India-Pakistan War Updates; ಭಾರತಕ್ಕಾಗಿ ನಾವು ಯುದ್ಧ ಮಾಡಲು ಸಿದ್ಧ ಪ್ರಾಣ ನೀಡಲೂ ಬದ್ಧ ಎಂದ ಮಂಡ್ಯದ ಮುಸ್ಲಿಂ ಯುವಕರು

Updated on: May 10, 2025 | 3:01 PM

ಪಾಕಿಸ್ತಾನದ ಕುಕೃತ್ಯಗಳು, ಗಡಿಭಾಗದಲ್ಲಿ ಅದು ನಾಗರಿಕ ನೆಲೆಗಳ ಮೇಲೆ ನಡೆಸುತ್ತಿರುವ ಅಪ್ರಚೋದಿತ ದಾಳಿಯಿಂದ ಭಾರತೀಯರೆಲ್ಲ ಬೇಸತ್ತಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿರುವರು ಪಾಕಿಸ್ತಾನದ ಉದ್ಧಟತನ ಮತ್ತು ರಣಹೇಡಿತನದ ವಿರುದ್ಧ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಮತ್ತು ಸೇನೆ ನಡೆಸುತ್ತಿರುವ ಆಪರೇಷನ್ ಸಿಂಧೂರವನ್ನು ಎಲ್ಲ ಭಾರತೀಯರು ಪ್ರಶಂಸಿಸುತ್ತಿದ್ದಾರೆ.

ಮಂಡ್ಯ, ಮೇ 10: ಹಿಂದೂಸ್ತಾನ್ ಜಿಂದಾಬಾದ್, ಪಾಕಿಸ್ತಾನ್ ಮುರ್ದಾಬಾದ್, ಜೈ ಹಿಂದ್, ಜೈ ಭಾರತ್ ಅಂತ ಒಕ್ಕೊರಲಿನಿಂದ ಘೋಷಣೆ ಕೂಗುತ್ತಿರುವ ಮಂಡ್ಯದ ಮುಸ್ಲಿಂ ಯುವಕರು ತಾವು ದೇಶಕ್ಕಾಗಿ ಯುದ್ಧ ಮಾಡಲು, ಪ್ರಾಣ ತ್ಯಾಗ ಮಾಡಲೂ ಸಿದ್ಧ ಎಂದು ಹೇಳುತ್ತಿದ್ದಾರೆ. ನೀವು ಯಾವ ನೆಲದಲ್ಲಿ, ಯಾವ ದೇಶದಲ್ಲಿ ವಾಸವಾಗಿದ್ದೀರೋ ಅದೇ ನಿಮ್ಮ ನೆಲ, ಅದೇ ನಿಮ್ಮ ದೇಶ ಎಂದು ನಮ್ಮ ಪ್ರವಾದಿ ಮೊಹಮ್ಮದ್ (Prophet Muhammad ) ಹೇಳಿದ್ದಾರೆ, ಭಾರತ ನಮ್ಮ ದೇಶ, ಪದೇಪದೆ ನಮ್ಮ ತಂಟೆಗೆ ಬರುತ್ತಿರುವ ಪಾಕಿಸ್ತಾನಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಚೆನ್ನಾಗಿ ಪಾಠ ಕಲಿಸುತ್ತಿದ್ದಾರೆ, ಈ ಸಂದರ್ಭದಲಲ್ಲಿ ಅವರು ಏನೇ ನಿರ್ಧಾರ ತೆಗೆದುಕೊಂಡರೂ ಜೊತೆಗಿದ್ದೇವೆ ಎಂದು ಇಮ್ರಾನ್ ಖಾನ್ ಹೆಸರಿನ ಯುವಕನೊಬ್ಬ ಹೇಳುತ್ತಾರೆ.

ಇದನ್ನೂ ಓದಿ:  ಭಾರತದ ದಾಳಿಗೆ ಪಾಕಿಸ್ತಾನ್ ಸೂಪರ್ ಲೀಗ್ ತತ್ತರ; ಪಾಕ್​ನಿಂದ ಎತ್ತಂಗಡಿ 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ