ರಿಲಯನ್ಸ್ ಜಿಯೋ ಮುಂದಿನ ವರ್ಷ ಬಿಡುಗಡೆ ಮಾಡಲಿದೆ ಸ್ಮಾರ್ಟ್ ಟಿವಿ ಮತ್ತು ಟ್ಯಾಬ್, ವಾರ್ಷಿಕ ಸಭೆಯಲ್ಲಿ ಅಧಿಕೃತ ಘೋಷಣೆ ಆಗಲಿದೆ

ರಿಲಯನ್ಸ್ ಜಿಯೋ ಮುಂದಿನ ವರ್ಷ ಬಿಡುಗಡೆ ಮಾಡಲಿದೆ ಸ್ಮಾರ್ಟ್ ಟಿವಿ ಮತ್ತು ಟ್ಯಾಬ್, ವಾರ್ಷಿಕ ಸಭೆಯಲ್ಲಿ ಅಧಿಕೃತ ಘೋಷಣೆ ಆಗಲಿದೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 30, 2021 | 4:22 PM

91ಮೊಬೈಲ್ಸ್ ನಲ್ಲಿ ಪ್ರಕಟವಾಗಿರುವ ವರದಿಯೊಂದರ ಪ್ರಕಾರ ರಿಲಯನ್ಸ್ ಜಿಯೋ ತನ್ನ ಟ್ಯಾಬ್ಲೆಟ್ ಮತ್ತು ಟಿವಿಗಳನ್ನು ಮುಂದಿನ ವರ್ಷ ಲಾಂಚ್ ಮಾಡಲಿದೆ. ತಿಂಗಳು ಮತ್ತು ದಿನಾಂಕದ ಬಗ್ಗೆ ಯಾವುದೇ ನಿಖರವಾದ ಮಾಹಿತಿ ಇಲ್ಲ

ಸ್ಮಾರ್ಟ್ ಫೋನ್​ಗಳೊಂದಿಗೆ ಸ್ಮಾರ್ಟ್ ಟಿವಿ ಮತ್ತು ಟ್ಯಾಬ್​ಗಳನ್ನು ತಯಾರಿಸುವ ಕಂಪನಿಗಳಿಗೊಂದು ಎಚ್ಚರಿಕೆಯ ಗಂಟೆ. ಇತ್ತೀಚಿಗಷ್ಟೇ ಎಂಟ್ರಿ-ಹಂತದ ಜಿಯೋ ಫೋನ್ ನೆಕ್ಸ್ಟ್ ಹೆಸರಿನ ಆಂಡ್ರಾಯಿಡ್ ಫೋನ್ ಲಾಂಚ್ ಮಾಡಿದ್ದ ರಿಲಯನ್ಸ್ ಜಿಯೋ ಈಗ ಸ್ಮಾರ್ಟ್ ಟಿವಿ ಮತ್ತು ಟ್ಯಾಬ್ ಸಹ ಲಾಂಚ್ ಮಾಡಿ ತನ್ಮ ಪ್ರಾಡಕ್ಟ್ ರೇಂಜ್ ವಿಸ್ತರಿಸುವ ಹವಣಿಕೆಯಲ್ಲಿದೆ. ಭಾರತದ ಟಿವಿ ಮತ್ತು ಟ್ಯಾಬ್ಲೆಟ್ ಮಾರುಕಟ್ಟೆಯ ಎಂಟ್ರಿ ಹಂತದ ಸೆಗ್ಮೆಂಟ್ ಅನ್ನು ಟಾರ್ಗೆಟ್ ಮಾಡುವ ಯೋಚನೆ ರಿಲಯನ್ಸ್ ಸಂಸ್ಥೆಗಿದೆ. ಅದರರ್ಥ ಬಹಳ ಸರಳವಾಗಿದೆ. ಈಗಾಗಲೇ ಈ ಸೆಗ್ಮೆಂಟ್ನಲ್ಲಿ ತಮ್ಮ ಪ್ರಾಡಕ್ಟ್​ಗಳನ್ನು ಬಿಕರಿ ಮಾಡುತ್ತಿರುವ ರೆಡ್ಮಿ, ರಿಯಲ್ಮೀ, ಮೊಟೊರೊಲ ಮತ್ತು ನೊಕಿಯ ಕಂಪನಿಗಳಿಗೆ ಇದು ನೇರ ಪ್ರತಿಸ್ಪರ್ಧೆ ಒಡ್ಡಲಿದೆ.

91ಮೊಬೈಲ್ಸ್ ನಲ್ಲಿ ಪ್ರಕಟವಾಗಿರುವ ವರದಿಯೊಂದರ ಪ್ರಕಾರ ರಿಲಯನ್ಸ್ ಜಿಯೋ ತನ್ನ ಟ್ಯಾಬ್ಲೆಟ್ ಮತ್ತು ಟಿವಿಗಳನ್ನು ಮುಂದಿನ ವರ್ಷ ಲಾಂಚ್ ಮಾಡಲಿದೆ. ತಿಂಗಳು ಮತ್ತು ದಿನಾಂಕದ ಬಗ್ಗೆ ಯಾವುದೇ ನಿಖರವಾದ ಮಾಹಿತಿ ಇಲ್ಲ. ಮುಂಬರುವ ವಾರ್ಷಿಕ ಸಭೆಯಲ್ಲಿ ಕಂಪನಿಯು ಈ ಕುರಿತು ಒಂದು ನಿರ್ಧಾರ ತೆಗೆದುಕೊಳ್ಳಬಹುದು.

ನಿಮಗೆ ಗೊತ್ತಿರಬಹುದು, ಸಾಮಾನ್ಯವಾಗಿ ವಾರ್ಷಿಕ ಸಭೆಗಳಲ್ಲೇ ರಿಲಯನ್ಸ್ ಸಂಸ್ಥೆಯು ಹೊಸ ಉತ್ಪಾದನೆ ಗಳ ಬಗ್ಗೆ ಅಧಿಕೃತವಾಗಿ ಮಾಹಿತಿಯನ್ನು ಹೊರಹಾಕೋದು.

ಜಿಯೋದ ಮೊದಲ ಟೆಲಿವಿಷನ್​ಗೆ ಇನ್ನೂ ಹೆಸರಿಟ್ಟಿಲ್ಲ, ಆದರೆ ಅದಕ್ಕೆ ಜಿಯೋ ಟಿವಿ ಅಂತ ಹೆಸರಿಡಬಹುದೆಂಬ ವದಂತಿ ಇದೆ. ಈ ಟಿವಿಯಲ್ಲಿ ಪ್ರೀ-ಲೋಡೆಡ್ ಒಟಿಟಿ ಌಪ್ಗಳಿರಲಿವೆ. ಟಿವಿಯು ಆಂಡ್ರಾಯಿಡ್ ಆಧಾರವಾಗಿರುತ್ತದೆಯೋ ಅಥವಾ ಗೂಗಲ್ ಆಧಾರವಾಗಿರುತ್ತದೆಯೋ ಅನ್ನೋದು ಇದುವರೆಗೆ ಖಚಿತವಾಗಿಲ್ಲವಾದರೂ ಅದರಲ್ಲಿ ಆಂಡ್ರಾಯಿಡ್ ಫೋರ್ಕ್ ಇರೋದು ಖಚಿತ ಎಂದು ಹೇಳಲಾಗುತ್ತದೆ. ಪ್ರಗತಿಒಎಸ್ ಗಾಗಿ ರಿಲಯನ್ಸ್ ಜಿಯೋ ಈಗಾಗಲೇ ಗೂಗಲ್ ನೊಂದಿದೆ ಸಂಪರ್ಕದಲ್ಲಿದೆ.

ಪ್ರಗತಿಒಎಸ್ ಆಂಡ್ರಾಯಿಡ್ ನ ಕಸ್ಟೊಮೈಸ್ಡ್ ಆವೃತ್ತಿಯಾಗಿದ್ದು ಅದರ ಮೂಲಕವೇ ಜಿಯೋ ಫೋನ್ ನೆಕ್ಸ್ಟ್ ಕಾರ್ಯನಿರ್ವಹಿಸುತ್ತದೆ. ವರದಿ ಪ್ರಕಾರ ಜಿಯೋದ ಮೊದಲ ಟೆಲಿವಿಷನ್ ಜಿಯೋ ಫೈಬರ್ ಸಂಪರ್ಕದ ಭಾಗವಾಗಿ ಬರಲಿದ್ದು ಅದರ ಚಂದಾದಾರರಿಗಾಗಿ ಈಗಾಗಲೇ ಸೆಟ್-ಟಾಪ್ ಬಾಕ್ಸನ್ನು ಹೊಂದಿದೆ.

ಇದನ್ನೂ ಓದಿ:   Video: ಮೀಡಿಯಾಕ್ಕೆ ಬೈಟ್​ ಕೊಡುತ್ತಿದ್ದ ಟಿಎಂಸಿ ಸಂಸದನಿಗೆ ಹಿಂದಿನಿಂದ ಬಂದ ರಾಜನಾಥ್​ ಸಿಂಗ್​ ಮಾಡಿದ್ದೇನು? ಇದು ಸ್ಪೆಶಲ್​ ವಿಡಿಯೋ !