅವರು ಭೇಟಿ ಮಾಡಿಲ್ಲ ಎಂದು ಚಲವರಾಯಸ್ವಾಮಿ ಹೇಳಿದರು.
ಇದನ್ನೂ ಓದಿ: ಕಾವೇರಿ ಆರತಿ ಬೇಕಂತ ಕೇಳಿದ್ದೀವಾ? ಸಚಿವ ಚಲುವರಾಯಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡ ಮಂಡ್ಯ ರೈತರು
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
