‘ಹಂಸಲೇಖ, ನಾನು ಗುಡ್ ಫ್ರೆಂಡ್ಸ್ ಅಲ್ಲವೇ ಅಲ್ಲ’ ಎಂದು ಹೇಳಿ ಅಚ್ಚರಿ ಮೂಡಿಸಿದ ರವಿಚಂದ್ರನ್
ಕ್ರೇಜಿಸ್ಟಾರ್ ರವಿಚಂದ್ರನ್ ತಮ್ಮ ಮತ್ತು ಖ್ಯಾತ ಸಂಗೀತ ಸಂಯೋಜಕ ಹಂಸಲೇಖ ಅವರ ಸಂಬಂಧದ ಕುರಿತು ಟಿವಿ9ನೊಂದಿಗೆ ಮಾತನಾಡಿದ್ದಾರೆ. ಈ ವೇಳೆ ನಾವೀರ್ವರೂ ಉತ್ತಮ ಗೆಳೆಯರೇ ಅಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಹಾಗಾದರೆ ಅವರೀರ್ವರ ಸಂಬಂಧ ಹೇಗಿತ್ತು? ವಿಡಿಯೊ ನೋಡಿ
ಕನ್ನಡ ಬೆಳ್ಳಿತೆರೆಯಲ್ಲಿ ತಮ್ಮ ಸೂಪರ್ ಹಿಟ್ ಕಾಂಬಿನೇಷನ್ನಿಂದ ಗಮನ ಸೆಳೆದ ಜೋಡಿಗಳಲ್ಲಿ ರವಿಚಂದ್ರನ್ ಹಾಗೂ ಹಂಸಲೇಖ ಪ್ರಮುಖರು. ದೃಶ್ಯ 2 ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ಟಿವಿ9ನೊಂದಿಗೆ ಮಾತನಾಡಿರುವ ರವಿಚಂದ್ರನ್ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ಇದೇ ವೇಳೆ ಅವರು ಹಂಸಲೇಖ ಅವರೊಂದಿಗಿನ ಸಂಬಂಧದ ಕುರಿತು ಮಾತನಾಡಿದ್ದಾರೆ. ಇಷ್ಟೆಲ್ಲಾ ಹಿಟ್ ಚಿತ್ರಗಳನ್ನು ನೀಡಿದ ಈ ಜೋಡಿಯ ನಡುವೆ ಬಹಳ ಉತ್ತಮ ಸ್ನೇಹವಿದೆ ಎಂದು ಅಭಿಮಾನಿಗಳು ಭಾವಿಸಿರುತ್ತಾರೆ. ಆದರೆ ರವಿಚಂದ್ರನ್ ನೀಡಿದ ಉತ್ತರ ಬೇರೆ. ವಾಸ್ತವವಾಗಿ ಅವರ ಮತ್ತು ಹಂಸಲೇಖ ನಡುವೆ ಸ್ನೇಹವಿಲ್ಲವಂತೆ. ‘ಮೊದಲಿನಿಂದಲೂ ನಾವು ಒಂದು ರೀತಿಯಲ್ಲಿ ಉತ್ತಮ ಕಾಂಪಿಟೇಟರ್ಸ್’ ಎನ್ನುತ್ತಾರೆ ಕ್ರೇಜಿಸ್ಟಾರ್. ರವಿಚಂದ್ರನ್ ಹೀಗೆ ಹೇಳಲು ಕಾರಣವೇನು? ಉತ್ತರವನ್ನು ಮೇಲಿನ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ಹಾಗೆಯೇ ಈ ವಿಡಿಯೊದಲ್ಲಿ ರವಿಚಂದ್ರನ್ ನಿದ್ರೆ ಏಕೆ ಮಾಡಬೇಕು? ತಾವು ದಿನಕ್ಕೆ ಎಷ್ಟು ಗಂಟೆ ನಿದ್ರಿಸುತ್ತೇನೆ ಇತ್ಯಾದಿ ಅಚ್ಚರಿಯ ಕುತೂಹಲಕರ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ. ಇಷ್ಟು ವರ್ಷವಾದರೂ ಹೊಸದೇನನ್ನಾದರೂ ಮಾಡಬೇಕು ಎಂದು ತುಡಿಯುವ ರವಿಚಂದ್ರನ್ ತುಡಿಯುವುದಕ್ಕೆ ಕಾರಣವೇನು ಎಂಬುದನ್ನೂ ಅವರು ವಿಡಿಯೊದಲ್ಲಿ ತಿಳಿಸಿಕೊಟ್ಟಿದ್ದಾರೆ. ವಿಡಿಯೊ ನೋಡಿ.
ಇದನ್ನೂ ನೋಡಿ:
ರವಿಚಂದ್ರನ್ ರಿಯಲ್ ಪ್ರೇಮಲೋಕ ಹೇಗಿತ್ತು?; ಕ್ರೇಜಿಸ್ಟಾರ್ ಹಂಚಿಕೊಂಡ್ರು ಅಚ್ಚರಿಯ ಮಾಹಿತಿ
‘ಕುಡಿಯೋ ಎಂದು ಅಂಬರೀಷ್ ಯಾವತ್ತೂ ಒತ್ತಾಯ ಮಾಡಲಿಲ್ಲ, ಅದು ದೊಡ್ಡಗುಣ’; ರವಿಚಂದ್ರನ್
(Ravichandran opens up about his and Hamsalekha friendship in TV9 special interview)