Rashmika Mandanna: ಪರ- ವಿರೋಧದ ಚರ್ಚೆಗೆ ಕಾರಣವಾದ ರಶ್ಮಿಕಾ ದಿರಿಸು; ಕಾರಣವೇನು?
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ವಿವಿಧ ಕಾರಣಗಳಿಗಾಗಿ ಸುದ್ದಿಯಾಗುತ್ತಿದ್ದಾರೆ. ಇತ್ತೀಚೆಗೆ ಅವರು ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾಗ ಧರಿಸಿದ್ದ ಉಡುಪು, ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.
ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಪ್ರಸ್ತುತ ಬಾಲಿವುಡ್ನಲ್ಲೂ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಸದ್ಯ ಬಾಲಿವುಡ್, ಟಾಲಿವುಡ್ ಮೊದಲಾದ ಚಿತ್ರರಂಗಗಳಲ್ಲಿ ಸಖತ್ ಬ್ಯುಸಿಯಾಗಿರುವ ನಟಿ ಇತ್ತೀಚೆಗೆ ಮುಂಬೈ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿನ ಅವರ ಉಡುಗೆ ಟ್ರೋಲಿಗರಿಗೆ ಆಹಾರವಾಗಿದೆ. ಥರಹೇವಾರಿ ಕಾಮೆಂಟ್ಗಳ ಮೂಲಕ ನೆಟ್ಟಿಗರು ರಶ್ಮಿಕಾರ ಕಾಲೆಳೆಯುತ್ತಿದ್ದಾರೆ. ಹಲವರು ನಟಿಯ ಬೆಂಬಲಕ್ಕೆ ನಿಂತಿದ್ದು, ಉಡುಪು ಅವರವರ ಇಷ್ಟ. ಇದನ್ನೆಲ್ಲಾ ಪ್ರಶ್ನಿಸುವುದು ನಿಲ್ಲಿಸುವುದು ಯಾವಾಗ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಚಿತ್ರಗಳ ವಿಷಯಕ್ಕೆ ಬಂದರೆ ರಶ್ಮಿಕಾ ಸದ್ಯ ‘ಪುಷ್ಪ: ದಿ ರೂಲ್’ ಚಿತ್ರೀಕರಣಕ್ಕೆ ಎದುರು ನೋಡುತ್ತಿದ್ದಾರೆ. ತೆಲುಗಿನ ‘ಆಡವಾಳ್ಳು ಮೀಕು ಜೋಹಾರ್ಲು’, ಹಿಂದಿಯ ‘ಮಿಷನ್ ಮಜ್ನು’, ‘ಗುಡ್ ಬೈ’ ಮೊದಲಾದ ಚಿತ್ರಗಳು ಅಧಿಕೃತವಾಗಿ ಘೋಷಣೆಯಾಗಿದ್ದು, ಸದ್ಯ ರಶ್ಮಿಕಾ ಬತ್ತಳಿಕೆಯಲ್ಲಿವೆ.
ರಶ್ಮಿಕಾ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದು ಹೀಗೆ:
ಇದನ್ನೂ ಓದಿ:
Rashmika Mandanna: ಬಿ-ಟೌನ್ನಲ್ಲಿ ತೀವ್ರ ಸಂಚಲನ ಸೃಷ್ಟಿಸಿದ ರಶ್ಮಿಕಾ; ಇದಕ್ಕೆ ಕಾರಣ ಒಂದೇ ಒಂದು ಭೇಟಿ!
