ಹೃದಯಾಘಾತಕ್ಕೂ ಮುನ್ನ ಆರೋಪಿ ಅನು ತಂದೆ ಚಂದ್ರಣ್ಣ ಕೊನೆಯ ಮಾತು

ಹೃದಯಾಘಾತಕ್ಕೂ ಮುನ್ನ ಆರೋಪಿ ಅನು ತಂದೆ ಚಂದ್ರಣ್ಣ ಕೊನೆಯ ಮಾತು

ಬಸವರಾಜ ಮುದನೂರ್, ಚಿತ್ರದುರ್ಗ
| Updated By: ಮದನ್​ ಕುಮಾರ್​

Updated on: Jun 14, 2024 | 9:16 PM

‘ನನ್ನ ಮಗ ಅಂಥವನಲ್ಲ. ಈಗ ಅವನ ಎಲ್ಲಿದ್ದಾನೆ ಅಂತಲೂ ನಮಗೆ ಗೊತ್ತಿಲ್ಲ. ಅವರನ್ನು ಕರೆದುಕೊಂಡು ಹೋಗಿದ್ದಾರೆ’ ಎಂದು ಅನು ತಂದೆ ಚಂದಣ್ಣ ಹೇಳಿದ್ದರು. ಮಗನ ಬಂಧನದಿಂದ ಅವರು ಮನನೊಂದಿದ್ದರು. ಈಗ ಹೃದಯಾಘಾತದಿಂದ ಅವರು ನಿಧನರಾಗಿದ್ದಾರೆ. ಪವಿತ್ರಾ ಗೌಡ ಹಾಗೂ ರೇಣುಕಾ ಸ್ವಾಮಿ ನಡುವಿನ ವೈಯಕ್ತಿಕ ಗಲಾಟೆಯಿಂದ ಹಲವು ಕುಟುಂಬಗಳು ಕಣ್ಣೀರು ಹಾಕುವಂತಾಗಿದೆ.

ದರ್ಶನ್​ ಸ್ನೇಹಿತೆ ಪವಿತ್ರಾ ಗೌಡ (Pavithra Gowda) ವೈಯಕ್ತಿಕ ವಿಚಾರಕ್ಕೆ ಕಾರಣವಾದ ಕಿರಿಕ್​ ಒಂದು ಕೊಲೆಯಲ್ಲಿ ಅಂತ್ಯವಾಯಿತು. ಚಿತ್ರದುರ್ಗದ ರೇಣುಕಾ ಸ್ವಾಮಿ (Renuka Swamy) ಹತ್ಯೆಯಿಂದಾಗಿ ಅನೇಕ ಕುಟುಂಬಗಳು ಕಣ್ಣೀರು ಹಾಕುತ್ತಿವೆ. ಈ ಕೃತ್ಯದಲ್ಲಿ 17ಕ್ಕೂ ಅಧಿಕ ಜನರು ಭಾಗಿ ಆಗಿರುವ ಶಂಕೆ ಇದೆ. ಆದರೆ ಈ ಬಗ್ಗೆ ಕಿಂಚಿತ್ತೂ ಮಾಹಿತಿ ಇಲ್ಲದ ಕುಟುಂಬದ ಸದಸ್ಯರು ನೋವು ಅನುಭವಿಸುತ್ತಿದ್ದಾರೆ. ರೇಣುಕಾ ಸ್ವಾಮಿ ಹತ್ಯೆಯ ಆರೋಪಿಗಳಲ್ಲಿ ಒಬ್ಬನಾದ ಅನು ಇಂದು (ಜೂನ್​ 14) ಅರೆಸ್ಟ್​ ಆಗಿದ್ದಾನೆ. ದುರಂತ ಏನೆಂದರೆ ಅನು ತಂದೆ ಚಂದ್ರಣ್ಣ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಗನ ಬಂಧನದಿಂದ ಮನನೊಂದಿದ್ದ ಚಂದ್ರಣ್ಣ ಅವರಿಗೆ ಹೃದಯಾಘಾತ (Heart Attack) ಆಗಿದೆ. ಆದರೆ ಸಾಯುವುದಕ್ಕೂ ಕೆಲವೇ ಗಂಟೆಗಳ ಮುನ್ನ ‘ಟಿವಿ9 ಕನ್ನಡ’ ಜೊತೆ ಚಂದ್ರಣ್ಣ ಮಾತನಾಡಿದ್ದರು. ‘ನನ್ನ ಮಗ ಅಂಥವನಲ್ಲ. ನಾನು ತಿಳಿದಿದ್ದನ್ನು ಹೇಳುತ್ತಿದ್ದೇನೆ. ಈ ಹಟ್ಟಿಯಲ್ಲಿ ಬೆಳೆದವನು ಅವನು. ಯಾರನ್ನು ಬೇಕಿದ್ದರೂ ಕೇಳಿ. ಏನಾದರೂ ತಪ್ಪಿದ್ದರೆ ನೀವೇ ಹೇಳಿ. ಅವನ ಈಗ ಎಲ್ಲಿ ಇದ್ದಾನೆ ಅಂತಲೂ ಗೊತ್ತಿಲ್ಲ. ಅವರನ್ನು ಕರೆದುಕೊಂಡು ಹೋಗಿದ್ದಾರೆ’ ಎಂದು ಚಂದಣ್ಣ ನೋವಿನಿಂದ ಮಾತನಾಡಿದ್ದರು. ಆದರೆ ಈಗ ಅವರ ಸಾವಿನ ಸುದ್ದಿ ಕೇಳಿಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.